ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಗ್ರಾಮಗಳು

KannadaprabhaNewsNetwork |  
Published : Dec 20, 2024, 12:48 AM IST
18 ಹೆಚ್.ಆರ್.ಆರ್ 01ಹರಿಹರದ ನಗರಸಭೆ ಆವರಣದಲ್ಲಿ ನೂತನವಾಗಿ ಕಾರ್ಯಾರಂಭಿಸಿರುವ ಹರಿಹರ-ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ ಶಾಖಾ ಕಛೇರಿಗೆ ದೂಡಾ ಅಧಿಕಾರಿಗಳು ಭೇಟಿ ನೀಡಿದ್ದರು. | Kannada Prabha

ಸಾರಾಂಶ

ಹರಿಹರ: ನಗರಸಭೆಯ ಆವರಣದಲ್ಲಿ ನೂತನವಾಗಿ ಕಾರ್ಯಾರಂಭಿಸಿರುವ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ವ್ಯಾಪ್ತಿಗೆ, ಹರಿಹರ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಾದ ಸಾಲುಕಟ್ಟೆ, ಬೆಳ್ಳೂಡಿ, ಷಂಶಿಪುರ, ದೊಗ್ಗಳ್ಳಿ, ಬನ್ನಿಕೊಡು, ಕೆ.ಬೇವಿನಹಳ್ಳಿ, ಗುತ್ತೂರು, ಬಕ್ಕಾಪುರ, ಹರ್ಲಾಪುರ, ಅಮರಾವತಿ, ಶೇರಾಪುರ, ಮಿಟ್ಲಕಟ್ಟಿ, ಮಹಜೇನಹಳ್ಳಿ, ಹನಗವಾಡಿ, ಹರಗನಹಳ್ಳಿ, ಹಲಸಬಾಳು ಗ್ರಾಮಗಳು ಒಳಪಡುತ್ತವೆ ಎಂದು ದೂಡಾ ಪ್ರಾಧಿಕಾರದ ಆಯುಕ್ತರಾದ ಹುಲ್ಮನಿ ತಿಮ್ಮಣ್ಣ ಹೇಳಿದರು.

ಹರಿಹರ: ನಗರಸಭೆಯ ಆವರಣದಲ್ಲಿ ನೂತನವಾಗಿ ಕಾರ್ಯಾರಂಭಿಸಿರುವ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ವ್ಯಾಪ್ತಿಗೆ, ಹರಿಹರ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಾದ ಸಾಲುಕಟ್ಟೆ, ಬೆಳ್ಳೂಡಿ, ಷಂಶಿಪುರ, ದೊಗ್ಗಳ್ಳಿ, ಬನ್ನಿಕೊಡು, ಕೆ.ಬೇವಿನಹಳ್ಳಿ, ಗುತ್ತೂರು, ಬಕ್ಕಾಪುರ, ಹರ್ಲಾಪುರ, ಅಮರಾವತಿ, ಶೇರಾಪುರ, ಮಿಟ್ಲಕಟ್ಟಿ, ಮಹಜೇನಹಳ್ಳಿ, ಹನಗವಾಡಿ, ಹರಗನಹಳ್ಳಿ, ಹಲಸಬಾಳು ಗ್ರಾಮಗಳು ಒಳಪಡುತ್ತವೆ ಎಂದು ದೂಡಾ ಪ್ರಾಧಿಕಾರದ ಆಯುಕ್ತರಾದ ಹುಲ್ಮನಿ ತಿಮ್ಮಣ್ಣ ಹೇಳಿದರು.ನಗರಸಭೆ ಆವರಣದಲ್ಲಿ ನೂತನವಾಗಿ ಕಾರ್ಯಾರಂಭಿಸಿರುವ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಶಾಖಾ ಕಚೇರಿಗೆ ಭೇಟಿ ನೀಡಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಕ್ರಯಪತ್ರದ ದೃಢೀಕರಣದ ನಕಲು ಪ್ರತಿ, ಭೂ ದಾಖಲೆ ಇಲಾಖೆಯಿಂದ ಪಡೆದಿರುವ ಸರ್ವೆ ಸ್ಕೆಚ್, ಅಟ್ಲಾಸ್ ಅಲಿನೇಶನ್ ನಕಾಶೆಯ ನಕಲು ದೃಢೀಕರಣ ಪ್ರತಿ, ಇತ್ತೀಚಿನ ಋಣಭಾರ ರಾಹಿತ್ವ ದೃಢೀಕೃತ ಪ್ರಮಾಣಪತ್ರ, ಇತ್ತೀಚಿನ ಆರ್‍ಟಿಸಿ ಪ್ರತಿ, ಆಧಾರ ಕಾರ್ಡು, ಉದ್ದೇಶಿತ ವಿನ್ಯಾಸ ನಕ್ಷೆ, ನಿವೇಶನದ ಫೋಟೋ, ಅನುಮೋದಿತ ವಿನ್ಯಾಸ ನಕ್ಷೆ ಮತ್ತು ಆದೇಶ ಪ್ರತಿಯನ್ನು ದೂಡಾ ಶಾಖಾ ಕಚೇರಿಗೆ ಸಲ್ಲಿಸಿದಲ್ಲಿ ನೂತನ ಲೇಔಟ್‍ಗೆ ಪರವಾನಗಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.ದೂಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಅಣ್ಣಪ್ಪ, ಯೋಜನಾಧಿಕಾರಿಗಳಾದ ರಘು, ಪ್ರದೀಪ್, ಸಹಾಯಕ ಅಭಿಯಂತರರಾದ ಪರಮೇಶ್ವರ ನಾಯ್ಕ, ಸುಜೇಕುಮಾರ, ಕೆ.ಟಿ. ಅಕ್ಷತಾ, ಶ್ವೇತಾ, ಹರಿಹರ ಶಾಖಾ ಕಚೇರಿಯ ಸಿಬ್ಬಂದಿ ಅಮಿತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ