ಕೃಷ್ಣ ಎನ್. ಲಮಾಣಿ
ಆಗಿನ ಬಳ್ಳಾರಿ ಜಿಲ್ಲೆ ಈಗಿನ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗ್ರಾಮಗಳಾಗಿರುವ ಗಾದಿಗನೂರು ಹಾಗೂ ಭುವನಹಳ್ಳಿ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದರು. ಗಾದಿಗನೂರು ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸಲು ಕೋಟ್ಯಂತರ ರು. ಅನುದಾನ ಒದಗಿಸಿದರು. ಭುವನಹಳ್ಳಿ ಗ್ರಾಮವನ್ನು ದತ್ತು ಸ್ವೀಕಾರ ಮಾಡಿ, ಈ ಗ್ರಾಮದ ಶಾಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ನೀಡಿದರು. ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ಎಂ.ವೈ. ಘೋರ್ಪಡೆ ಅವರ ಒತ್ತಾಸೆ ಮೇರೆಗೆ ಈ ಗ್ರಾಮಗಳ ಅಭಿವೃದ್ಧಿ ಕೈಗೊಂಡರು. ಗಾದಿಗನೂರು ಗ್ರಾಮದ ಮಾದರಿಯಲ್ಲೇ ಹಳ್ಳಿಗಳ ಉದ್ಧಾರಕ್ಕಾಗಿ ಇಡೀ ರಾಜ್ಯಾದ್ಯಂತ ಗ್ರಾಮಗಳ ಅಭಿವೃದ್ಧಿಗೆ ಅನುದಾನ ಕೂಡ ಒದಗಿಸಿದರು. ಗಾದಿಗನೂರು ಸ್ವಚ್ಛ ಗ್ರಾಮ ಪರಿಕಲ್ಪನೆಯ ಪೈಲೆಟ್ ಯೋಜನೆ ಆಗಿತ್ತು ಎಂದು ಹೇಳುತ್ತಾರೆ ಮಾಜಿ ಜಿಪಂ ಸದಸ್ಯ ಕೆ.ಎಂ. ಹಾಲಪ್ಪ.
ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಆಡಳಿತಾವಧಿಯಲ್ಲಿ ಗಾದಿಗನೂರು ಹಾಗೂ ಭುವನಹಳ್ಳಿ ಗ್ರಾಮಗಳಿಗೆ ಅವರ ಸಚಿವ ಸಂಪುಟದ ಸಚಿವರೂ ಆಗಮಿಸಿ ತಮ್ಮ ಇಲಾಖೆಗಳ ಅನುದಾನ ಒದಗಿಸಿದ್ದರು. ಹಾಗಾಗಿ ಈ ಗ್ರಾಮಗಳು ಭಾರೀ ಗಮನ ಸೆಳೆದಿದ್ದವು.ವಿಜಯನಗರ ಕಾಲೇಜಿಗೆ ಭೇಟಿ
ಕನ್ನಡ ವಿವಿಗೆ ಅನುದಾನ
ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ಭಾಗದಲ್ಲಿ ಹೇರಳ ಖನಿಜ ಸಂಪತ್ತು ದೊರೆಯುವುದನ್ನು ಮನಗಂಡಿದ್ದ ಅವರು ವೈಜ್ಞಾನಿಕ ಗಣಿಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದರು. ಅವರ ಕಾಲಾವಧಿಯಲ್ಲಿ ಹಲವು ಗಣಿ ಕಂಪನಿಗಳಿಗೆ ಪರವಾನಗಿ ಕೂಡ ದೊರೆಯಿತು. ಇದರ ಭಾಗವಾಗಿ ಈ ಭಾಗದಲ್ಲಿ ಮೆದುಕಬ್ಬಿಣ, ಉಕ್ಕಿನ ಕಾರ್ಖಾನೆಗಳ ಸ್ಥಾಪನೆ ನಡೆಯಿತು.ಹಳ್ಳಿಗಳ ಉದ್ಧಾರ
ಎಸ್.ಎಂ. ಕೃಷ್ಣ ಅವರು ಗಾದಿಗನೂರು ಹಾಗೂ ಭುವನಹಳ್ಳಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಹಳ್ಳಿಗಳ ಉದ್ಧಾರಕ್ಕಾಗಿ ಒತ್ತು ನೀಡಿದರು. ಈ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದರು.ಕೆ.ಎಂ. ಹಾಲಪ್ಪ, ಜಿಪಂ ಮಾಜಿ ಸದಸ್ಯರು. ಗಾದಿಗನೂರು.