ವಾಹನ ಕಳ್ಳತನ: ಐವರ ಬಂಧನ, ₹ 95 ಲಕ್ಷ ಮೌಲ್ಯದ ಸ್ವತ್ತು ವಶ

KannadaprabhaNewsNetwork |  
Published : Mar 07, 2026, 01:15 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ರಾಜ್ಯದ ವಿವಿಧ ವಾಹನಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಾರಿಹಾಳ ಪೊಲೀಸರು ಐವರು ಆರೋಪಿಗಳು ಹಾಗೂ ₹ 95 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದ ವಿವಿಧ ವಾಹನಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಾರಿಹಾಳ ಪೊಲೀಸರು ಐವರು ಆರೋಪಿಗಳು ಹಾಗೂ ₹ 95 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ ತಿಂಗಳಿನಲ್ಲಿ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ನಿಲಜಿ ಕ್ರಾಸ್ ಬಳಿಯ ಮನೆ ಮುಂದೆ ನಿಲ್ಲಿಸಿದ ಗೂಡ್ಸ್ ವಾಹನ ಕಳ್ಳತನವಾಗಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಹೊರ ಜಿಲ್ಲೆಗಳಿಂದ ಆಗಮಿಸಿ, ವಾಹನ ಕಳ್ಳತನ ಮಾಡುವುದನ್ನೇ ಕಸಬನ್ನಾಗಿಸಿಕೊಂಡ ಕಳ್ಳರ ಕುರಿತು ಖಚಿತ ಮಾಹಿತಿ ದೊರೆತಿದೆ. ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಧಾರವಾಡ ಮೂಲದ ಯುಸುಫಖಾನ ಸಿಕಂದರ ಖಾನ್ (69), ಜಾಕೀರಹುಸೇನ ಮೊಹಮ್ಮದಸಾಬ ಪರದೇವಾಲೆ(47), ವಿಜಯಪುರ ಮೂಲದ ಆಜಾದಿ ಇಬ್ರಾಹಿಮ್ ಮುತವಲ್ಲಿ (36), ತಮಿಳುನಾಡಿನ ವೆಲ್ಲೂರ ಮೂಲದ ಶಫೀಕ ಅಹಮ್ಮದ ರಫೀಕ ಅಹಮ್ಮದ(52), ದಾಂಡೇಲಿ ಮೂಲದ ಬಸೀರಹಮ್ಮದ ಅಲ್ಲಾಭಕ್ಷ ಮಕಾನದಾರ(38) ಎಂಬ ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾದ ವಾಹನ ಕಳವು ಪ್ರಕರಣಗಳಲ್ಲಿ ಕಳುವಾದ ಒಟ್ಟು ₹ 95 ಲಕ್ಷ ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎತ್ತಿನ ಬಂಡಿಗೆ ಬೈಕ್‌ ಡಿಕ್ಕಿ; ಸವಾರ ಸಾವು
ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆಬೆಳಗಾವಿ ಅಜ್ಜಿ ಬ್ರಾಂಡ್‌ ಅಂಬಾಸಿಡರ್‌