ಧರ್ಮದ ಹಾದಿ ಹಿಡಿದರೆ ಜಯ ಖಚಿತ

KannadaprabhaNewsNetwork |  
Published : Jan 19, 2026, 01:45 AM IST
ಪಾವಗಡ,ಪಟ್ಟಣದ ಶ್ರೀ ಶನಿಮಹಾತ್ಮ ದೇವಸ್ಥಾನ ವೃತ್ತದಲ್ಲಿ ಹಿಂದೂ ಭಗವಾ ಧ್ವಜಾರೋಹಣವನ್ನು ಪೂಜ್ಯ ಶ್ರೀ ಸರೂಪನಂದೇಶ್ವರಸ್ವಾಮೀಜಿ ನೆರೆವೇರಿಸಿದರು.ಇದೇ ವೇಳೆ ಹಿರಿಯ ಮುಖಂಡರಾದ ಡಾ.ಜಿ.ವೆಂಕಟರಾಮಯ್ಯ,ಹಾಗೂ ಅಧ್ಯಕ್ಷ ಡಾ.ಚಕ್ಕರರೆಡ್ಡಿ ಇದ್ದರು. | Kannada Prabha

ಸಾರಾಂಶ

ಧರ್ಮದ ಹಾದಿ ಹಿಡಿದರೆ ಜಯ ಖಚಿತ ಹಿಂದೂ ಧರ್ಮ ಉಳಿಸಿ ಬೆಳೆಸುವತ್ತ ನಮ್ಮ ಪ್ರಯತ್ನ ಸಾಗಬೇಕಿದೆ ಎಂದು ತಾಲೂಕು ಹಿಂದೂ ಸಮಾಜೋತ್ಸವ ಆಯೋಜನೆ ಸಮಿತಿ ಅಧ್ಯಕ್ಷ ಡಾ.ಚಕ್ಕರರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಧರ್ಮದ ಹಾದಿ ಹಿಡಿದರೆ ಜಯ ಖಚಿತ ಹಿಂದೂ ಧರ್ಮ ಉಳಿಸಿ ಬೆಳೆಸುವತ್ತ ನಮ್ಮ ಪ್ರಯತ್ನ ಸಾಗಬೇಕಿದೆ ಎಂದು ತಾಲೂಕು ಹಿಂದೂ ಸಮಾಜೋತ್ಸವ ಆಯೋಜನೆ ಸಮಿತಿ ಅಧ್ಯಕ್ಷ ಡಾ.ಚಕ್ಕರರೆಡ್ಡಿ ಹೇಳಿದರು. ಭಾನುವಾರ ಪಟ್ಡಣದ ಎಸ್ ಎಸ್ ಕೆ ಹಳೇ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಹಿಂದೂ ಧರ್ಮ ಅತ್ಯಂತ ಪ್ರಾಚೀನ ಹಾಗೂ ಪವಿತ್ರವಾದ ಧರ್ಮವಾಗಿದ್ದು, ಸತ್ಯ,ನ್ಯಾಯ,ನಿಷ್ಠೆ ಸೇರಿದಂತೆ ಮಹಾಭಾರತ ರಾಮಾಯಣದಲ್ಲಿ ಬರುವ ಎಲ್ಲ ದೇವರು ನಮಗೆ ಆರಾಧ್ಯ ದೇವರಾಗಿದ್ದಾರೆ. ಹಿಂದೂ ಧರ್ಮವನ್ನು ನಾವು ನಿಷ್ಠೆಯಿಂದ ಪ್ರತಿಪಾದಿಸುತ್ತಿದ್ದು, ಇತರೆ ಧರ್ಮದ ಬಗ್ಗೆ ಸಹ ನಾವು ಗೌರವ ಹೊಂದಿದ್ದೇವೆ. ಹೀಗಾಗಿ ಹಿಂದೂ ಧರ್ಮ ಉಳಿಯಬೇಕು. ನಾವೆಲ್ಲ ಒಂದಾಗಬೇಕು. ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹಿಂದೂ ಧರ್ಮದ ತತ್ವ ಸಿದ್ದಾಂತ ಕುರಿತು ಅನೇಕ ವಿಚಾರ ವಿವರಿಸಿದರು.

ಆರ್ ಎಸ್ ಎಸ್ ನ ಜಿಲ್ಲಾ ಉಪಾಧ್ಯಕ್ಷರಾದ ಜಯಪ್ರಕಾಶ್ ಮಾತನಾಡಿ 26 ರಂದು ಮಧ್ಯಾಹ್ನ 3ಗಂಟೆಗೆ ಪಟ್ಟಣದಲ್ಲಿರುವ ಗುರುಭವನ ದಿಂದ ಎಸ್ ಎಸ್ ಕೆ ವೃತ್ತವರೆಗೆ ಬೆಳ್ಳಿ ರಥದ ಮೂಲಕ ಹಿಂದೂ ಶೋಭಾಯಾತ್ರೆ ಕೈಗೊಳ್ಳಲಾಗುವುದು. ಸಂಜೆ ಎಸ್ ಎಸ್ ಕೆ ಬಯಲು ರಂಗ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ.8ರವರೆಗೆ ತಾಲೂಕಿನ ಅರಸೀಕೆರೆ , ಕೆ.ಟಿ. ಹಳ್ಳಿ ವೈ.ಎನ್.ಹೊಸಕೋಟೆ ವದನಕಲ್ಲು, ದೊಡ್ಡಹಳ್ಳಿ ಇನ್ನು ಮುಂತಾದ ಹಳ್ಳಿಗಳಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ರೂಪಿಸಿ ಹಿಂದೂಗಳಲ್ಲಿ ಅರಿವು ಮತ್ತು ಒಗ್ಗೂಡಿಸುವ ಕೆಲಸ ಮಾಡುತ್ತೇವೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ಹಿಂದೂ ಧರ್ಮದ ಧ್ವಜ ವೃಕ್ಷ ಮತ್ತು ಓಂ ಚಿಹ್ನೆ ಇರುವ ಧ್ವಜವನ್ನು ಮನೆಮನೆಗೂ ಹಂಚುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಎಸ್ ಎಸ್ ಕೆ ವೃತ್ತದ ಬಳಿ ಶ್ರೀ ಸರೂಪನಂದೇಶ್ವರ ಸರಸ್ವತಿ ಸ್ವಾಮೀಜಿ ಅವರು ಭಗವಾ ಧ್ವಜಾರೋಹಣ ನೆರೆವೇರಿಸಿ ಹಿಂದೂ ಧರ್ಮ ಜಾಗೃತಿ ಕುರಿತು ವಿವರಿಸಿದರು. ತಾಲೂಕಿನ ಹಿರಿಯ ಮುಖಂಡರಾದ ಡಾ.ಜಿ.ವೆಂಕಟರಾಮಯ್ಯ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ
ನರೇಗಾದಲ್ಲಿ ಏನು ಬದಲಾಗಿದೆಂದು ತಿಳಿದು ಹೋರಾಟ ಮಾಡಿ