ಬೇಡಿಕೆ ಈಡೇರಿಕೆಗೆ ಗ್ರಾಮ ಸಹಾಯಕರ ಸಂಘ ಮನವಿ

KannadaprabhaNewsNetwork |  
Published : Jan 21, 2025, 12:34 AM IST
ವಿವಿಧ ಬೇಡಿಕೆಗಳಿಗೆ  ಗ್ರಾಮ ಸಹಾಯಕರ ಸಂಘದಿಂದ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ | Kannada Prabha

ಸಾರಾಂಶ

ಗ್ರಾಮ ಸಹಾಯಕರ ಸಂಘದಿಂದ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.

ಸೋಮವಾರಪೇಟೆ: ಗ್ರಾಮ ಸಹಾಯಕರ ಸಂಘದಿಂದ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು ಭೇಟಿ ಮಾಡಿ, ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ, ಕನಿಷ್ಠ ವೇತನ ನಿಗದಿಗೆ ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಬೇಕೆಂದು ಮನವಿ ಮಾಡಲಾಯಿತು. ಸಂಘದ ಬೇಡಿಕೆಗಳನ್ನು ಆದ್ಯತೆಯ ಮೇರೆ ಈಡೇರಿಸುವ ಭರವಸೆಯನ್ನು ಶಾಸಕರು ನೀಡಿದರು.

ಶಾಸಕ ಮಂತರ್ ಗೌಡ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಗ್ರಾಮ ಸಹಾಯಕರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಸುರೇಶ್, ಪದಾಧಿಕಾರಿಗಳಾದ ಶಶಿಕುಮಾರ್, ಲೀನಾ ಮತ್ತಿತರರಿದ್ದರು.

------------------------------

ಹುಲಿ ದಾಳಿಗೆ ಎರಡು ಗಬ್ಬದ ಹಸು ಬಲಿಕನ್ನಡಪ್ರಭ ವಾರ್ತೆ ಪೊನ್ನಂಪೇಟೆಪೊನ್ನಂಪೇಟೆ ತಾಲೂಕು ದೇವನೂರು- ಸುಳುಗೋಡು ಗ್ರಾಮದಲ್ಲಿ ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಕೊಂದ ಘಟನೆ ಶನಿವಾರ ರಾತ್ರಿ ನಡೆದಿದೆ. ಇವು ಗ್ರಾಮದ ರೈತ ಮುದ್ದಿಯಡ ದಿನು ಅವರಿಗೆ ಸೇರಿದ ಹಸುಗಳಾಗಿದ್ದವು.ಸ್ಥಳಕ್ಕೆ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿದರು.ಈ ಸಂದರ್ಭ ಶಾಸಕ ಎ. ಎಸ್. ಪೊನ್ನಣ್ಣ ಅವರೊಂದಿಗೆ ಮಾತನಾಡಿದ ಅವರು, ಕೂಡಲೇ ಹುಲಿ ಸೆರೆ ಹಿಡಿಯಲು ಕಾರ್ಯಚರಣೆ ಕೈಗೊಳ್ಳುವಂತೆ ಹಾಗೂ ಗಬ್ಬದ ಹಸು ಆಗಿರುವುದರಿಂದ ವಿಶೇಷ ಪ್ರಕರಣದಲ್ಲಿ ಕೂಡಲೇ ಪರಿಹಾರವನ್ನು ನೀಡಬೇಕೆಂದು ನಿರ್ದೇಶನ ನೀಡಿದರು.ಸಾಕಾನೆಗಳನ್ನು ಬಳಸಿ ಕಾಫಿ ಫಸಲಿಗೆ ನಷ್ಟವಾಗದಂತೆ ರಸ್ತೆಯ ಬದಿಯಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಹುಲಿಯನ್ನು ಸಮೀಪ ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.ತಿತಿಮತಿ ಆರ್‌ಎಫ್‌ಒ ದೇವರಾಜ್ ಹಾಗೂ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದಿಂದ ಯಲ್ಲಮ್ಮನಗುಡ್ಡಕ್ಕೆ ₹118 ಅನುದಾನ
ಮಡಿಕೇರಿಯ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮ