ಕನ್ನಡಪ್ರಭ ವಾರ್ತೆ ಕೊರಟಗೆರೆ
೧೪ ವರ್ಷದಿಂದ ಮುಖ್ಯ ಶಿಕ್ಷಕಿಯಾಗಿದ್ದ ಗುಣಶೀಲ ಅವರು ಈ ಗ್ರಾಮದಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಟ್ಟಿದ್ದಾರೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿರುವ ಉದಾಹರಣೆಗಳಿವೆ ಎಂದು ಇಲ್ಲಿನ ಪೋಷಕರು ತಿಳಿಸಿ ಅವರ ಕುರಿತು ಮೆಚ್ಚುಗೆ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕಿ ಗುಣಶೀಲ ಮಾತನಾಡಿ, ಈ ಗ್ರಾಮದಲ್ಲಿರುವ ಸಾರ್ವಜನಿಕರು ಹಾಗೂ ಪೋಷಕರ ಸಹಕಾರದಿಂದ ನಾನು ೧೪ ವರ್ಷ ಇಲ್ಲಿ ನನ್ನ ಸೇವೆ ಸಲ್ಲಿಸಿದ್ದೇನೆ. ಇಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಇವತ್ತು ದೊಡ್ಡ ಮಟ್ಟದಲ್ಲಿ ವ್ಯಾಸಂಗ ಮಾಡುತ್ತಿರುವುದು ನನಗೆ ತೃಪ್ತಿ ತಂದಿದೆ ಎಂದು ಹೇಳಿದರು. ಮಾದೇನಹಳ್ಳಿ ಗ್ರಾಮಸ್ಥರು ಮುಖ್ಯ ಶಿಕ್ಷಕಿ ಗುಣಶೀಲ ಅವರಿಗೆ ಸನ್ಮಾನಿಸಿ ಗೌರವಿಸಿದರು. ಗ್ರಾಮದ ಹಳೆ ವಿದ್ಯಾರ್ಥಿಗಳು ಶಿಕ್ಷಕಿ ವರ್ಗಾವಣೆ ಹಿನ್ನೆಲೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಇದೆ ಸಂದರ್ಭದಲ್ಲಿ ಬಿಒಇ ಫೈರೋಜ್ ಬೇಗಮ್, ರವಿಕುಮಾರ, ರಾಮೇಗೌಡ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್‌ನಾಯ್ಕ್, ಉಪಾಧ್ಯಕ್ಷ ಸುರೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಗಂಗಾಧರ್, ವಿನೋದ್, ವೆಂಕಟೇಶ್‌ನಾಯ್ಕ್, ಮಂಜುಳಬಾಯಿ, ಯಶಸ್ವಿನಿ ಬಾಗ್ಯಬಾಯಿ, ಸುಮಿತ್ರಬಾಯಿ, ತಾವರನಾಯ್ಕ್, ಗೀತಾಬಾಯಿ, ಚಂದ್ರು, ಸುಬಾಸ್, ರೇಖಾನಾಯ್ಕ್, ಸಂತೋಷ್, ಮುಚ್ಚಿನಾಯ್ಕ್, ಪವನ್‌ಕುಮಾರ್, ಆಕಾಶ್, ಸಂದೇಶ್ ಸೇರಿದಂತೆ ಇತರರು ಇದ್ದರು.