ವಿದ್ಯಾರಣ್ಯಪುರಂ, ಅಂಬೇಡ್ಕರ್ ಕಾಲೋನಿಯಲ್ಲಿ ಅರಿಶಿನ, ಕುಂಕುಮ ವಿತರಿಸಿ ಜಾಗೃತಿ

KannadaprabhaNewsNetwork |  
Published : Apr 24, 2024, 02:15 AM IST
34 | Kannada Prabha

ಸಾರಾಂಶ

ನಾವು ಪ್ರತಿಯೊಂದು ಹಬ್ಬವನ್ನು ಕುಟುಂಬದ ಸದಸ್ಯರ ಜೊತೆಗೆ ಆಚರಣೆ ಮಾಡುತ್ತೇವೋ ಅದೇ ರೀತಿ ನಮ್ಮ ರಾಜ್ಯದ ಮತ್ತು ದೇಶದ ಅತಿದೊಡ್ಡ ಹಬ್ಬ ಈ ಚುನಾವಣೆ, ಹಬ್ಬವು ನಮ್ಮ ದೇಶದ ಹೆಮ್ಮೆ, ಗರ್ವವಾದ ಹಬ್ಬವಾಗಿದೆ. ಈ ಹಬ್ಬದಲ್ಲಿ ನಗರ ಮತ್ತು ಜಿಲ್ಲೆಯ ಜನರು ಭಾಗವಹಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯ ಮತದಾನ ನಡೆಸಲು ವಿಶ್ವ ಹಿಂದೂ ಪರಿಷತ್ ನಗರ ವಿಭಾಗದ ವತಿಯಿಂದ ವಿದ್ಯಾರಣ್ಯಪುರಂನ ಅಂಬೇಡ್ಕರ್ ಕಾಲೋನಿಯಲ್ಲಿ ಮನೆ ಮನೆಗೆ ತೆರಳಿ ಮಹಿಳೆಯರಿಗೆ ಅರಿಶಿಣ, ಕುಂಕುಮ ಹಾಗೂ ಕಡ್ಡಾಯ ಮತದಾನದ ಕರೆಯೋಲೆ ನೀಡಿ ಏ. 26ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಕೋರಲಾಯಿತು.

ವಿಶ್ವ ಹಿಂದೂ ಪರಿಷತ್‌ ವಿಭಾಗ ಸಂಯೋಜಕಿ ಸವಿತಾ ಘಾಟ್ಕೆ ಮಾತನಾಡಿ, ಮತ ಹಕ್ಕು ಕೇವಲ ನಮ್ಮ ಹಕ್ಕು ಮಾತ್ರವಲ್ಲ, ನಮ್ಮ ಜವಾಬ್ದಾರಿಯು ಆಯ್ಕೆಯು ಆಗಿದೆ. ಜಿಲ್ಲೆ, ದೇಶದ ಅಭಿವೃದ್ಧಿಗೆ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇದಾಗಿದೆ. ನಾವು ಪ್ರತಿಯೊಂದು ಹಬ್ಬವನ್ನು ಕುಟುಂಬದ ಸದಸ್ಯರ ಜೊತೆಗೆ ಆಚರಣೆ ಮಾಡುತ್ತೇವೋ ಅದೇ ರೀತಿ ನಮ್ಮ ರಾಜ್ಯದ ಮತ್ತು ದೇಶದ ಅತಿದೊಡ್ಡ ಹಬ್ಬ ಈ ಚುನಾವಣೆ, ಹಬ್ಬವು ನಮ್ಮ ದೇಶದ ಹೆಮ್ಮೆ, ಗರ್ವವಾದ ಹಬ್ಬವಾಗಿದೆ. ಈ ಹಬ್ಬದಲ್ಲಿ ನಗರ ಮತ್ತು ಜಿಲ್ಲೆಯ ಜನರು ಭಾಗವಹಿಸಬೇಕು ಎಂದರು.

ಪರಿಷತ್ ನ ಸಹ ಕಾರ್ಯದರ್ಶಿ ಜಯಶ್ರೀ ಶಿವರಾಂ, ಸಹ ಕಾರ್ಯದರ್ಶಿ ಪುನೀತ್, ಸೇವಾ ಪ್ರಮುಖ ಸರಸ್ವತಿ ಹಲಸಗಿ, ಪ್ರಖಂಡ ಸಂಯೋಜಕಿ ರೂಪ, ಭಾಗ್ಯ, ಲಲಿತಾಂಬ, ಸರಸ್ವತಿ ಪ್ರಸಾದ್ ಭಾಗವಹಿಸಿ ಮಹಿಳೆಯರಿಗೆ ಬಾಗೀನ ನೀಡಿ, ಕಡ್ಡಾಯ ಮತದಾನದ ಜಾಗೃತಿ ಮೂಡಿಸಿದರು.ಇಂದು ಮತದಾನ ಜಾಗೃತಿ ಅಭಿಯಾನ

ಮೈಸೂರು:

ವಿಜಯನಗರದ 1ನೇ ಹಂತದಲ್ಲಿರುವ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ನಲ್ಲಿ ಏ. 24ರ ಬುಧವಾರ ಬೆಳಗ್ಗೆ 11ಕ್ಕೆ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಆಯೋಜಿಸಿದೆ.ಮುಖ್ಯಅತಿಥಿಯಾಗಿ ವಿಶ್ರಾಂತ ಕುಲಪತಿ ಡಾ.ಜೆ. ಶಶಿಧರ್ ಪ್ರಸಾದ್, ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಶಿವಸುಂದರ್ ಸತ್ಯೇಂದ್ರ, ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಮಾನಸ, ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ನ ಪ್ರಾಂಶುಪಾಲ ವೆಂಕಟೇಶ್, ಅಲಿಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ನಿರ್ದೇಶಕ ಡಾ. ನಾಗರಾಜ ವಿ. ಬೈರಿ, ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಜಿಲ್ಲಾ ರಾಜ್ಯಪಾಲರದ ಬಾಲಕೃಷ್ಣ ರಾಜು, ಒಂದನೇ ರಾಜ್ಯಪಾಲ ವೆಂಕಟೇಶ್, ಎರಡನೇ ರಾಜ್ಯಪಾಲರಾದ ಮಹಾಬಲ ಬೈರಿ, ಮೂರನೇ ರಾಜ್ಯಪಾಲ ಎಂ.ಎಸ್. ಸಂತೋಷ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಎನ್. ಗಂಗಾಧರಪ್ಪ, ಜಿಲ್ಲಾ ಕೋಶಾಧ್ಯಕ್ಷ ಕೃಷ್ಣ ಜಿ. ರಾವ್, ಜಿಲ್ಲಾ ಪಿಆರ್.ಒ ಎನ್. ಬೆಟ್ಟೆಗೌಡ ಭಾಗವಹಿಸುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!