ಹಿಂದೂ ಯಾತ್ರಿಕರಿಗೆ ರಕ್ಷಣೆ ನೀಡುವಂತೆ ರಾಷ್ಟ್ರಪತಿಗೆ ವಿಎಚ್.ಪಿ ಮನವಿ

KannadaprabhaNewsNetwork |  
Published : Jun 14, 2024, 01:11 AM IST
30 | Kannada Prabha

ಸಾರಾಂಶ

ಜೂ.9ರಂದು ಜಮ್ಮು- ಕಾಶ್ಮೀರದಲ್ಲಿ ವೈಷ್ಟೋ ದೇವಿ ಕತ್ರಾದಿಂದ ಶಿವಖೋಡಿಗೆ ಸಂಚರಿಸುತ್ತಿದ್ದ ಹಿಂದೂ ಭಕ್ತರ ಬಸ್ಸಿನ ಮೇಲೆ ಪಾಕಿಸ್ತಾನ ಪೋಷಿತ ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕರು ಕೃತ್ಯವನ್ನು ನಡೆಸಿದ್ದು. ಇದರಲ್ಲಿ 10 ನಿರ್ದೋಷಿ ಹಿಂದೂ ಯಾತ್ರಿಕರು ಮರಣ ಹೊಂದಿದ್ದು, ಸುಮಾರು ನಲವತ್ತು ಜನ ತೀವ್ರವಾಗಿ ಗಾಯಗೊಂಡಿರುತ್ತಾರೆ. ಈ ಕ್ರೂರ ಕೃತ್ಯದಿಂದ ಸಂಪೂರ್ಣ ದೇಶ ಆಘಾತಗೊಂಡಿದೆ ಮತ್ತು ತೀವ್ರ ಆಕ್ರೋಶದಲ್ಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಹಿಂದೂ ಯಾತ್ರಿಕರ ರಕ್ಷಣೆ ನೀಡುವಂತೆ ರಾಷ್ಟ್ರಪತಿಯವರಿಗೆ ನಗರದಲ್ಲಿ ವಿಎಚ್.ಪಿ ಕಾರ್ಯಕರ್ತರು ಸಿದ್ದಾರ್ಥನಗರದ ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್ ಅವರಿಗೆ ಮನವಿ ಸಲ್ಲಿಸಿದರು.

ಜೂ.9ರಂದು ಜಮ್ಮು- ಕಾಶ್ಮೀರದಲ್ಲಿ ವೈಷ್ಟೋ ದೇವಿ ಕತ್ರಾದಿಂದ ಶಿವಖೋಡಿಗೆ ಸಂಚರಿಸುತ್ತಿದ್ದ ಹಿಂದೂ ಭಕ್ತರ ಬಸ್ಸಿನ ಮೇಲೆ ಪಾಕಿಸ್ತಾನ ಪೋಷಿತ ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕರು ಕೃತ್ಯವನ್ನು ನಡೆಸಿದ್ದು. ಇದರಲ್ಲಿ 10 ನಿರ್ದೋಷಿ ಹಿಂದೂ ಯಾತ್ರಿಕರು ಮರಣ ಹೊಂದಿದ್ದು, ಸುಮಾರು ನಲವತ್ತು ಜನ ತೀವ್ರವಾಗಿ ಗಾಯಗೊಂಡಿರುತ್ತಾರೆ. ಈ ಕ್ರೂರ ಕೃತ್ಯದಿಂದ ಸಂಪೂರ್ಣ ದೇಶ ಆಘಾತಗೊಂಡಿದೆ ಮತ್ತು ತೀವ್ರ ಆಕ್ರೋಶದಲ್ಲಿದೆ.

ಜಮ್ಮು ಕಾಶ್ಮೀರವು ಪಾಕಿಸ್ತಾನ ಪೋಷಿತ ಭಯೋತ್ಪಾದನೆಯಿಂದ ಇನ್ನೂ ಮುಕ್ತವಾಗಿಲ್ಲ. 370 ವಿಧಿಯನ್ನು ರದ್ದುಪಡಿಸಿದ ನಂತರ ಒಂದು ಆಶಾದೀಪ ಬೆಳಗಿತ್ತು. ಆದರೆ ಉಗ್ರರ ಅಟ್ಟಹಾಸವು ಇನ್ನೂ ಕಡಿಮೆಯಾಗಿಲ್ಲ. ಹಿಂದೂಗಳನ್ನು ಗುರುತಿಸಿ ಅವರ ಹತ್ಯೆಗೀಡುಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದರಲ್ಲಿ ಪಾಕಿಸ್ತಾನದ ಹಸ್ತಕ್ಷೇಪ ಸ್ಪಷ್ಟವಾಗಿದೆ. ದೇಶದ ಹೊಸ ಸರ್ಕಾರದ ಪ್ರಮಾಣವಚನದ ಸಮಯದಲ್ಲಿ ಇಂತಹ ಹೇಯ ಕೃತ್ಯವನ್ನು ಮಾಡಿ ಇಸ್ಲಾಮಿಕ್ ಭಯೋತ್ಪಾದಕರು ದೇಶದ ಸ್ವಾಯತ್ತತೆಗೆ ಸವಾಲನ್ನು ನೀಡಿದಂತಾಗಿದೆ.

ವಿಶ್ವ ಹಿಂದೂ ಪರಿಷತ್ತು ಗತಿಸಿಹೋದ ಹಿಂದೂ ಯಾತ್ರಿಕರ ಕುಟುಂಬಗಳಿಗೆ ಶ್ರದ್ದಾಂಜಲಿ ಅರ್ಪಿಸುತ್ತಿದ್ದು, ಈ ಕೃತ್ಯಕ್ಕೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದೆ. ಈ ರೀತಿಯ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಯಂತ್ರಣ ಪಡೆಯಲು ತಾವು ಕೇಂದ್ರ ಸರ್ಕಾರಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಬೇಕಾಗಿ ಕೋರಿದೆ. ಇಂತಹ ಕೃತ್ಯಗಳಿಗೆ ಸಿಲುಕಿರುವ ಹಿಂದೂಗಳಿಗೆ ರಕ್ಷಣೆಯನ್ನು ಮತ್ತು ಈ ವಿಧ್ವಂಸಕ ಕೃತ್ಯಗಳಿಗೆ ಕಾರಣರಾದ ವಿದೇಶಿ ಶಕ್ತಿಗಳನ್ನು ಕಠಿಣವಾಗಿ ಶಿಕ್ಷಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡುವಂತೆ ರಾಷ್ಟ್ರಪತಿ ಅವರಲ್ಲಿ ಮನವಿ ಮಾಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮಹೇಶ್ ಕಾಮತ್, ಜಿಲ್ಲಾ ಕಾರ್ಯದರ್ಶಿ ಮಧುಶಂಕರ್, ವಿಭಾಗ ಮಾತೃ ಶಕ್ತಿ ಪ್ರಮುಖ್ ಸವಿತಾ ಘಾಟ್ಕೆ, ಉಪಾಧ್ಯಕ್ಷ ಕೆ. ಜಗದೀಶ್ ಹೆಬ್ಬಾರ್. ಅಂಬಿಕಾ, ಶೈಲಜಾ, ಧರ್ಮ ಪ್ರಸಾರ ಪ್ರಮುಖ್

ಮರಿಯಪ್ಪ, ಸೇವಾ ಪ್ರಮುಕ್ ಲೋಕೇಶ್, ಗೋ ರಕ್ಷ ಪ್ರಮುಖ್ ಶಿವರಾಜ್, ಜಿಲ್ಲಾ ಮಾತೃ ಶಕ್ತಿ ಸಾಹಸಂಯೋಜಕಿ ಜ್ಯೋತಿರವಿ, ಸುಧಾ, ಚಿದಾನಂದ್, ಸುರೇಶ, ಸಚಿನ್ ನಾಯಕ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ