ಗ್ರಾಮಸ್ಥರು ಗ್ರಂಥಾಲಯ ಸದ್ಬಳಸಿಕೊಳ್ಳಿ

KannadaprabhaNewsNetwork |  
Published : Jan 20, 2025, 01:34 AM IST
ಕೆ ಕೆ ಪಿ ಸುದ್ದಿ 02: ಗ್ರಾಮ ಪಂಚಾಯಿತಿವ್ಯಾಪ್ತಿಯಗ್ರಂಥಾಲಯ ನಿರ್ವಹಣೆ ಕುರಿತು ಸದಸ್ಯರ ಸಭೆ ನಡೆಸಲಾಯಿತು.  | Kannada Prabha

ಸಾರಾಂಶ

ಕನಕಪುರ: ಗ್ರಂಥಾಲಯಗಳು ಸ್ಥಳೀಯರಲ್ಲಿ ಓದುವ ಹವ್ಯಾಸ ಬೆಳೆಸುತ್ತವೆ. ವಿದ್ಯಾರ್ಥಿಗಳು, ಯುವಜನರು ಗ್ರಂಥಾಲಯ ಸದ್ಬಳಸಿಕೊಂಡು ಜ್ಞಾನಾರ್ಜನೆ ವೃದ್ಧಿಸಿಕೊಳ್ಳಬೇಕು ಎಂದು ತಾಲೂಕಿನ ಶಿವನಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್‌ ಎಂದು ಹೇಳಿದರು.

ಕನಕಪುರ: ಗ್ರಂಥಾಲಯಗಳು ಸ್ಥಳೀಯರಲ್ಲಿ ಓದುವ ಹವ್ಯಾಸ ಬೆಳೆಸುತ್ತವೆ. ವಿದ್ಯಾರ್ಥಿಗಳು, ಯುವಜನರು ಗ್ರಂಥಾಲಯ ಸದ್ಬಳಸಿಕೊಂಡು ಜ್ಞಾನಾರ್ಜನೆ ವೃದ್ಧಿಸಿಕೊಳ್ಳಬೇಕು ಎಂದು ತಾಲೂಕಿನ ಶಿವನಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್‌ ಎಂದು ಹೇಳಿದರು. ಶಿವನಹಳ್ಳಿ ಗ್ರಾಪಂ ಅರಿವು ಕೇಂದ್ರದಲ್ಲಿ ನಡೆದ ಗ್ರಾಪಂ ಗ್ರಂಥಾಲಯಗಳ ಪರಿಣಾಮಕಾರಿ ನಿರ್ವಹಣೆ ಕುರಿತು ಗ್ರಾಪಂ ಮಟ್ಟದ ಸಲಹಾ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಗ್ರಂಥಾಲಯಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ಕುರಿತು ಚರ್ಚಿಸಿದರು.

ಪಿಡಿಒ ಕೃಷ್ಣಮೂರ್ತಿ ಮಾತನಾಡಿ, ಗ್ರಂಥಾಲಯದಲ್ಲಿ ಸಿಗುವ ಸೌಲಭ್ಯಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಅರಿವು ಕೇಂದ್ರಕ್ಕೆ ಆಗಮಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಆಟಿಕೆಗಳನ್ನು ತರಿಸುವಂತೆ ಸಲಹಾ ಸಮಿತಿ ಸದಸ್ಯರ ಸಮ್ಮುಖದಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಕಾರ್ಯದರ್ಶಿ ಪುಟ್ಟಸ್ವಾಮಿ, ಸರ್ಕಾರಿ ಫ್ರೌಢಶಾಲೆ ಮುಖ್ಯಶಿಕ್ಷಕ ನಾರಾಯಣ, ಸರ್ಕಾರಿ ಪ್ರಾಥಮಿಕ ಶಿಕ್ಷಕರಾದ ಸಾಕಮ್ಮ, ಸಲಹಾ ಸಮಿತಿ ಸದಸ್ಯರಾದ ಶ್ವೇತ, ನಟರಾಜು, ಶಿವಲಿಂಗಯ್ಯ(ಪತ್ರಕರ್ತರು), ಸುಮಲತ, ಶಿವರುದ್ರಯ್ಯ, ರೂಪಾ, ಸ್ಥಳೀಯ ಶಿಕ್ಷಣ ತಜ್ಞ ಶಿವರುದ್ರಯ್ಯ, ವಿದ್ಯಾರ್ಥಿಗಳು, ಗ್ರಂಥಾಲಯದ ಮೇಲ್ವಿಚಾರಕರು ಹಾಜರಿದ್ದರು.

ಕೆ ಕೆ ಪಿ ಸುದ್ದಿ 02:

ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಂಥಾಲಯ ನಿರ್ವಹಣೆ ಕುರಿತು ಸದಸ್ಯರ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!