ಹೂವಿನಹಡಗಲಿ: ಪಟ್ಟಣದಲ್ಲಿ ಮೊದಲ ಬಾರಿಗೆ ದಸರಾ ನವರಾತ್ರಿ ಅಂಗವಾಗಿ ಇಲ್ಲಿನ ಲೇಡಿಸ್ ಕಲ್ಚರಲ್ ಕ್ಲಬ್ ವತಿಯಿಂದ ದಾಂಡಿಯಾ ಉತ್ಸವ 2026 ಆಯೋಜಿಸಲಾಗಿತ್ತು. ಪಟ್ಟಣದ ಪಂಚಮಸಾಲಿ ಸಮುದಾಯ ಭವನದಲ್ಲಿ ನಡೆದ ದಾಂಡಿಯಾ ಉತ್ಸವದ ನೃತ್ಯಗಳಲ್ಲಿ ಮಕ್ಕಳು ಯುವತಿಯರು ಮಧ್ಯ ವಯಸ್ಸಿನ ಗೃಹಿಣಿಯರು ಸೇರಿದಂತೆ 60 ಕ್ಕೂ ಹೆಚ್ಚು ಮಹಿಳೆಯರು ಭಾಗವಸಿದ್ದು ವಿಶೇಷವಾಗಿತ್ತು.
ಲೇಡೀಸ್ ಕಲ್ಚರಲ್ ಕ್ಲಬ್ ಆಯೋಜಿಸುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಹೇಳಿದರು.
ಮೊದಲಿಗೆ ಶಕ್ತಿ ಅಧಿದೇವತೆ ದುರ್ಗಾಮಾತೆಗೆ ಎಲ್ಲರೂ ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು. ಲೇಡೀಸ್ ಕಲ್ಚರಲ್ ಕ್ಲಬ್ನ ಸಂಚಾಲಕಿ ಲಕ್ಷ್ಮೀ ಬೀರಬ್ಬಿ, ವಿ.ಬಿ. ಸಹನಾ, ಸುಷ್ಮಾ ನವೀನ್, ಪೂಜಾ ರಾಘವೇಂದ್ರ ನೇತೃತ್ವದಲ್ಲಿ ದಾಂಡಿಯಾ ಉತ್ಸವವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ಜೆಎಸ್ಎಸ್ ಸಿಬಿಎಸ್ಸಿ ಪಬ್ಲಿಕ್ ಶಾಲೆಯ ನೃತ್ಯ ಶಿಕ್ಷಕ ಸತೀಶ್ ಸತತ ಒಂದು ತಿಂಗಳ ಕಾಲ ಮಹಿಳೆಯರಿಗೆ ಸೂಕ್ತ ನೃತ್ಯ ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನೃತ್ಯ ನಿರ್ದೇಶಕ ಸತೀಶ್ ಇವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಮಹಿಳಾ ವೈದ್ಯರು, ಅಭಿಯಂತರರು, ಖಾಸಗಿ ವಲಯದ ಕಾರ್ಯಕರ್ತೆಯರು, ಗೃಹಿಣಿಯರ ಪ್ರತಿಭಾ ಪ್ರದರ್ಶನಕ್ಕೆ ದಾಂಡಿಯಾ ಉತ್ಸವವು ವೇದಿಕೆ ಒದಗಿಸಿತು.