ಗ್ರಾಪಂ ವೈಫಲ್ಯ: ತಾವೇ ಕಾರ್ಮಿಕರನ್ನು ಕರೆಸಿ ಚರಂಡಿ ಸ್ವಚ್ಛಗೊಳಿದ ಗ್ರಾಮಸ್ಥರು

KannadaprabhaNewsNetwork |  
Published : Jun 17, 2026, 02:00 AM IST
ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ನಿರ್ಲಕ್ಷತನದಿಂದ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದೆ ಗ್ರಾಮಸ್ಥರೇ ಮುಂದೆ ನಿಂತು ಬೇರೆ ಕಡೆಯಿಂದ ಕೂಲಿಕಾರ್ಮಿಕರನ್ನು ಕರೆಸಿ, ಚರಂಡಿ  ಸ್ವಚ್ಛತೆಗೆ ಮುಂದಾಗಿದ್ದಾರೆ...ಹನೂರು ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನಾಪುರ ಗ್ರಾಮದ ಬಡಾವಣೆಗಳಲ್ಲಿ ಹಲವಾರು ತಿಂಗಳುಗಳಿಂದ ಚರಂಡಿಗಳಲ್ಲಿ ರಾಡಿ ತುಂಬಿದ್ದು ಸ್ವಚ್ಛತೆಗೊಳಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರು ಸ್ವಚ್ಛತೆಗೆ ಮುಂದಾಗದೆ ಇರುವುದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಗ್ರಾಮಸ್ಥರೇ ಮುಂದೆ ನಿಂತು ಚರಂಡಿ ಸ್ವಚ್ಛತೆಗೆ ಆದ್ಯತೆ : ಕಳೆದ ಹಲವಾರು ತಿಂಗಳುಗಳಿಂದ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಗೊಳಿಸದೆ ರಾಡಿ ತುಂಬಿದ್ದು ಸೊಳ್ಳೆಗಳು ಹೆಚ್ಚಾಗಿ ರೋಗ  ರೊಜಿನಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿರುವುದರಿಂದ ಗ್ರಾಮಸ್ಥರು ಬೇರೆ ಕಡೆಯಿಂದ ಚರಂಡಿ ಸ್ವಚ್ಛತೆಗೆ  ಬಳಸಿಕೊಳ್ಳಲಾಗಿದ್ದ ಕೂಲಿಕಾರ್ಮಿಕರಿಗೆ ದಿನಗೂಲಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ .ಸ್ವಚ್ಛತೆ ಹಣ ಬರಿಸಿ  : ಆನಾಪುರ ಗ್ರಾಮದಲ್ಲಿ ಚರಂಡಿ ಸ್ವಚ್ಛತೆಗೆ ಸಾವಿರಾರು ರೂಪಾಯಿ ಗ್ರಾಮಸ್ಥರು ವೆಚ್ಚ ಮಾಡಿರುವುದರಿಂದ ಆ ಹಣವನ್ನ ಕಾರ್ಮಿಕರಿಗೆ ಕೂಲಿ ನೀಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗ್ರಾಮಸ್ಥರು ಒಕ್ಕಲುರವಾಗಿ ಮನವಿ ಮಾಡಿದ್ದರು ಕೂಲಿ ಕಾರ್ಮಿಕರ ಸ್ವಚ್ಛತೆ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ...ಮಂಗಲ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ಸಾರ್ವಜನಿಕರಿಗೆ ಕೆಲಸ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ ಜೊತೆಗೆ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ ಚರಂಡಿ ಸ್ವಚ್ಛತೆಯನ್ನು ಗ್ರಾಮಸ್ಥರೇ ಮುಂದೆ ನಿಂತು ಕೂಲಿ ಕಾರ್ಮಿಕರಿಗೆ ಹಣ ನೀಡಿ  ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆಗ್ರಾಮದಲ್ಲಿ ಅಭಿವೃದ್ಧಿ ಹಿನ್ನಡೆ ಸ್ವಚ್ಛತೆ ಕೊರತೆ ಗ್ರಾಮಸ್ಥರ ಅಕ್ರೋಶಕ್ಕೆ ಕಾರಣವಾಗಿದೆ  ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳಿಗೂ ಹಿನ್ನಡೆ ಉಂಟಾಗಿದ್ದು ಈ ಸ್ವತ್ತು ಮತ್ತು ಇನ್ನಿತರ ಕೆಲಸ ಕಾರ್ಯಗಳಿಗೆ ಹಣ ನೀಡದೆ ಕೆಲಸ ಮಾಡುವುದಿಲ್ಲ ಹೀಗಾಗಿ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಗ್ರಾಮಸ್ಥರ ಸಂಘ-ಸಂಸ್ಥೆಗಳ ಜೊತೆಗೂಡಿ ಮಂಗಲ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ  ಆನಾಪುರ ಉಮೇಶ್  ಬಸವಣ್ಣ  ಚಂದ್ರಶೇಖರ್ ರವಿ ದಾನಪ್ಪ ಇನ್ನಿತರ ಮುಖಂಡರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಾಕ್ಸ್ಪಂಚಾಯತಿ ಬದಲಾವಣೆ ಮಾಡಿ ಮನವಿ :  ಈ ಹಿಂದೆ ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದಾಗ ಆನಾಪುರ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿತ್ತು ಹೀಗಾಗಿ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಮವನ್ನು ಮತ್ತೆ ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿ ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಿಲ್ಲಾಡಳಿತವನ್ನು ನಿವಾಸಿಗಳು ಒತ್ತಾಯಿಸಿದ್ದಾರೆ...Hnr,1news 1  ಹನೂರು : ತಾಲೂಕಿನ ಮಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಾಪುರ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡಿದ ಕೂಲಿ ಕಾರ್ಮಿಕರಿಗೆ ಹಣ ನೀಡದೆ ಗ್ರಾಮ ಅಭಿವೃದ್ಧಿ ಅಧಿಕಾರಿ ಸತಾಯಿಸುತ್ತಿದ್ದಾರೆ ಎಂದು ಆರೋಪ. | Kannada Prabha

ಸಾರಾಂಶ

ಗ್ರಾಮ ಪಂಚಾಯ್ತಿ ವೈಫಲ್ಯದಿಂದಾಗಿ ಗ್ರಾಮಸ್ಥರೇ ಕೂಲಿ ಕಾರ್ಮಿಕರನ್ನು ಕರೆಸಿ ಮುಂದೆ ನಿಂತು ಚರಂಡಿ ಸ್ವಚ್ಛತೆಗೆ ಮುಂದಾಗಿರುವ ಘಟನೆಯು ಹನೂರು ತಾಲೂಕಿನ ಮಂಗಲ ಗ್ರಾಮ ಪಂಚಾಯ್ತಿಯ ಅನಾಪುರ ಗ್ರಾಮದಲ್ಲಿ ನಡೆದಿದೆ.

ಕೆಲಸಕ್ಕಾಗಿ ಅಭಿವೃದ್ಧಿ ಅಧಿಕಾರಿ ಹಣಕ್ಕೆ ಬೇಡಿಕೆ: ಆರೋಪ

---

ಕನ್ನಡಪ್ರಭ ವಾರ್ತೆ ಹನೂರು

ಗ್ರಾಮ ಪಂಚಾಯ್ತಿ ವೈಫಲ್ಯದಿಂದಾಗಿ ಗ್ರಾಮಸ್ಥರೇ ಕೂಲಿ ಕಾರ್ಮಿಕರನ್ನು ಕರೆಸಿ ಮುಂದೆ ನಿಂತು ಚರಂಡಿ ಸ್ವಚ್ಛತೆಗೆ ಮುಂದಾಗಿರುವ ಘಟನೆಯು ಹನೂರು ತಾಲೂಕಿನ ಮಂಗಲ ಗ್ರಾಮ ಪಂಚಾಯ್ತಿಯ ಅನಾಪುರ ಗ್ರಾಮದಲ್ಲಿ ನಡೆದಿದೆ.

ಇಲ್ಲಿ ಹಲವಾರು ತಿಂಗಳುಗಳಿಂದ ಚರಂಡಿಗಳಲ್ಲಿ ರಾಡಿ ತುಂಬಿದ್ದು, ಸ್ವಚ್ಛತೆಗೊಳಿಸುವಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದರೂ, ಕ್ರಮ ಕೈಗೊಳ್ಳದ ಬಗ್ಗೆ ಜನರು ಆಕ್ರೋಶಗೊಂಡಿದ್ದಾರೆ. ಪರಿಣಾಮ ಸೊಳ್ಳೇ, ರೋಗ ರುಜಿನೆಯಿಂದ ಮುಕ್ತಿ ಪಡೆದುಕೊಳ್ಳಲು ತಾವೇ ಮುಂದಡಿಯಿಟ್ಟಿದ್ದಾರೆ.

ಕಾರ್ಮಿಕರಿಗೆ ಕೂಲಿ ಕೊಡಿ:

ಗ್ರಾಮದಲ್ಲಿ ಸ್ವಚ್ಛತೆಗೆ ಕರೆಸಿದ ಕಾರ್ಮಿಕರಿಗೆ ಗ್ರಾಮಸ್ಥರೇ ಕೂಲಿ ಹಣ ಕೊಟ್ಟಿದ್ದು, ಈ ಮೊತ್ತವನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಭರಿಸಬೇಕೆಂದು ಜನರು ಪಟ್ಟು ಹಿಡಿದಿದ್ದು, ಆದರೆ ಅಧಿಕಾರಿ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.

ಸಮಸ್ಯೆ ನೂರೆಂಟು:

ಚರಂಡಿ ಸಮಸ್ಯೆ ಮಾತ್ರವಲ್ಲದೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಣ ಕೊಡದೆ ಯಾವುದೇ ಕೆಲಸವಾಗುವುದಿಲ್ಲ. ಇ-ಸ್ವತ್ತು ಸೇರಿದಂತೆ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಧಿಕಾರಿಗಳು ದುಡ್ಡಿಗೆ ಬೇಡಿಕೆ ಇಡುತ್ತಾರೆ. ಹಿರಿಯ ಅಧಿಕಾರಿಗಳು ಕ್ರಮ ವಹಿಸದಿದ್ದರೆ, ಸಂಘ-ಸಂಸ್ಥೆಗಳ ಜೊತೆ ಸೇರಿ ಮಂಗಲ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮದ ಮುಖಂಡರಾದ ಅನಾಪುರ ಉಮೇಶ್, ಬಸವಣ್ಣ, ಚಂದ್ರಶೇಖರ್‌, ರವಿ ಮತ್ತು ದಾನಪ್ಪ ಸೇರಿ ಇನ್ನಿತರ ಮುಖಂಡರುಗಳು ತಿಳಿಸಿದ್ದಾರೆ.ಗ್ರಾಪಂ ಬದಲಾವಣೆಗೆ ಕೂಗು

ಈ ಹಿಂದೆ ಅನಾಪುರ ಗ್ರಾಮವು ಕಣ್ಣೂರು ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದ್ದಾಗ, ಅಭಿವೃದ್ಧಿ ಕೆಲಸಗಳು ಸರಾಗವಾಗಿ ಆಗುತ್ತಿದ್ದವು. ಆದರೆ ಮಂಗಲ ಪಂಚಾಯ್ತಿ ಅಡಿ ಬಂದಾಗ ಕೆಲಸಗಳು ನಶ್ವರವಾಗಿವೆ. ಹೀಗಾಗಿ ಮತ್ತೆ ಅನಾಪುರವನ್ನು ಕಣ್ಣೂರು ವ್ಯಾಪ್ತಿಗೆ ಸೇರಿಸುವಂತೆ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

---

ಅನಾಪುರದಲ್ಲಿ ಚರಂಡಿ ಸ್ವಚ್ಛಗೊಳಿಸುತ್ತಿರುವ ಕಾರ್ಮಿಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರವಾನಗಿ ಇಲ್ಲದ ವಾಹನ ವಿರುದ್ಧ ಕ್ರಮಕೈಗೊಳ್ಳಿ
ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮುನಿಸ್ವಾಮಯ್ಯನವರಿಗೆ ಆತ್ಮೀಯ ಬೀಳ್ಕೊಡುಗೆ