ಕನ್ನಡಪ್ರಭ ವಾರ್ತೆ ಕೆಜಿಎಫ್
ಸಿಗ್ನಲ್ ದೀಪಗಳಿವೆ ಆದರೆ ವಾಹನಗಳ ಅಡ್ಡಾದಿಡ್ಡಿ ಚಲಿಸುವುದರಿಂದ ರಸ್ತೆ ಬದಿ ನಡೆದಾಡಲು ಭಯವಾಗುತ್ತದೆ ಅದರಲ್ಲೂ ಗೀತಾ ರಸ್ತೆಯ ಜೈನ್ ಕಾಲೇಜು ಬಿಟ್ಟರಂತೂ ಗೀತಾ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಂ ಆಗಿಬಿಡುತ್ತದೆ, ವಿದ್ಯಾರ್ಥಿಗಳ ದಟ್ಟಣೆಯಿಂದ ಕಾಲೇಜು ಮುಂಭಾಗ ವಾಹನ ಸಾವರರು ಪಾರದಾಡುವುದರ ಜೊತೆಗೆ ಸಾರ್ವಜನಿಕರು ರಸ್ತೆ ದಾಟವುದು ಸವಾಲು ಎಂಬಂತಾಗಿದೆ.
ದಿನದಿಂದ ದಿನಕ್ಕೆ ನಗರದ ಜನಸಂಖ್ಯೆ ಮತ್ತು ವಾಹನಗಳ ಸಂಕ್ಯೆ ಬೆಳೆಯುತ್ತಿದೆ. ಕಿರಿದಾದ ರಸ್ತೆಗಳು ಇರುವುದರಿಂದ ಸಮಸ್ಯೆ ಹೆಚ್ಚುತ್ತಿದೆ, ಇದೆಲ್ದರ ಮಧ್ಯೆ ತಳ್ಳು ಗಾಡಿಗಳ ಪಾದಚಾರಿ ಮಾರ್ಗಗಳ ಒತ್ತುವರಿ, ಅಂಗಡಿ-ಮುಗ್ಗಟ್ಟುಗಳ ಎದುರು ಮಾರಾಟದ ವಸ್ತುಗಳ ರಾಶಿ ಎಲ್ಲವೂ ಇನ್ನಷ್ಟು ಕಿರಿಕಿರಿ ಉಂಟು ಮಾಡುತ್ತಿವೆ ಎಂದು ಪಾದಚಾರಿಗಳು ಹೇಳುತ್ತಾರೆ.ರಕ್ಷಣಾ ವೇದಿಕೆಯ ನಂಜುಡಂಪ್ಪ ಮಾತನಾಡಿ, ನಗರದ ಪ್ರಮುಖ ರಸ್ತೆಗಳಲ್ಲಿ ಅಷ್ಟೇ ಅಲ್ಲ, ಬಹುತೆಕ ಎಲ್ಲ ರಸ್ತೆಗಳಲ್ಲೂ ತಳ್ಳುವ ಗಾಡಿಗಳ ವ್ಯಾಪಾರ ಮಿತಿ ಮೀರಿದೆ, ಹೂ-ಹಣ್ಣು ಹಾಗೂ ಇತರೆ ಬೀದಿ ವ್ಯಾಪಾರಿಗಳು ಬೇರೆ ಎಲ್ಲೂ ಸೂಕ್ತ ಸ್ಥಳಾವಕಾಶ ಇಲ್ಲವೆಂದು ರಸ್ತೆಯಂಚಿನಲ್ಲೇ ವ್ಯಾಪಾರ ನಡೆಸುತ್ತಾರೆ. ಇಕ್ಕಟ್ಟಿನ ರಸ್ತೆಗಳಲ್ಲಿ ವಾಹನಗಳ ಕಿರಿಕಿರಿ ಮತ್ತು ದಟ್ಟಣೆ ಮಧ್ಯೆ ವ್ಯಾಪಾರಿಗಳಿಂದಲೂ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಖಾಸಗಿ ಬಸ್‌ಗಳು ಸೂರಜ್‌ಮಲ್ ವೃತ್ತದಲ್ಲಿ ನಿಲುಗಡೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅಂಡ್ರಸನ್ ಪೇಟೆ ಕಡೆಯಿಂದ ಬರುವ ವಾಹನ ಸಾವರರಿಗೆ ತೊಂದರೆಯಾಗಿದೆ, ರಸ್ತೆಗಳಲ್ಲೇ ನಿಲ್ಲಿಸಿಕೊಂಡು ಪ್ರಯಾಣೀಕರನ್ನು ಹತ್ತಿಸಿಕೊಳ್ಳಲು ಸಗ್ನಿಲ್‌ನಲ್ಲಿ ನಿಲುಗಡೆ ಕೊಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಕೆಜಿಎಫ್ ನಗರದಲ್ಲಿ ಇರುವುದು ಒಂದು ಸಿಗ್ನಲ್, ವಾಹನ ಸವಾರರು ಸಿಗ್ನಲ್ ಜೆಂಪ್ ಮಾಡಿದರೂ ಪೊಲೀಸರು ಕೇಳುವುದಿಲ್ಲ, ತ್ರೀಬಲ್ ರೈಡಿಂಗ್ ಹೋಗುತ್ತಿದ್ದರೂ ಪೊಲೀಸರು ಕೇಳುವುದಿಲ್ಲ, ಸಿಗ್ನಲ್ ಕಾರ‍್ಯನಿರ್ವಹಿಸುತ್ತಿರುವ ಪೊಲೀಸರು ತಾವು ಆಯಿತು, ತಮ್ಮ ಮೊಬೈಲ್ ಆಯಿತು, ಯಾರು ಎಲ್ಲಿ ಹೋದರೂ ಕೇಳುವವರು ಇಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಪೊಲೀಸ್ ಅಧಿಕಾರಿಗಳು ಸಂಚಾರ ವ್ಯವಸ್ಥೆ ಸರಿಡಿಸಲು ಕಠಿಣ ಕ್ರಮ ಕೈಗೊಳ್ಳಬೇಂದು ನವಕರವೇ ರಾಜ್ಯಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ ಒತ್ತಾಯಿಸಿದ್ದಾರೆ.ಕೆಜಿಎಫ್ ನಗರದಲ್ಲಿ ಎರಡು ಲಕ್ಷ ಜನಸಂಖ್ಯೆ ಇರುವ ನಗರದಲ್ಲಿ ವಾಹನ ಸಾವರರು ನಿಲುಗಡೆ ಮಾಡಲು ಪಾರ್ಕಿಂಗ್ ವ್ಯವಸ್ಥೆ ಇಲ್ಲ, ನಗರಸಭೆ ಬಸ್ ನಿಲ್ದಾಣ, ನಗರದ ಪ್ರಮುಖ ರಸ್ತೆಗಳ ಇಕ್ಕಡೆಗಳಲ್ಲಿ ವಾಹನಗಳ ನಿಲುಗಡೆ, ಇನ್ನೂ ಬಹುತೇಕ ಪುಟ್‌ಪಾತ್‌ಗಳ ಒತ್ತವರಿ ಇವೆಲ್ಲದರ ನಡುವೆ ಸಾರ್ವಜನಿಕರು ನಡೆದಾಡುವುದು ಎಲ್ಲಿ, ಶಾಸಕರು ಕೂಡಲೇ ಸಭೆ ಕರೆದು ಪಾರ್ಕಿಂಗ್ ಜಾಗವನ್ನು ನಿಗದಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ. ಸಿಪಿಐನ ಜ್ಯೋತಿ ಬಸು ಒತ್ತಾಯಿಸಿದ್ದಾರೆ.