ಕನ್ನಡಪ್ರಭ ವಾರ್ತೆ ನಾಪೋಕ್ಲುಶಾಲೆಗಾಗಿ ದಾನವಾಗಿ ನೀಡಿದ ಜಾಗದ ಅತಿಕ್ರಮಣವಾಗುತ್ತಿದೆ. ಒತ್ತುವರಿ ಜಾಗಕ್ಕೆ ಕಾನೂನುಬದ್ಧ ತಡೆ ನೀಡದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ ಹೇಳಿದರು.
ನಡೆಸಲಾಗುವುದು.ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆ ಜಾಗ ಒತ್ತುವರಿಯಾಗಿದ್ದು, ಈ ಬಗ್ಗೆ ಗೊಂದಲ ನಿವಾರಿಸಬೇಕಿದೆ. ಪದವಿ ಕಾಲೇಜಿಗೆ 10 ಎಕರೆ ಜಾಗವನ್ನು, ಹಾಗೂ ಅಂಬೇಡ್ಕರ್ ವಸತಿ ಶಾಲೆಗೆ (ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ) 7 ಎಕರೆ ಜಾಗವನ್ನುಕಾನೂನು ಬದ್ದವಾಗಿ ನೀಡಲಾಗಿದೆ. ಆದರೆ 2.50 ಎಕರೆ ಜಾಗವನ್ನು ಕಬರಸ್ಥಾನಕ್ಕಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಹಲವು ಖಾಸಗಿ ವ್ಯಕ್ತಿಗಳು
3 ರಿಂದ 4 ಎಕರೆಯಷ್ಟು ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿ ಜಾಗದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಜಿಪಂ ಮಾಜಿ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಶಾಲೆಗೆ ದಾನವಾಗಿ ನೀಡಿದ ಜಾಗದ ದುರುಪಯೋಗ ಆಗಬಾರದು. ಈಗಾಗಲೇ ಕಾಲೇಜಿನ ಪ್ರಾಂಶುಪಾಲರನ್ನು ಭೇಟಿ ಮಾಡಿ ಸಭೆ ನಡೆಸಿದ್ದೇವೆ. ಕಬರ ಸ್ಥಾನಕ್ಕೆ ಸೇರಿದ ಜಾಗವಾದರೆ ಅಲ್ಲಿ ಶಾದಿ ಮಹಲ್ ನಿರ್ಮಿಸಲು ಯಾವ ಆಕ್ಷೇಪವೂ ಇಲ್ಲ. ಆದರೆ ಇದು ಶಾಲೆಯ ಜಾಗವಾಗಿದ್ದು ಈ ಬಗ್ಗೆ ಗೊಂದಲ ಇದೆ. ಗೊಂದಲ ಪರಿಹರಿಸುವಂತೆ ವಿನಂತಿ ಮಾಡಿದರೂ ಹಗಲು ರಾತ್ರಿ ಎನ್ನದೆ ಶಾದಿ ಮಹಲ್ ಕಾರ್ಯ ಭರದಿಂದ ಸಾಗುತ್ತಿದೆ. ಆದ್ದರಿಂದ ಸರ್ವೆ ಆಗುವವರೆಗೆ ತಕ್ಷಣದಿಂದಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದರು.
ಅಧಿಕಾರಿಗಳು, ಜನಪ್ರತಿನಿಧಿಗಳು ಬೆಂಬಲ ನೀಡುತ್ತಿದ್ದಾರೆ. ಇದರಿಂದ ಸಮಸ್ಯೆ ಉದ್ಭವಿಸಿದೆ. ಮೂರು ದಿನಗಳೊಳಗೆ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಹಾಗೂ ಕಾಮಗಾರಿಯನ್ನು ಸ್ಥಗಿತಗೊಳಿಸದಿದ್ದರೆ ಜಿಲ್ಲಾಧ್ಯಂತ ಉಗ್ರ ಪ್ರತಿಭಟನೆ ನಡೆ,ಸುತ್ತೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸ್ಥಳ ದಾನಿಗಳಾದ ಕೀಕಂಡ ರಾಜ ಮೇದಪ್ಪ, ಮಕ್ಕಿ ಬ್ರಾಹ್ಮಣರನಾರಾಯಣ, ಹಳೆ ವಿದ್ಯಾರ್ಥಿಗಳಾದ ಕುಲ್ಲೇಟಿರ ಅಜಿತ್ ನಾಣಯ್ಯ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ , ಕುಂಡ್ಯೋಳಂಡ ವಿಶು ಪೂವಯ್ಯ, ಮನುಮಹೇಶ್ , ಬಿದ್ದಾ ಟಂಡ ಸಂಪತ್, ಕಂಗಾಂಡ ಜಾಲಿ ಪೂವಪ್ಪ, ಬಾಳೆಯಡ ಮೇದಪ್ಪ ಉಪಸ್ಥಿತರಿದ್ದರು.