ವಿಜಯಪುರ ಜಿಲ್ಲೆ ಯಾವ ಕ್ಷೇತ್ರದಲ್ಲು ಕಡಿಮೆ ಇಲ್ಲ

KannadaprabhaNewsNetwork | Published : Mar 3, 2024 1:33 AM

ಸಾರಾಂಶ

ಇಂಡಿ: ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಇದರ ಹಿಂದೆ ಶಿಕ್ಷಕರ ಪರಿಶ್ರಮ ಇದೆ. ವಿಜಯಪುರ ಜಿಲ್ಲೆ ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ, ನಾಡಿಗೆ ದಾರ್ಶನಿಕರನ್ನು ನೀಡಿದ ಜಿಲ್ಲೆಯಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ:

ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಇದರ ಹಿಂದೆ ಶಿಕ್ಷಕರ ಪರಿಶ್ರಮ ಇದೆ. ವಿಜಯಪುರ ಜಿಲ್ಲೆ ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ, ನಾಡಿಗೆ ದಾರ್ಶನಿಕರನ್ನು ನೀಡಿದ ಜಿಲ್ಲೆಯಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಇಂಡಿ ತಾಲೂಕಾ ಸರಕಾರಿ ಪ್ರಾಥಮಿಕ ಸರಕಾರಿ ಪತ್ತಿನ ಸಂಘದ ಶತಮಾನೋತ್ಸವ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ಕಾರ್ಯಾಲಯ ಕಟ್ಟಡದ ಉದ್ಘಾಟಿಸಿ ಮಾತನಾಡಿದರು. ವಿಜಯಪುರ ಜಿಲ್ಲೆಗೆ ನೀರು ಕೊಟ್ಟವರಿಗೆ ಬೆಳ್ಳಿ ಪಂಪಸೆಟ್‌ ನೀಡಿದ್ದು, ಪ್ರಧಾನಿ ಇಂದಿರಾ ಗಾಂಧಿಗೆ ಬಂಗಾರದ ತುಲಾಬಾರ ಮಾಡಿದ್ದು ವಿಜಯಪುರ ಜಿಲ್ಲೆ. ತ್ಯಾಗಕ್ಕೆ ಇನ್ನೊಂದು ಹೆಸರೇ ವಿಜಯಪುರ ಜಿಲ್ಲೆ ಎಂದು ಹೇಳಿದರು.₹10 ಸಾವಿರ ಕೋಟಿಯನ್ನು ಶಿಕ್ಷಕರಿಗೆ ಶೇ.30 ರಷ್ಟು ವೇತನದಲ್ಲಿ ಮಧ್ಯಂತರ ಪರಿಹಾರ ಯಾರಾದರೂ ನೀಡಿದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ. ನೌಕರರ ಸಂಘ ತಮ್ಮ ಬೇಡಿಕೆಗಾಗಿ ಹೋರಾಟ ನಡೆಸಿದ್ದು, ಹೋರಾಟಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮವಾಗಿ ಸ್ಪಂಧಿಸಲಿದ್ದಾರೆ. ಮುಂದಿನ ದಿನದಲ್ಲಿ ಶಿಕ್ಷಕರ ಸಂಘಕ್ಕೆ ಕೋಣೆಗಳ ನಿರ್ಮಾಣಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರು.ಎಐಪಿಟಿಎಫ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ, ಪ್ರಾಶಾಶಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಪ್ರೊ.ಮಂಜುನಾಥ ಜುನಗೊಂಡ ಮಾತನಾಡಿದರು. ಅಮೃತಾನಂದ ಶ್ರೀಆಶೀರ್ವಚನ ನೀಡಿದರು. ಪಿ.ಎಸ್‌.ಚಾಂದಕವಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌.ವಿ.ಹರಳಯ್ಯ, ಅಲ್ಲಾಭಕ್ಷ ವಾಲಿಕಾರ, ಎಂ.ಎಂ.ವಾಲಿಕಾರ, ಅರ್ಜುನ ಲಮಾಣಿ, ಹಣಮಂತ ಕೊಣದಿ, ಟಿ.ಕೆ.ಜಂಬಗಿ, ಈರಪ್ಪ ತೇಲಿ, ಅಶೋಕ ಚನಬಸುಗೊಳ, ಜಯಶ್ರೀ ಬೆಣ್ಣಿ, ನೀಲಾ ಇಂಗಳೆ, ಬಿಇಒ ಟಿ.ಎಸ್‌.ಆಲಗೂರ, ಎ.ಎಸ್‌.ಲಾಳಸೇರಿ, ಎಸ್‌.ಆರ್‌.ನಡಗಡ್ಡಿ, ಶ್ರೀಮಂತ ಇಂಡಿ, ಡಿ.ಜಿ.ರಾಠೋಡ, ಎಂ.ಎಂ.ನೇದಲಗಿ, ಪಿ.ಎ.ಎಲಿಗಾರ, ಕಾಂತು ಇಂಡಿ, ಕಬೂಲ ಕೊಕಟನೂರ, ವಿ.ಜಿ.ಕಲ್ಮನಿ, ರವೀಂದ್ರ ಆಳೂರ ಸೇರಿದಂತೆ ಇತರರು ಭಾಗವಹಿಸಿದ್ದರು.ಉತ್ತಮ ಶಿಕ್ಷಕರಿಗೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಹಿರಿಯ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಧನರಾಜ ಮುಜಗೊಂಡ ನಿರೂಪಿಸಿ, ವಂದಿಸಿದರು.ಕೋಟ್

ಸಿದ್ದೇಶ್ವರ ಶ್ರೀಗಳ ನಡೆ, ನುಡಿ, ಅವರ ಬದುಕು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಅವರ ಹೆಸರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಿದ್ದೇಶ್ವರ ಶ್ರೀಗಳಿಗೆ ವಯಕ್ತಿವಾಗಿ ತಮ್ಮ ಹೆಸರಿನಲ್ಲಿ ಯಾವುದೇ ಗುಡಿ, ಸ್ಮಾರಕಗಳು ಆಗಬಾರದು ಎಂಬ ಆಸೆ ಇತ್ತು. ಆದರೆ ಅವರ ಹೆಸರು ಸೂರ್ಯ, ಚಂದ್ರ ಇರುವವರೆಗೆ ಪ್ರಜ್ವಲಿಸಬೇಕು. ಹೀಗಾಗಿ, ಪುಣ್ಯದ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುವುದು ಅನಿವಾರ್ಯ.

ಯಶವಂತರಾಯಗೌಡ ಪಾಟೀಲ, ಶಾಸಕ

Share this article