ಮೊಳಕಾಲ್ಮೂರು: ತಾಲೂಕಿನ ಚಿಕ್ಕೋಬನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡುವಂತೆ ಆಗ್ರಹಿಸಿ ಅಲ್ಲಿನ ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಬಹುತೇಕ ಬಡ ಸಮುದಾಯಗಳು ಹೆಚ್ಚಾಗಿ ವಾಸಿಸುವ ಈ ಭಾಗದ ಜನ ಆಸ್ಪತ್ರೆಗೆ ತೆರಳಬೇಕಾದರೆ 40 ಕಿ.ಮೀ ದೂರ ಹೋಗಬೇಕಾಗಿದೆ. ಇಲ್ಲಿನ ಅಸ್ಪತ್ರೆಯಲ್ಲಿ ಉತ್ತಮ ವಾತಾವರಣ ಇದ್ದು ಇಲ್ಲಿನ ಸಿಬ್ಬಂದಿ ಸಾರ್ವಜನಿಕರಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಆದರೂ ಇಲ್ಲಿ ಸಿಬ್ಬಂದಿ ಇಲ್ಲದೆ ಆಸ್ಪತ್ರೆ ನರಳುತ್ತಿದ್ದು ಸಾರ್ವಜನಿಕರು ಪರದಾಡುವ ಸ್ಥಿತಿ ಎದುರಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿಯನ್ನು ನೇಮಿಸಿ ಕೊಡಬೇಕು ಜೊತೆಗೆ ಔಷಧಿ. ಸಿಬ್ಬಂದಿ ಕೊಠಡಿಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಬಿ.ಸಿದ್ದೇಶ್ವರ, ಯಜಮಾನ್ ದಾಸಪ್ಪ, ದಳಪತಿ ಸೂರಯ್ಯ, ಗ್ರಾಪಂ ಅಧ್ಯಕ್ಷ ಓಬಣ್ಣ, ಸದಸ್ಯರಾದ ಓ.ಕರಿಬಸಪ್ಪ, ನಾಗಭೂಷಣ, ಎಚ್‌ಎಮ್ ರವಿ, ಚೆನ್ನಪ್ಪ, ಕೆ.ಓಬಯ್ಯ, ಸಿ.ಬಿ.ಕೊಲ್ಲಪ್ಪ, ಸಂಗಮ ಮೇಘರಾಜ, ಚನ್ನಬಸಮ್ಮ ಗ್ರಾಮದ ಮಹಿಳೆಯರು, ಮಕ್ಕಳು ಹಾಜರಿದ್ದರು.