ಧಾರವಾಡ: ಮಿಷನ್ ವಿದ್ಯಾಕಾಶಿ ಯೋಜನೆ ಪರಿಣಾಮ ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆಯು ಮಹತ್ತರ ಸಾಧನೆ ಮಾಡದೇ ಇದ್ದರೂ ತುಸು ಸುಧಾರಣೆ ಕಂಡಿದೆ. ಶೇ. 67.08ರಷ್ಟು ಪರೀಕ್ಷಾರ್ಥಿಗಳು ಪಾಸಾಗಿದ್ದು ರಾಜ್ಯದ ಪೈಕಿ ಜಿಲ್ಲೆಯು 18ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದೆ.
2024ರ ವರ್ಷದಲ್ಲಿ ಜಿಲ್ಲೆಯು ಶೇ.74.85ರಷ್ಟು ಸಾಧನೆ ಮಾಡಿದ್ದು 22ನೇ ಸ್ಥಾನದಲ್ಲಿತ್ತು. ಈ ಬಾರಿ ಒಟ್ಟಾರೆ ರಾಜ್ಯದ ಫಲಿತಾಂಶ ಶೇ. 66.14ರಷ್ಟಿದ್ದು, ಈ ಪೈಕಿ ಜಿಲ್ಲೆಯ ಫಲಿತಾಂಶ ಶೇ. 67.08ರಷ್ಟಿರುವುದೇ ಸಮಾಧಾನದ ಸಂಗತಿ. ಕಳೆದ ಮಾ. 1 ರಿಂದ ಏ.5ರ ವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ 13,334 ಬಾಲಕರು, 13,714 ಬಾಲಕಿಯರು ಸೇರಿ 27,048 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 7685 ಬಾಲಕರು, 10460 ಬಾಲಕಿಯರು ಸೇರಿದಂತೆ 18145 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಅಂಕ ಅಂಶಗಳನ್ನು ಗಮನಿಸಿದರೆ ಶೇ.57.63ರಷ್ಟು ಬಾಲಕರು, ಶೇ. 76.27ರಷ್ಟು ಬಾಲಕಿಯರು ಪಾಸಾಗುವ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಗ್ರಾಮೀಣರೇ ಮುಂದು: ಹುಬ್ಬಳ್ಳಿಯಲ್ಲಿ 3585 ವಿದ್ಯಾರ್ಥಿಗಳ ಪೈಕಿ 2754 ವಿದ್ಯಾರ್ಥಿಗಳು, ಧಾರವಾಡದಲ್ಲಿ 3636 ವಿದ್ಯಾರ್ಥಿಗಳ ಪೈಕಿ 2753, ಕಲಘಟಗಿಯಲ್ಲಿ 2432 ವಿದ್ಯಾರ್ಥಿಗಳ ಪೈಕಿ 1832, ಕುಂದಗೋಳದಲ್ಲಿ 1877 ವಿದ್ಯಾರ್ಥಿಗಳ ಪೈಕಿ 1392, ನವಲಗುಂದದಲ್ಲಿ 2387 ವಿದ್ಯಾರ್ಥಿಗಳ ಪೈಕಿ 1657, ಧಾರವಾಡ ನಗರದಲ್ಲಿ 5076 ವಿದ್ಯಾರ್ಥಿಗಳ ಪೈಕಿ 3311 ಹಾಗೂ ಹುಬ್ಬಳ್ಳಿ ನಗರದಲ್ಲಿ 8055 ವಿದ್ಯಾರ್ಥಿಗಳ ಪೈಕಿ 4446 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಜಿಲ್ಲೆಯಲ್ಲಿ ಶೇ. 75.09ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಪಾಸಾಗಿದ್ದರೆ, ಶೇ.61.79ರಷ್ಟು ನಗರ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಜಿಲ್ಲೆಯ ಆರು ಶಾಲೆಗಳು ಶೂನ್ಯ ಸಾಧನೆ ಮಾಡಿದ್ದು, 19 ಶಾಲೆಗಳು ಶೇ.100ರಷ್ಟು ಸಾಧನೆ ಮಾಡಿವೆ. ಎರಡು ಅನುದಾನಿತ ಶಾಲೆಗಳು ಹಾಗೂ ನಾಲ್ಕು ಖಾಸಗಿ ಶಾಲೆಗಳು ಶೂನ್ಯ ಸಾಧನೆ ಮಾಡಿವೆ.ವಿಶೇಷ ಎಂದರೆ ಸರ್ಕಾರಿ ಯಾವ ಶಾಲೆಯೂ ಶೂನ್ಯ ಸಾಧನೆ ಮಾಡಿಲ್ಲ. ಆದರೆ, ಎಂಟು ಶಾಲೆಗಳು ಶೇ.100ರಷ್ಟು ಸಾಧನೆ ಮಾಡಿವೆ. ಐದು ಅನುದಾನಿತ ಶಾಲೆಗಳು ಹಾಗೂ ಆರು ಖಾಸಗಿ ಶಾಲೆಗಳು ಶೇ. 100ರಷ್ಟು ಸಾಧನೆ ಮಾಡಿವೆ.ಶೂನ್ಯ ಸಾಧನೆ ಮಾಡಿದ ಶಾಲೆಗಳಿವು: ಹುಬ್ಬಳ್ಳಿಯ ನಗರ ಮಂಟೂರು ರಸ್ತೆಯಲ್ಲಿರುವ ಕೃಪನಂದನ ಶಾಲೆ, ಲಾರಿ ರೆಸಿಡೆನ್ಸಿಯಲ್ ಶಾಲೆಯ ಮೌಲಾನಾ ಹೋಮಿಯೋಪಥಿಕ್ ಸಂಸ್ಥೆ, ನವ ಅಯೋಧ್ಯಾನಗರದ ಗೌತಮ ಪ್ರೌಢಶಾಲೆ, ಹಳೇ ಹುಬ್ಬಳ್ಳಿಯ ಜೈ ಭಾರತ ಶಿಕ್ಷಣ ಸಂಸ್ಥೆ, ಹಳೇ ಹುಬ್ಬಳ್ಳಿಯ ಗುರುನಾಥ ನಗರದ ಪ್ರಿಯದರ್ಶಿನಿ ಶಾಲೆ, ಅಣ್ಣಿಗೇರಿಯ ಬಿ.ಸಿ. ದೇಶಪಾಂಡೆ ಶಾಲೆಯ ಯಾವ ವಿದ್ಯಾರ್ಥಿಗಳು ಪಾಸಾಗದೇ ಶೂನ್ಯ ಸಾಧನೆ ಮಾಡಿವೆ.
ತಾಲೂಕು ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಪಾಸಾದ ವಿದ್ಯಾರ್ಥಿಗಳು ಶೇಕಡಾವಾರುಹುಬ್ಬಳ್ಳಿ3585 2754ಶೇ.7682
ಧಾರವಾಡ 3636 2753 ಶೇ. 75.72ಕಲಘಟಗಿ 2432 1832 ಶೇ. 75.33
ಕುಂದಗೋಳ 1877 1392 ಶೇ. 74.16ನವಲಗುಂದ 2387 1657 ಶೇ.69.42
ಧಾರವಾಡ ನಗರ 5076 3311 ಶೇ. 65.23ಹುಬ್ಬಳ್ಳಿ ನಗರ 8055 4446 ಶೇ. 55.20
ಒಟ್ಟು 27048 18145 ಶೇ.67.08ಮಿಶನ್ ವಿದ್ಯಾಕಾಶಿ ಯೋಜನೆಯಂತೆ ನಡೆದ ಪ್ರಯತ್ನಗಳ ಫಲವಾಗಿ ಧಾರವಾಡ ಜಿಲ್ಲೆಯು ಈ ಬಾರಿ 22ನೇ ಸ್ಥಾನದಿಂದ 18ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಹುಬ್ಬಳ್ಳಿ ನಗರದ ಫಲಿತಾಂಶ ತೀರಾ ಕಳಪೆಯಾಗಿದ್ದು ಇದೊಂದು ಹೆಚ್ಚಿದ್ದರೆ 10ನೇ ಸ್ಥಾನದ ಆಸುಪಾಸಿನಲ್ಲಿರುತ್ತದ್ದೇವು ಎಂಬ ಬೇಸರವಿದೆ ಎಂದು ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ಹೇಳಿದ್ದಾರೆ.