ಬಾಲ್ಯ ವಿವಾಹ ನಿಷೇಧಕ್ಕೆ ಗ್ರಾಮಸ್ಥರು ಮುಂದಾಗಲಿ

KannadaprabhaNewsNetwork |  
Published : Jul 11, 2025, 12:32 AM IST
ಚಿತ್ರಶೀರ್ಷಿಕೆ10ಎಂಎಲ್ ಕೆ1ಮೊಳಕಾಲ್ಮುರು ತಾಲೂಕಿನ ದೇವಸಮುದ್ರ ಪ್ರೌಢಶಾಲೆ ಆವರಣದಲ್ಲಿಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀ ಚಂದ್ರಣ್ಣಬಾಲ್ಯ ವಿವಾಹ ಮತ್ತು ಪೋಕ್ಕಾ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದರು | Kannada Prabha

ಸಾರಾಂಶ

ಪೋಕ್ಸೋ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಲಕ್ಷ್ಮೀ ಸಲಹೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಅಪರಾಧ ಎಂಬುದರ ಬಗ್ಗೆ ಮಕ್ಕಳಿಂದ ಹಿಡಿದು ಸಮುದಾಯದವರೆಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಗ್ರಾಪಂ ಅಧ್ಯಕ್ಷ್ಯೆ ಲಕ್ಷ್ಮೀ ಚಂದ್ರಣ್ಣ ಹೇಳಿದರು.

ತಾಲೂಕಿನ ದೇವಸಮುದ್ರ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಚೈಲ್ಡ್‌ ಲೈನ್ ಇಲಾಖೆಗಳು ಹಾಗೂ ಆಶ್ರಿತ ಸಂಸ್ಥೆ ಚಿತ್ರದುರ್ಗ ಇವರ ಆಶ್ರಯದಲ್ಲಿ ಬಾಲ್ಯ ವಿವಾಹ ಮತ್ತು

ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಕ್ತ ಸಂಬಂಧ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹಗಳು ನಡೆಯುತ್ತವೆ ಅಂತಹ ಮದುವೆಗಳಿಂದ ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯ ಬಲಿ ಕೊಟ್ಟಂತಾಗುವುದು ಹಾಗಾಗಿ ಪೋಷಕರಲ್ಲಿ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಜಿಲ್ಲಾ ಮಿಷನ್ ಶಕ್ತಿ ಸಂಯೋಜಕ ವಿನಯ್ ಮಾತನಾಡಿ, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು ಮತ್ತು ಕಾನೂನು ರೀತಿಯ ಅಪರಾಧ ಎಂಬುದರ ಬಗ್ಗೆ ಪ್ರೌಢಶಾಲೆ ಹಂತದಿಂದಲೇ ಮಕ್ಕಳಿಗೆ ಮತ್ತು ಪೋಷಕರಿಗೆ ತಿಳಿಸುವ ಅಗತ್ಯವಿದೆ ಹಾಗಾಗಿ ಇಲಾಖೆಯು ಜಿಲ್ಲಾದ್ಯಂತ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದರು.

ದೈಹಿಕ ಸಾಮರ್ಥ್ಯವಿಲ್ಲದ ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿ ಅನವಶ್ಯಕ ಜವಾಬ್ದಾರಿಗಳನ್ನು ಬರುವುದು ಸರಿಯೇ..? ಮತ್ತು ಸಾಮರ್ಥ್ಯವಿಲ್ಲದ ಗರ್ಭ ಧರಿಸಿ ಸಾವಿಗೆ ತುತ್ತಾಗುವುದು ಯಾವ ನ್ಯಾಯ..? ಹಾಗಾಗಿ ಪೋಷಕರು. ಗ್ರಾಮ ಪಂಚಾಯಿತಿ. ಕಂದಾಯ ಇಲಾಖೆ ಅಧಿಕಾರಿಗಳು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸಹಕರಿಸಿ ಎಂದರು.

ಈ ವೇಳೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್ ಕುಮಾರ್, ಗ್ರಾಪಂ ಉಪಾಧ್ಯಕ್ಷ ಕುಮಾರಸ್ವಾಮಿ, ಲೋಕೇಶ್ ಪ್ರಶಾಂತ್ ಕುಮಾರ್ ಶಕೀಲಾ ಬಾನು, ರೇಣುಕಾ ಅವರು ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಯ ಬಗ್ಗೆ ಇಲಾಖೆಯಲ್ಲಿರುವ ತಾಂತ್ರಿಕ ವ್ಯವಸ್ಥೆಯನ್ನು ತಿಳಿಸಿದರು. ಮುಖ್ಯ ಉಪಾಧ್ಯಾಯ ವೆಂಕಟೇಶ್. ಪಿಡಿಒ ಬೀರಲಿಂಗಪ್ಪ. ಆಶ್ರಿತ ಸಂಸ್ಥೆಯ ಚಂದ್ರಣ್ಣ. ದೇವಿರಮ್ಮ. ಅಜ್ಜೇರಿ ತಿಪ್ಪೇಸ್ವಾಮಿ ಇದ್ದರು.

PREV