ಗ್ರಾಮಸ್ಥರು ಒಗ್ಗಟ್ಟಿನಿಂದ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಿ: ಮಧು ಜಿಮಾದೇಗೌಡ

KannadaprabhaNewsNetwork |  
Published : Dec 09, 2024, 12:46 AM IST
8ಕೆಎಂಎನ್ ಡಿ35 | Kannada Prabha

ಸಾರಾಂಶ

ಸರ್ಕಾರದಿಂದ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ತೊಡಗಿಸಿದ್ದೇನೆ. ವಿವಿಧ ಇಲಾಖೆಗಳಿಂದಲೂ ಸಹ ಅನುದಾನ ತಂದು ಶ್ರಮಿಸುತ್ತೇನೆ. ಅಭಿವೃದ್ಧಿಗೆ ಜನರು ಸಹ ಸಹಕಾರ ನೀಡಬೇಕು. ಗ್ರಾಮದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ನನ್ನ ಅನುದಾನದಿಂದ 5 ಲಕ್ಷ ರು.ನೀಡಿದ್ದೇನೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಜನರು ಒಗ್ಗಟ್ಟಿನಿಂದ ಕೆಲಸ ಕಾರ್ಯ ಮಾಡಿಸಿಕೊಳ್ಳುವಂತೆ ಶಾಸಕ ಮಧು ಜಿ.ಮಾದೇಗೌಡ ಕಿವಿಮಾತು ಹೇಳಿದರು.

ಎಸ್.ಐ.ಹಾಗಲಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರದಿಂದ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ತೊಡಗಿಸಿದ್ದೇನೆ. ವಿವಿಧ ಇಲಾಖೆಗಳಿಂದಲೂ ಸಹ ಅನುದಾನ ತಂದು ಶ್ರಮಿಸುತ್ತೇನೆ. ಅಭಿವೃದ್ಧಿಗೆ ಜನರು ಸಹ ಸಹಕಾರ ನೀಡಬೇಕು ಎಂದರು.

ಈ ಗ್ರಾಮದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ನನ್ನ ಅನುದಾನದಿಂದ 5 ಲಕ್ಷ ರು.ನೀಡಿದ್ದೇನೆ. ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಳಪೆ ಕಾಮಗಾರಿಗೆ ಗ್ರಾಮಸ್ಥರು ಅವಕಾಶ ನೀಡಬಾರದು. ಅಂತಹ ಕಾಮಗಾರಿಗಳು ಕಂಡುಬಂದರೆ ತನ್ನ ಗಮನಕ್ಕೆ ತರಬೇಕೆಂದರು.

ಈ ವೇಳೆ ನಿವೃತ್ತ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ, ತಾಪಂ ಮಾಜಿ ಸದಸ್ಯ ಗಿರೀಶ್, ಭರತೇಶ್, ಮುಖಂಡರಾದ ಮುಟ್ಟನಹಳ್ಳಿ ಸಂತೋಷ್, ಗುತ್ತಿಗೆದಾರ ಮುಡೀನಹಳ್ಳಿ ಅಪ್ಪಾಜಿ. ಹಾಗಲಹಳ್ಳಿ ಪ್ರಭು, ಚನ್ನಪ್ಪ, ಅಪ್ಪಾಜೀಗೌಡ, ನವೀನ್, ಗ್ರಾ.ಪಂ ಮಾಜಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸದಸ್ಯ ಶಿವಲಿಂಗು, ಶಿವಣ್ಣ, ಚನ್ನಪ್ಪ, ದೊಡ್ಡಸ್ವಾಮಿ ಆರಾಧ್ಯರು ಸೇರಿದಂತೆ ಹಲವರಿದ್ದರು.

ಪೌರಕಾರ್ಮಿಕರ ಕಾಲೋನಿಯಲ್ಲಿಂದು ಪಟ್ಟಲದಮ್ಮ ದೇವಸ್ಥಾನ ಉದ್ಘಾಟನೆ

ಮಳವಳ್ಳಿ:

ಪಟ್ಟಣದ ಬಿ.ಬಸವಲಿಂಗಪ್ಪ ನಗರ (ಪೌರ ಕಾರ್ಮಿಕರ ಕಾಲೋನಿ)ದಲ್ಲಿ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮ ವತಿಯಿಂದ ಡಿ.9ರಂದು ನೂತನವಾಗಿ ನಿರ್ಮಿಸಿರುವ ಪಟ್ಟಲದಮ್ಮ ದೇವಸ್ಥಾನದ ಉದ್ಘಾಟನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಬೆಳಗ್ಗೆ ದೇವಸ್ಥಾನದ ಉದ್ಘಾಟನೆ, ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವ ಸಾನಿಧ್ಯವನ್ನು ಮೈಸೂರಿನ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ವಹಿಸಲಿದ್ದಾರೆ.

ಅತಿಥಿಗಳಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ, ಮಾಜಿ ಶಾಸಕ ಕೆ.ಅನ್ನದಾನಿ, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಎನ್.ಬಸವರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಬಿಜೆಪಿ ಮುಖಂಡ ಜಿ.ಮುನಿರಾಜು, ಪ್ರಮುಖರಾದ ಆರ್.ಶಿವಣ್ಣ, ಆರ್.ದಾಸ್, ಯತೀರಾಜು, ಪಿ.ಮಂಜುನಾಥ್, ಶಂಕರ್ ಬಾಬು, ಎಸ್.ನಾಗರಾಜು, ಎನ್.ಜಯರಾಂ, ಶ್ರೀರಂಗ, ಎನ್.ಪಿ.ಗುರುದತ್ ಮೂರ್ತಿ, ಪುರಸಭೆ ಸದಸ್ಯರು ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳುವರು ಎಂದು ಪೌರಕಾರ್ಮಿಕರ ಕಾಲೋನಿಯ ಮುಖಂಡರು ತಿಳಿಸಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ