ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಉದ್ಯೋಗ ಸಿಗುತ್ತೆ ಎಂಬ ಕಾರಣಕ್ಕೆ ಕೊಳ್ಳೇಗಾಲದಲ್ಲಿ ಇಲ್ಲದ ಅಬ್ದುಲ್ ಕಲಾಂ ಎಂಬ ನಕಲಿ ಸಂಸ್ಥೆಯ ಪದಾಧಿಕಾರಿಗಳ ಮಾತು ಕೇಳಿ ಹಾಗೂ ಚಾ.ನಗರದ ಡಿಡಿಪಿಐ ಸರ್ಕಾರಿ ಆದೇಶ ನೋಡಿ ಲಕ್ಷಾಂತರ ರು. ನೀಡಿದ ಆರವತ್ತಕ್ಕೂ ಹೆಚ್ಚು ಮಹಿಳೆಯರು ನ್ಯಾಯಕ್ಕಾಗಿ ಡಿವೈಎಸ್ಪಿ ಕಚೇರಿಯಲ್ಲಿ ಕಣ್ಣಿರಿಟ್ಟ ಘಟನೆ ಗುರುವಾರ ನಡೆದಿದೆ.ಎಸ್ಪಿ ಡಾ. ಕವಿತಾ ಅವರು ಗುರುವಾರ ಡಿವೈಎಸ್ಪಿ ಕಚೇರಿಗೆ ಬನ್ನಿ ನಿಮಗೆ ನ್ಯಾಯ ಕೊಡಿಸುತ್ತೇವೆ ಎಂಬ ಹೇಳಿದ್ದಕ್ಕೆ ಸಂತ್ರಸ್ತರು ಭೇಟಿ ನೀಡಿದ್ದಾರೆ. ವಂಚನೆಗೀಡಾಗುವಂತೆ ಮಾಡಿದ ಚಾ.ನಗರ ಡಿಡಿಪಿಐ, ಕಲಾಂ ಸಂಸ್ಥೆಯ ಶ್ರೀಕಂಠು, ಕೖಷ್ಣ, ಸತೀಶ ಇನ್ನಿತರರನ್ನು ಕರೆಸಿ ಹಣ ವಾಪಸ್ ಕೊಡಿಸಿ ಎಂದು ಆಗ್ರಹಿಸಿದರು.
ಸಂತ್ರಸ್ತೆ ಸಿದ್ದಯ್ಯನಪುರದ ರಾಧ ಮಾತನಾಡಿ, ನನ್ನ ಮಗನಿಗೆ ಕೆಲಸ ಕೊಡಿಸುತ್ತೇನೆ ಎಂದು ಅಬ್ದುಲ್ ಕಲಾಂ ಸಂಸ್ಥೆಯವರು ಡಿಡಿಪಿಐ ಆದೇಶ ತೋರಿಸಿ ಒಂದೂವರೆ ಲಕ್ಷ ರು. ಕೇಳಿದರು. ಅದನ್ನ ನಂಬಿ ನಾನು ನನ್ನ ತಾಳಿ, ಕಿವಿ ಓಲೆ, ಕಾಲಿನ ಜೈನ್ ಕಳೆದುಕೊಂಡಿದ್ದೇನೆ. ಸಾಲ ಮಾಡಿ ಹಣ ಕೊಟ್ಟೆ, ಈಗ ಹಿಂತಿರುಗಿಸುತ್ತಿಲ್ಲ. ಮಾಡಿದ ಕೆಲಸಕ್ಕೆ ಸಂಬಳ ನೀಡಿಲ್ಲ ಎಂದರು.ಎಸ್. ರಾಧ ಮಾತನಾಡಿ, ಕೆಲಸಕ್ಕೆಂದು ಕೖಷ್ಣ, ಶ್ರೀಕಂಠ ಒಂದು ಲಕ್ಷದ ಮೂವತ್ತು ಸಾವಿರ ಪಡೆದು ಮಾರೇಹಳ್ಳಿ ಸರ್ಕಾರಿ ಶಾಲೆಗೆ ಸೇರಿಸಿದರು. 10 ತಿಂಗಳಿಂದ ನನಗೆ ಸಂಬಳ, ಕೊಟ್ಟ ಹಣ ವಾಪಾಸ್ ನೀಡಿಲ್ಲ ಎಂದರು.ಹೋರಾಟಗಾರ ಅಣಗಳ್ಳಿ ಬಸವರಾಜು ಮಾತನಾಡಿ, ಕಲಾಂ ಸಂಸ್ಥೆಯವರು ಡಿಡಿಪಿಐಗೆ ಲಂಚ ನೀಡಿ ಯೋಗ, ಗಣಕಯಂತ್ರ ತರಬೇತಿಗಾಗಿ ಶಿಕ್ಷಕರನ್ನು ನೇಮಿಸಿಕೊಳ್ಳುವಲ್ಲಿ ಇಲ್ಲಿ ₹3 ಕೋಟಿಗೂ ಮೀರಿದ ಭ್ರಷ್ಟಾಚಾರ ನಡೆದಿದೆ. ಪ್ರತಿ ಫಲಾನುಭವಿಯಿಂದ ₹1 ಲಕ್ಷದಿಂದ ₹2ಲಕ್ಷತನಕ 170ಕ್ಕೂ ಅಧಿಕ ಮಂದಿಯಿಂದ ವಸೂಲಿ ಮಾಡಿದ್ದಾರೆ. ಈ ವಿಚಾರದಲ್ಲಿ ಆದೇಶ ನೀಡಿದವರು ಮೌನವಹಿಸಿದ್ದಾರೆ, ಉಸ್ತುವಾರಿ ಸಚಿವ ವೆಂಕಟೇಶ್ ಸಂತ್ರಸ್ತರ ಕಷ್ಟ ಕೇಳಿಲ್ಲ. ಅವರು ನ್ಯಾಯ ಕೊಡಿಸುವಲ್ಲಿ ಮೌನವಹಿಸಿದ್ದಾರೆ. ಶಾಸಕ ಕೖಷ್ಣಮೂರ್ತಿ ಸದನ, ಕೆಡಿಪಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದರು. ಸಚಿವರು ಮೌನವಾಗಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದರು
ಮಹಿಳಾ ಅಯೋಗದ ಅಧ್ಯಕ್ಷರಿಗೆ ದೂರು ನೀಡಿದ ಬಳಿಕ ಎಸ್ಪಿಯವರು ಗುರುವಾರ ಡಿವೈಎಸ್ಪಿ ಕಚೇರಿಗೆ ಬನ್ನಿ ಎಂದು ಹೇಳದ್ದರು. ಅದಕ್ಕೆ ಬಂದಿದ್ದೇವೆ. ನ್ಯಾಯ ಸಿಗುವವವರೆವಿಗೂ ಹೋಗಲ್ಲ. ನಮ್ಮನ್ನು ಬಂಧಿಸಿದರೂ ಜೈಲಿಗೆ ಹೋಗಲು ಸಿದ್ದ ಎಂದರು.