ಕದಲೂರಿನಲ್ಲಿ ನಾಳೆ ಬೆಳದಿಂಗಳಲ್ಲಿ ಹಳ್ಳಿ ಹಬ್ಬ: ಕೆ.ಎಂ.ಉದಯ್

KannadaprabhaNewsNetwork |  
Published : Nov 01, 2026, 02:45 AM IST
30ಕೆಎಂಎನ್ ಡಿ12 | Kannada Prabha

ಸಾರಾಂಶ

ಕಾಲದಿಂದ ಕಾಲಕ್ಕೆ ಆಧುನಿಕತೆ ಹಾಗೂ ಜಾಗತಿಕತೆ ಹಿನ್ನೆಲೆಯಲ್ಲಿ ವೈಭವದಿಂದ ನಡೆಯುತ್ತಿದ್ದ ಹಬ್ಬಗಳು ಹಾಗೂ ಸಂಬಂಧ ಬೆಸೆಯುವ ಗ್ರಾಮೀಣ ನಂಬಿಕೆ, ಆಚರಣೆಗಳು ನಶಿಸುತ್ತಿದೆ. ಇವುಗಳನ್ನು ಉಳಿಸಲು ಮತ್ತು ಮುಂದಿನ ತಲೆಮಾರಿಗೆ ತಲುಪಿಸಲುಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಹುಟ್ಟೂರು ತಾಲೂಕಿನ ಕದಲೂರಿನಲ್ಲಿ ನ.2ರಂದು ಬೆಳದಿಂಗಳಲ್ಲಿ ಹಳ್ಳಿಹಬ್ಬ ಅಂದು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಕದಲೂರು ಗ್ರಾಮದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಸಂಜೆ 4ಗಂಟೆ ಗ್ರಾಪಂ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು, ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್, ಕದಲೂರಿನ ಶ್ರೀಪಟ್ಟಲದಮ್ಮ ಸೇವಾ ಸಮಿತಿ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಜಾನಪದ ಕಲೆ ಹಾಗೂ ಕ್ರೀಡೆಗಳಾದ ರಂಗೋಲಿ, ಹಗ್ಗ ಜಗ್ಗಾಟ ಹಾಗೂ ಚರ್ಮ ವಾದ್ಯ ಮೇಳಾ ಸ್ಪರ್ಧೆಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾಗಳನ್ನು ನೀಡಲಾಗುವುದು. ಕಲಾ ತಂಡಗಳ ಮೆರವಣಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಚಾಲನೆ ನೀಡುವರು. ವೇದಿಕೆ ಕಾರ್ಯಕ್ರಮವನ್ನು ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಉದ್ಘಾಟಿಸುವರು. ತಾವು ಅಧ್ಯಕ್ಷತೆ ವಹಿಸಲಿದ್ದು, ರಾಶಿ ಪೂಜೆಯನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ನೆರವೇರಿಸುವರು. ಸ್ಪರ್ಧೆಗಳಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟಿ ವಿನುತ್ ಉದಯ್ ಚಾಲನೆ ನೀಡುವರು ಎಂದರು.

ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ಮನ್ಮುಲ್ ಅಧ್ಯಕ್ಷ ಹರೀಶ್ ಬಾಬು, ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಂಚಾಲಕಿ ಡಾ.ಎಂ.ಕೆಂಪಮ್ಮ ಮಾತನಾಡಿ, ವಿಶ್ವದಷ್ಟೆ ವಿಶಾಲವಾದುದ್ದು ಜಾನಪದ ಕ್ಷೇತ್ರ.ಜಾನಪದರು ಜೀವನದ ಪ್ರತಿಯೊಂದು ಸಂಗತಿಯನ್ನು ಹಾಡು, ಒಗಟು, ಕಥೆ, ಗಾದೆ, ನಡೆ, ಆಚರಣೆ, ಸಂಪ್ರಾದಯದ ಮೂಲಕ ಸ್ಪಂದಿಸುತ್ತಾ ಬಂದಿದ್ದಾರೆ ಎಂದರು.

ಕಾಲದಿಂದ ಕಾಲಕ್ಕೆ ಆಧುನಿಕತೆ ಹಾಗೂ ಜಾಗತಿಕತೆ ಹಿನ್ನೆಲೆಯಲ್ಲಿ ವೈಭವದಿಂದ ನಡೆಯುತ್ತಿದ್ದ ಹಬ್ಬಗಳು ಹಾಗೂ ಸಂಬಂಧ ಬೆಸೆಯುವ ಗ್ರಾಮೀಣ ನಂಬಿಕೆ, ಆಚರಣೆಗಳು ನಶಿಸುತ್ತಿದೆ. ಇವುಗಳನ್ನು ಉಳಿಸಲು ಮತ್ತು ಮುಂದಿನ ತಲೆಮಾರಿಗೆ ತಲುಪಿಸಲುಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ವೇಳೆ ಪ್ರೊ.ಕೃಷ್ಣ, ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮೇಗೌಡ, ಕರ್ನಾಟಕ ಜನಪದ ಪರಿಷತ್ ತಾಲೂಕು ಘಟಕದ ಗೌರವಾಧ್ಯಕ್ಷ ಶಿವನಂಜಯ್ಯ, ಅಧ್ಯಕ್ಷ ಎನ್.ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಎಂ.ಆರ್.ಚಕ್ರಪಾಣಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ