ಗ್ರಾಮದ ಅಭಿವೃದ್ಧಿಯೇ ಮೊದಲ ಆದ್ಯತೆ: ಅಧ್ಯಕ್ಷ ರಾಜು

KannadaprabhaNewsNetwork |  
Published : May 04, 2025, 01:31 AM IST
3ಕೆಎಂಎನ್ ಡಿ12 | Kannada Prabha

ಸಾರಾಂಶ

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳನ್ನು ತಿಳಿದು ಅದನ್ನು ಸರಿಪಡಿಸಿ ಅಭಿವೃದ್ಧಿಗೆ ಮೊದಲು ಆದ್ಯತೆ ನೀಡಲಾಗುವುದು. ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ ಜನರು, ಸದಸ್ಯರಿಗೆ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇವರ ಸೂಚನೆ ಸಹಾಯ ಪಡೆದು ಪಂಚಾಯತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ.

ಕನ್ನಡಪ್ರಭ ವಾರ್ತೆ ಹಲಗೂರು

ತೊರೆಕಾಡನಹಳ್ಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಟಿ.ಪಿ.ರಾಜು ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಕೆ.ಸಿ.ಗೌಡ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಟಿ.ಪಿ.ರಾಜು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳಾದ ಕೃಷಿ ಇಲಾಖೆ ಅಧಿಕಾರಿ ದೀಪಕ್ ಟಿ.ಪಿ.ರಾಜು ಆಯ್ಕೆಯನ್ನು ಘೋಷಣೆ ಮಾಡಿದರು.

ನಂತರ ಸದಸ್ಯರು ಹಾಗೂ ಅಧ್ಯಕ್ಷರ ಅಭಿಮಾನಿಗಳು ಮತ್ತು ಬಂಧು-ಬಳಗದವರು ಮೈಸೂರ್ ಪೇಟ ಹಾಕಿ ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಅಭಿನಂದನೆ ಸ್ವೀಕರಿಸಿದ ರಾಜು ಮಾತನಾಡಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳನ್ನು ತಿಳಿದು ಅದನ್ನು ಸರಿಪಡಿಸಿ ಅಭಿವೃದ್ಧಿಗೆ ಮೊದಲು ಆದ್ಯತೆ ನೀಡುವುದಾಗಿ ಹೇಳಿದರು.

ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ ಜನರು, ಸದಸ್ಯರಿಗೆ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇವರ ಸೂಚನೆ ಸಹಾಯ ಪಡೆದು ಪಂಚಾಯತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದರು.

ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಸಾದ್, ಮಾಜಿ ಅಧ್ಯಕ್ಷ ಕೆ.ಸಿ.ಗೌಡ, ಹೊಂಬಾಳೆಯ ಎಂ.ಪಿ.ನಾಗೇಂದ್ರ, ಅನಿತಾ, ಪದ್ಮ, ರಕ್ಷಿತಾ, ಸುಮಲತಾ,ರವಿ, ಮುಖಂಡರಾದ ಶಿವರಾಜು,ನಾಗರಾಜು, ಬಿ.ಡಿ.ರಾಜು, ಕಾಂತರಾಜು, ಡಿ. ಪುಟ್ಟುದ್ದಾಸೇಗೌಡ, ರಾಜೇಶ, ಕೆ.ಪಿ. ಪ್ರಕಾಶ್, ರಾಮಚಂದ್ರ, ಟಿ.ಆರ್. ವಾಣಿಶ್ರೀ, ಟಿ.ಆರ್.ಚಂದ್ರುಶ್ರೀ, ಸಿದ್ದಾಚಾರಿ, ಕೃಷ್ಣ, ಸುರೇಶ್, ಮೂರ್ತಿ, ತಮ್ಮಣ್ಣೇಗೌಡ ಸೇರಿದಂತೆ ಇತರರು ಇದ್ದರು.ವಿದ್ಯುತ್ ತಂತಿ ಮೇಲೆ ಬಿದ್ದ ಮರದ ಕೊಂಬೆ, ತಪ್ಪಿದ ಅನಾಹುತ

ಹಲಗೂರು: ಹಲಗೂರು ಸೇರಿದಂತೆ ಹೋಬಳಿಯಾದಂತ ಶುಕ್ರವಾರ ರಾತ್ರಿ ಭಾರೀ ಬಿರುಗಾಳಿಯಿಂದಾಗಿ ಸಮೀಪದ ಗೊಲ್ಲರಹಳ್ಳಿ ಪುಟ್ಟೇಗೌಡರ ಮನೆ ಮುಂಭಾಗವಿದ್ದ ಅರಳಿ ಮರದ ಕೊಂಬೆ ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದೆ.

ಘಟನೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲವಾದರೂ ಮನೆ ಮುಂದೆ ಇರುವ ಮರ ಬಾರಿ ಪುರಾತನವಾಗಿದೆ. ಅದನ್ನು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಿದರೆ ಮುಂದಿನ ದಿನಗಳಲ್ಲಿ ಮಳೆ ಬಿರುಗಾಳಿ ಬಂದಾಗ ಆಗುವ ಅನಾಹುತವನ್ನು ತಪ್ಪಿಸಂತಾಗುತ್ತದೆ ಎಂದು ಪುಟ್ಟೇಗೌಡರು ಮನವಿ ಮಾಡಿದ್ದಾರೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?