ವೆಂಕಟಯ್ಯನ ಛತ್ರದಲ್ಲಿ ಚಾಮರಾಜನಗರ ಜಿಲ್ಲಾಮಟ್ಟದ ಖೊಖೊ ಹೊನಲು ಬೆಳಕಿನ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಪುರುಷರ ವಿಭಾಗದಲ್ಲಿ ವೆಂಕಟಯ್ಯನಛತ್ರ ಫ್ರೆಂಡ್ಸ್ ಕ್ಲಬ್ ಪ್ರಥಮ ಸ್ಥಾನ ಪಡೆಯಿತು.
ಚಾಮರಾಜನಗರ: ವೆಂಕಟಯ್ಯನಛತ್ರ ಸರ್ಕಾರಿ ಪ್ರೌಡಶಾಲೆ ಚಾಮರಾಜನಗರ ಜಿಲ್ಲಾ ಖೊಖೊ ಸಂಸ್ಥೆಯಿಂದ ಆಯೋಜಿಸಿದ್ದ ಚಾಮರಾಜನಗರ ಜಿಲ್ಲಾಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ವೆಂಕಟಯ್ಯನಛತ್ರ ಪ್ರೆಂಡ್ಸ್ ಕ್ಲಬ್ ಪ್ರಥಮ ಸ್ಥಾನ ಗಳಿಸಿದೆ.
೧೪ವರ್ಷ ವಯೋಮಾನದವರು ಭಾಗವಹಿಸಿ ವಿಜೇತ ತಂಡ ಸಿದ್ದಯ್ಯನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪ್ರಥಮ), ಬಸವಾಪುರ (ದ್ವಿತೀಯ) ಸ್ಥಾನ ಪಡೆಯಿತು, ಪುರುಷರ ವಿಭಾಗದಲ್ಲಿ ವೆಂಕಟಯ್ಯನಛತ್ರ ಫ್ರೆಂಡ್ಸ್ (ಪ್ರಥಮ), ಕೊಳ್ಳೇಗಾಲ ತಂಡ (ದ್ವಿತೀಯ), ವೆಂಕಟಯ್ಯನಛತ್ರ ಸರ್ಕಾರಿ ಪ್ರೌಢಶಾಲೆ (ತೃತೀಯ) ಸ್ಥಾನಗಳಿಸಿದವು. ದೊಡ್ಡಿಂದುವಾಡಿ ತಂಡ ನಾಲ್ಕನೇ ಸ್ಥಾನಗಳಿಸಿತು. ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ಜಿಲ್ಲಾ ಖೊಖೊ ಸಂಸ್ಥೆ ಅಧ್ಯಕ್ಷ ಎಚ್.ಬಿ.ಶಮಿತ್ ಕುಮಾರ್ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಖೊಖೊ ಸಂಸ್ಥೆ ಇಲ್ಲದೇ ನಮ್ಮ ಜಿಲ್ಲೆಯವರು ಬೇರೆ ಜಿಲ್ಲೆಯಲ್ಲಿ ಆಟವಾಡವ ಸ್ಥಿತಿಯಿತ್ತು. ಈಗ ನಾವೇ ಜಿಲ್ಲಾಮಟ್ಟದ ಖೊಖೊ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದು, ನಾಲ್ಕು ತಾಲೂಕಿನವರು ರಾಷ್ಟ್ರ ,ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ, ಜಿಲ್ಲೆಗೆ ಕೀರ್ತಿ ತರಬೇಕು ಎಂದರು.
ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಕ್ರೀಡಾಪಟುಗಳಿಗೆ ಶಿಸ್ತು, ಸಮಯಪ್ರಜ್ಞೆ, ತಾಳ್ಮೆ ಅಗತ್ಯ. ಸೋಲುಗೆಲುವು ಮುಖ್ಯವಲ್ಲ. ಸೋಲೆಗೆಲುವಿನ ಹಾದಿಯಾಗಿದೆ. ಜಿಲ್ಲೆಯ ಕ್ರೀಡಾಪಟುಗಳು ಎಲ್ಲ ಆಟಗಳಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಪ್ರಶಂಸಿಸಿದರು.ಚಾಮರಾಜನಗರ ಜಿಲ್ಲಾ ಖೊಖೊತರಬೇತಿದಾರರು ಎಂ,ನಟರಾಜು, ತಾಲೂಕು ಕೃಷಿ ಪತ್ತಿನ ಸಹಕಾರ ಸಂಘದ ಸೋಮಣ್ಣ, ಗ್ರಾ,ಪಂ ಉಪಾಧ್ಯಕ್ಷ ಕೃಷ್ಣ ಮೂರ್ತಿ, ಮಾರ್ಣಿಕ ಚಂದು, ನಾಗೇಂದ್ರನಾಯಕ್ ಕಿಚ್ಚಸುದೀಪ್, ಪ್ಯಾನ್ಸ್ ಅಸೋಸಿಯಷೇನ್ ಅಧ್ಯಕ್ಷ, ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ನಟರಾಜು, ರಾಜು ಹೊಸೂರು, ಸೇರಿದಂತೆ ಚಾಮರಾಜನಗರ ಜಿಲ್ಲಾ ಖೊಖೊ ಸಂಸ್ಥೆ ಪದಾಧಿಕಾರಿಗಳು ಕ್ರೀಡಾಪಟುಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.