ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಪ್ರತಿಪಕ್ಷದವರಿಗೆ ಹಾಗೂ ಕಾಂಗ್ರೆಸ್ ನ್ನು ಟೀಕಿಸುವವರಿಗೆ ಎಚ್ಚರಿಕೆ ಗಂಟೆಯಾಗಿದೆ, ಇನ್ನು ಮುಂದಾದರೂ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವುದನ್ನು ಪ್ರತಿಪಕ್ಷಗಳು ಕಲಿಯಬೇಕು. ಮಾತನಾಡುವವರ ಬಾಯಿಗೆ ಈಗ ಬೀಗ ಬಿದ್ದಿದೆ, ಪ್ರಬುದ್ಧ ಮತದಾರರು ಕಾಂಗ್ರೆಸ್ ಅನ್ನು ಹಾಗೂ ಬಡವರಿಗಾಗಿ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಪುರಸ್ಕರಿಸಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಎಲ್ಲರೂ ಸಂಭ್ರಮಾಚರಿಸಿದರು.
ವಿಎಸ್.ಎಸ್.ಎಸ್ ಅಧ್ಯಕ್ಷ ಸಚಿನ್, ಕಾಂಗ್ರೆಸ್ ಟೌನ್ ಅಧ್ಯಕ್ಷ ಅಶೋಕ್ ಕುಮಾರ್ ಗೌಡ, ಪುರಸಭಾ ಸದಸ್ಯರಾದ ಪಿ.ವಿ. ರವಿ, ಶಿವರುದ್ರಪ್ಪ, ಪುರಸಭಾ ಮಾಜಿ ಅಧ್ಯಕ್ಷ ಅಬ್ದುಲ್ ಅಜಿತ್, ಕಾಂಗ್ರೆಸ್ ಸಮಿತಿ ಪ. ಜಾತಿ ವಿಭಾಗದ ಅಧ್ಯಕ್ಷ ಪಿ. ಮಾದೇವ್, ರಂಗಸ್ವಾಮಿ, ಪುರಸಭಾ ಸದಸ್ಯರಾದ ರಾಜೇಶ್ ಸುಮಿತ್, ಪಿ.ಎಂ. ಕುಮಾರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಕಪಾಲಿ ನಾಗರಾಜು, ಆನಂದ ಇದ್ದರು.