ಸುರಿಯುತ್ತಿರುವ ಮಳೆಯಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರುವ ಮಳೆಯಿಂದ ಇದೀಗ ವೈರಲ್ ಫೀವರ್ ಹಾಗೂ ಡೆಂಘೀ- ಚಿಕನ್ ಗುನ್ಯಾ ಉಲ್ಬಣಗೊಳ್ಳುವ ಆತಂಕ ಉಂಟಾಗಿದೆ.ಕಳೆದ ನಾಲ್ಕೈದು ದಿನಗಳಿಂದ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರೀ ಗಾಳಿ- ಮಳೆ ಸುರಿಯುತ್ತಿದೆ. ಇದು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ.
ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವ ಪ್ರಕರಣದಲ್ಲಿ ಡೆಂಫೀ ಮತ್ತು ವೈರಲ್ ಜ್ವರದ ಆರಂಭಿಕ ಲಕ್ಷಣಗಳು ಒಂದೇ ರೀತಿ ಯಿರುವುದರಿಂದ ವೈದ್ಯರಿಗೆ ರೋಗ ಪತ್ತೆ ಸವಾಲಾಗಿದೆ.
ಪ್ರತಿ ವರ್ಷ ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ನಲ್ಲಿ ಡೆಂಘೀ ಹಾಗೂ ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚಾಗಿ ಕಾಣಿಸಿ ಕೊಳ್ಳಲಿವೆ. ಈ ಬಾರಿ ಜೂನ್‌ನಲ್ಲಿ ಮಳೆ ಬಂದಿಲ್ಲ. ಇದೀಗ ಜುಲೈನಲ್ಲಿ ಮಳೆ ಆರಂಭಗೊಂಡಿದೆ. ಈ ಬದಲಾದ ಪರಿಸ್ಥಿತಿಯಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅದಕ್ಕೆ ಬೇಕಾದ ಮುನ್ನಚ್ಚರಿಕೆ ಮತ್ತು ಜಾಗೃತಿ ಮೂಡಿಸು ವುದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಎಚ್‌ಒ ಮಂಜುನಾಥ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.--- ಬಾಕ್ಸ್---
ವೈರಲ್ ಫೀವರ್ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಯ ಕ್ಲಿನಿಕ್ ಮತ್ತು ಮೆಡಿಕಲ್ ಶಾಪ್‌ಗಳ ಮುಂದೆ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದು ಕಂಡು ಬರುತ್ತಿವೆ.-- ಬಾಕ್ಸ್ --
ಕಳೆದ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು ಏಳು ಡೆಂಘೀ ಪ್ರಕರಣ ದೃಢಪಟ್ಟಿವೆ. ಈ ಪೈಕಿ ಮಾರ್ಚ್ ಮತ್ತು ಮೇ ನಲ್ಲಿ ತಲಾ 2 ಪ್ರಕರಣ, ಫೆಬ್ರವರಿ, ಏಪ್ರಿಲ್ ಹಾಗೂ ಜೂನ್‌ನಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿವೆ. ಈವರೆಗೆ ಒಟ್ಟು 9421 ಪ್ರಕರಣಗಳಲ್ಲಿ ಡೆಂಘೀ ಲಕ್ಷಣ ಕಂಡು ಬಂದಿದೆ. 2305 ಮಾದರಿ ಪರೀಕ್ಷೆ ನಡೆಸಲಾಗಿದೆ.
---ಕೋಟ್---ಸದ್ಯಕ್ಕೆ ಜಿಲ್ಲೆಯಲ್ಲಿ ವೈರಲ್ ಫೀವರ್ ಸಮಸ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆತಂಕ ಪಡಬೇಕಾದ ಪರಿಸ್ಥಿತಿ ಇಲ್ಲ. ಮುಂದಿನ ಒಂದೆರಡು ವಾರದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಎಲ್ಲಾ ತಾಲೂಕು ಆರೋಗ್ಯಾಧಿ ಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮ ವಹಿಸುವುದಕ್ಕೆ ಸೂಚನೆ ನೀಡಲಾಗಿದೆ. ಡೆಂಘೀ ಬಗ್ಗೆಯೂ ಜಾಗೃತಿಗೆ ತಿಳಿಸಲಾಗಿದೆ.
---ಕೋಟ್---
ಜೂನ್‌ನಲ್ಲಿ ಬಿಸಿಲ ವಾತಾವರಣ ಇದ್ದ ಕಾರಣಕ್ಕೆ ವೈರಲ್ ಫೀವರ್ ಪ್ರಕರಣ ಹೆಚ್ಚಾಗಿದ್ದವು. ಇದೀಗ ಸಾಮಾನ್ಯವಾಗಿ ಜುಲೈ ನಲ್ಲಿ ದಾಖಲಾಗುವಷ್ಟು ಪ್ರಕರಣ ದಾಖಲಾಗುತ್ತಿವೆ. ತುಂಬಾ ವ್ಯತ್ಯಾಸ ಉಂಟಾಗಿಲ್ಲ. ಆದರೆ, ಜನರು, ಅದರಲ್ಲೂ ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸಬೇಕಿದೆ.- ಡಾ.ಚಂದ್ರಶೇಖರ್ ಸಾಲಿಮಠ್, ವೈದ್ಯಕೀಯ ಅಧೀಕ್ಷಕ, ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ, ಚಿಕ್ಕಮಗಳೂರು