
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಕೊಡಗು ಜಿಲ್ಲಾ ಆಸ್ಪತ್ರೆ ರಕ್ಷಣಾ ಘಟಕದ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಎರಡನೇ ವರ್ಷದ ಈ ಶಿಬಿರ ಆಯೋಜನೆಗೊಂಡಿತ್ತು.
ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ರಕ್ತದಾನವೇ ಶ್ರೇಷ್ಠದಾನವಾಗಿದ್ದು, ಇನ್ನೊಬ್ಬರ ಜೀವ ಉಳಿಸುವ ಈ ಕಾರ್ಯ ಎಲ್ಲರಿಗೂ ಮಾದರಿಯಾಗಬೇಕು. ರಕ್ತದಾನ ಮಹಾದಾನವಾಗಿದ್ದು, ಇದರಿಂದ ಸಮಾಜದ ಸ್ವಾಸ್ಥ್ಯ ಹಾಗೂ ಬಡ ಜನತೆಯ ಅವಶ್ಯಕತೆಗಳು ಪೂರೈಕೆಯಾಗಲಿದೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ದೇಚಮ್ಮ ಕಾಳಪ್ಪ, ಡಾ. ಕರುಂಬಯ್ಯ, ಸಹಾರ ಫ್ರೆಂಡ್ಸ್ ಸದಸ್ಯರಾದ ಅಬ್ದುಲ್ ರೌಫ್, ಮೊಹಸಿನ್, ಮಹಮ್ಮದ್ ಖಾಜಾ, ಸಮಿಉಲ್, ಇರ್ಷಾದ್, ಆರ್ಚಿಪ್, ಪ್ರಮುಖರಾದ ಸೂರಜ್ ಹೊಸುರು, ಮಹಾದೇವ, ಮಹಮ್ಮದ್ ನಯಾಜ್, ಶಶಿ ಮತ್ತಿತರರಿದ್ದರು.