ಕನ್ನಡಪ್ರಭ ವಾರ್ತೆ ಶಿಕಾರಿಪುರ
ಗುರುವಾರ ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗ್ರಾಮೀಣ ಪ್ರದೇಶಕ್ಕೆ ಸಂಚರಿಸುವ ನೂತನ ಬಸ್ ಗಳಿಗೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ಗ್ರಾಮೀಣ ಪ್ರದೇಶಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸರ್ಕಾರಿ ಬಸ್ ಸಂಚಾರದ ಹಲವು ದಿನದ ಬೇಡಿಕೆಗೆ ಶಿವಮೊಗ್ಗದ ಹಿರಿಯ ಅಧಿಕಾರಿಗಳ ಮೂಲಕ ಸಮೀಕ್ಷೆ ನಡೆಸಿ ಅಂದಾಜು 30 ಬಸ್ ಅಗತ್ಯವಿದೆ ಎಂದು ಸಂಸದ ರಾಘವೇಂದ್ರ ಹಾಗೂ ತಾವು ಪ್ರತ್ಯೇಕವಾಗಿ 2-3 ಬಾರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರವರನ್ನು ಖುದ್ದು ಬೇಟಿ ಮಾಡಿ ಒತ್ತಾಯಿಸಿದ್ದಾಗಿ ತಿಳಿಸಿದ ಅವರು, ಈ ಬಗ್ಗೆ ಸಚಿವರು ಸ್ಪಂದಿಸಿ ಬಸ್ ಸಂಚಾರ ಆರಂಭಿಸುವ ಭರವಸೆ ನೀಡಿದ್ದರು. ಇದೀಗ 5 ಬಸ್ ಸಂಚಾರವನ್ನು ಆರಂಭಿಸಿದ್ದು, ಈ ದಿಸೆಯಲ್ಲಿ ಸಾರಿಗೆ ಸಚಿವರಿಗೆ ತಾಲೂಕಿನ ಮಹಿಳೆಯರು,ಶಾಲಾ ಕಾಲೇಜು ವಿದ್ಯಾರ್ಥಿಗಳ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹುಟ್ಟುಹಬ್ಬದ ಸಂದರ್ಘದ ಅಂಗವಾಗಿ ಬಸ್ ಬಿಡುಗಡೆಗೆ ಸಾರಿಗೆ ಸಚಿವರು ಸ್ಪಂದಿಸಿದ್ದು, ಇದರೊಂದಿಗೆ ಉಳಿದ 25 ಬಸ್ ಸಂಚಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದ ಅವರು ಬಸ್ ಸಂಚಾರವನ್ನು ಶಾಲಾಕಾಲೇಜು ವೇಳೆಗೆ ಹೊಂದಿಸಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಈ ದಿಸೆಯಲ್ಲಿ ಸುಗಮ ಸಂಚಾರಕ್ಕೆ ಖಾಸಗಿ ಬಸ್ ಮಾಲೀಕರು ಸಹಕರಿಸುವಂತೆ ಮನವಿ ಮಾಡಿದರು.