ಗ್ರಾಮಾಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಮುಖ್ಯ-ಶಾಸಕ ಜಿ.ಎಸ್‌. ಪಾಟೀಲ

KannadaprabhaNewsNetwork |  
Published : Jul 26, 2025, 01:30 AM IST
25 ರೋಣ 1.ಯೋಜನೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ  ₹25  ಲಕ್ಷ ವೆಚ್ಚದಲ್ಲಿ ಹಿರೇಮಣ್ಣೂರ ಗ್ರಾಮದಲ್ಲಿ ಹಿರೇಹಳ್ಳ‌ ಸಂಪರ್ಕ‌ ರಸ್ತೆಗೆ  ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಎಸ್.ಪಾಟೀಲ ಭೂಮಿಪೂಜೆ ನೆರವೇರಿಸಿದರು.  | Kannada Prabha

ಸಾರಾಂಶ

ಸರ್ಕಾರದ ಅನುದಾನ ಸದ್ಬಳಕೆ ಹಾಗೂ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಲಭ್ಯದೊಂದಿಗೆ ಸಮಗ್ರ ಅಭಿವೃದ್ಧಿ ಗ್ರಾಮಸ್ಥರ ಸಹಕಾರ ಅತೀ ಮುಖ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ರೋಣ: ಸರ್ಕಾರದ ಅನುದಾನ ಸದ್ಬಳಕೆ ಹಾಗೂ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಲಭ್ಯದೊಂದಿಗೆ ಸಮಗ್ರ ಅಭಿವೃದ್ಧಿ ಗ್ರಾಮಸ್ಥರ ಸಹಕಾರ ಅತೀ ಮುಖ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಹಿರೇಮಣ್ಣೂರ ಗ್ರಾಮದಲ್ಲಿ ಜಿಪಂ, ತಾಪಂ ರೋಣ, ಪಂಚಾಯತ್ ರಾಜ್ಯದ ಎಂಜಿನಿಯರಿಂಗ್ ಉಪ ವಿಭಾಗ ರೋಣ, ಗ್ರಾಪಂ ಚಿಕ್ಕಮಣ್ಣೂರ ಸಹಯೋಗದಲ್ಲಿ ಲೆಕ್ಕ ಶೀರ್ಷಿಕೆ, 2023-24ನೇ ಸಾಲಿನ, 5054 ಯೋಜನೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ₹ 25 ಲಕ್ಷ ವೆಚ್ಚದಲ್ಲಿ ಹಿರೇಹಳ್ಳ‌ ಸಂಪರ್ಕ‌ ರಸ್ತೆ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಭಿವೃದ್ಧಿಯಲ್ಲಿ ರಾಜಕೀಯವಿರಬಾರದು. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಬೇಕು. ಉಳಿದ ಸಮಯದಲ್ಲಿ ರಾಜಕೀಯ ಮಾಡದೇ ಗ್ರಾಮದ ಅಭಿವೃದ್ಧಿ ಒಗ್ಗಟ್ಡಿನಿಂದ ಇರಬೇಕು. ಅಂಥ ಅಭಿವೃದ್ಧಿಯಾಗುವುದರಲ್ಲಿ‌ ಸಂದೇಹವಿಲ್ಲ. ಹಿರೇಮಣ್ಣೂರದಿಂದ ಚಿಕ್ಕಮಣ್ಣೂರ ರಸ್ತೆ ಹದಗೆಟ್ಡಿದ್ದು, ಶೀಘ್ರದಲ್ಲಿಯೇ 2 ಕಿ.ಮೀ ರಸ್ತೆ ದುರಸ್ತಿ ಮಾಡಲಾಗುವುದು.ಮುದೇನಗುಡಿ - ಹಿರೇಮಣ್ಣೂರ ರಸ್ತೆ, ಹಿರೇಮಣ್ಣೂರ- ಚಿಕ್ಕಮಣ್ಣೂರ ರಸ್ತೆ ಅಭಿವೃದ್ಧಿ ಪಡಿಸಲಾಗುವುದು.ಪಿ‌.ಎಂ.ಜೆ.ಎಸ್ ವೈ ಅನುದಾನದಡಿ ಹಿರೇಮಣ್ಣೂರ, ಬಾಸಲಾಪೂರ, ಕುರಹಟ್ಟಿ ಸಂಪರ್ಕ ಒಳ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, ಇದರಿಂದ ಹಿರೇಮಣ್ಣೂರ ಗ್ರಾಮಸ್ಥರು, ಬದಾಮಿ, ಬಾಗಲಕೋಟಿಗೆ ತೆರಳಲು ರೋಣ ಮಾರ್ಗವಾಗಿ ಸುತ್ತುವರೆದು ಹೋಗುವುದು ತಪ್ಪಲಿದೆ. ಹಿರೇಮಣ್ಣೂರಲ್ಲಿ‌ ಮಹಿಳಾ ಸಮುದಾಯ ಶೌಚಾಲಯಕ್ಕೆ ಜಾಗೆ ನೀಡಿದಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವದು. ಮುಖ್ಯಮಂತ್ರಿಗಳ ವಿಶೇಷ ಅನುದಾನ ₹25 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾದ ಸಿ.ಸಿ. ರಸ್ತೆಯೂ ಒಟ್ಟು 336 ಮೀಟರ್ ಉದ್ದವಿದ್ದು, .ಇದರಲ್ಲಿ

160 ಮೀಟರ್ ರಸ್ತೆ ಹಿರೇಹಳ್ಳ ರಸ್ತೆಗೆ ಸಿ.ಸಿ , ಪ್ಲಾಟನಲ್ಲಿ 90 ಮೀಟರ್ ಉದ್ದದ 2 ರಸ್ತೆ ನಿರ್ಮಿಸಲಾಗುವುದು. ಕಾಮಗಾರಿ ಗುಣಮಟ್ಟದಿಂದ ಇರುವಂತರ ಗುತ್ತಿಗೆದಾರರೊಂದಿಗೆ ಗ್ರಾಮಸ್ಥರು ಸಲಹೆ, ಸಹಕಾರ ನೀಡಬೇಕು. ಹಿರೇಮಣ್ಣೂರ ಗ್ರಾಮಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪಟ್ಟಿ ಮಾಡಿ, ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ತಾಪಂ ಮಾಜಿ ಅಧ್ಯಕ್ಷ ಶಂಕರಗೌಡ ಮಾಟೀಲ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಂದ ಪ್ರತಿಯೊಬ್ಬರಿಗೂ ಸಾಕಷ್ಡು ಅನುಕೂಲವಾಗಿದೆ. ಬಡ ಜನತೆಗೆ ಆರ್ಥಿಕ ಹೊರೆ ನೀಗಿಸುವಲ್ಲಿ ಗ್ಯಾರಂಟಿ ಯೋಜನೆಗಳ ಅತ್ಯಂತ ಸಹಕಾರಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಬಸವರಾಜ ನವಲಗುಂದ, ಯುಶೂಫ ಇಟಗಿ, ರಾಮಣ್ಣ ಕುರಿಯವರ, ತಾಪಂ ಮಾಜಿ ಸದಸ್ಯ ಶಂಕರಗೌಡ ಪಾಟೀಲ, ಭರಮಗೌಡ ಪಾಟೀಲ, ಗ್ರಾಪಂ ಸದಸ್ಯೆ ವಿಶಾಲಾಕ್ಷಿ ಪ್ಯಾಟಿಗೌಡ್ರ, ಬಸವರಾಜ ಕಾತರಕಿ, ಬಸವಣ್ಣೆಪ್ಪ ಹುಲ್ಲೂರ, ಚನ್ನಬಸಯ್ಯ ಪುರಾಣಿಕಮಠ, ಷಡಕ್ಷರಯ್ಯ ಹಿರೇಮಠ, ಮಲ್ಲನಗೌಡ ಪರಡ್ಡಿ, ಪಿ.ಎಫ್. ಶಾಂತಪ್ಪನವರ, ಕೂಡ್ಲೆಪ್ಪಗೌಡ ಪ್ಯಾಟಿಗೌಡ್ರ, ರಂಗನಾಥ ಕವಾಸ್ತ, ಶಿವಪ್ಪ ಪಟ್ಟೇದ ಸೇರಿದಂತೆ ಉಪಸ್ಥಿತರಿದ್ದರು. ಬಸನಗೌಡ ಪ್ಯಾಟಿಗೌಡ್ರ ನಿರೂಪಿಸಿದರು. ಶರಣಪ್ಪ ಕುರಿ ಸ್ವಾಗತಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌