ವೀರೇಂದ್ರ ಹೆಗ್ಗಡೆ ಕನ್ನಡ ನಾಡಿನ ಹೆಮ್ಮೆಯ ಸಂಕೇತ

KannadaprabhaNewsNetwork |  
Published : Jun 21, 2024, 01:00 AM IST
ಗೊರವಿನಕಲ್ಲು ಗ್ರಾಮದಲ್ಲಿ ನಡೆದ ಶ್ರೀಹರಿ ಸೇವಾ ಟ್ರಸ್ಟ್ ನ ಶ್ರೀ ಕಂಬದ ನರಸಿಂಹ ಸ್ವಾಮಿ ದೇವಾಲಯಕ್ಕೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಅರ್ಪಣೆ ಮಾಡಿರುವ ಮೂರು ಲಕ್ಷ ಹಣದ ಚೆಕ್ ನೀಡಲಾಯಿತು | Kannada Prabha

ಸಾರಾಂಶ

ಗೊರವಿನಕಲ್ಲು ಗ್ರಾಮದಲ್ಲಿ ನಡೆದ ಶ್ರೀಹರಿ ಸೇವಾ ಟ್ರಸ್ಟ್ ನ ಶ್ರೀ ಕಂಬದ ನರಸಿಂಹ ಸ್ವಾಮಿ ದೇವಾಲಯಕ್ಕೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಅರ್ಪಣೆ ಮಾಡಿರುವ 3ಲಕ್ಷ ರು. ಚೆಕ್ ನೀಡಲಾಯಿತು.

ಕಂಬದ ನರಸಿಂಹ ಸ್ವಾಮಿ ದೇವಾಲಯಕ್ಕೆ ₹3ಲಕ್ಷದ ಚೆಕ್ ವಿತರಣೆ

ಕನ್ನಡಪ್ರಭ ವಾರ್ತೆ ಹೊಸದುರ್ಗದೇವಸ್ಥಾನದ ಹುಂಡಿಗೆ ಹಾಕಿದ ಹಣವನ್ನು ಭಕ್ತರ ಅಭಿವೃದ್ಧಿಗಾಗಿ ವಿನಿಯೋಗಿಸುತ್ತಿರುವ ಏಕೈಕ ಧಾರ್ಮಿಕ ಶ್ರದ್ಧಾ ಕೇಂದ್ರವೆಂದರೆ ಅದು ಧರ್ಮಸ್ಥಳ. ರಾಜ್ಯದ ಮೂಲೆ ಮೂಲೆಗಳಲ್ಲಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನ ಮಾಡುತ್ತಾ ಬಂದಿರುವ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕನ್ನಡ ನಾಡಿನ ಹೆಮ್ಮೆಯ ಸಂಕೇತ ಎಂದು ಸದ್ಗುರು ಆಯುರ್ವೇದ ಸಂಸ್ಥೆಯ ಮಾಲೀಕ ಉದ್ಯಮಿ ಡಿ.ಎಸ್.ಪ್ರದೀಪ್ ತಿಳಿಸಿದರು.

ತಾಲೂಕಿನ ಗೊರವಿನಕಲ್ಲು ಗ್ರಾಮದಲ್ಲಿ ನಡೆದ ಶ್ರೀಹರಿ ಸೇವಾ ಟ್ರಸ್ಟ್‌ನ ಶ್ರೀ ಕಂಬದ ನರಸಿಂಹ ಸ್ವಾಮಿ ದೇವಾಲಯಕ್ಕೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಅರ್ಪಣೆ ಮಾಡಿರುವ ₹3ಲಕ್ಷ ರು. ಚೆಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇವಲ ಮಾತನಾಡುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳು ಮೇಲು ಎಂಬ ನಾಣ್ಣುಡಿಯಂತೆ ಧರ್ಮಸ್ಥಳ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹೊಸದುರ್ಗ ತಾಲೂಕಿನ 234 ದೇವಸ್ಥಾನಗಳಿಗೆ ಮೂರುವರೆ ಕೋಟಿ ಹಣವನ್ನು ದೇವಸ್ಥಾನಗಳಿಗೆ ಅರ್ಪಣೆ ಮಾಡಿ ಧಾರ್ಮಿಕ ಕಾರ್ಯದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪಾತ್ರ ಏನೆಂಬುದನ್ನು ತಿಳಿಸಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಬಿ.ಪಿ. ಒಂಕಾರಪ್ಪ ಮಾತನಾಡಿ, ಮಧ್ಯವರ್ಜನ ಶಿಬಿರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ವಿದ್ಯಾರ್ಥಿ ವೇತನ, ಕೌಶಲ್ಯ ತರಬೇತಿ, ಕೆರೆಗಳ ಅಭಿವೃದ್ಧಿ ಕಾರ್ಯಗಳನ್ನ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ನಿರ್ಮಾಣ ಮಾಡುತ್ತಿರುವುದು ಅಭಿನಂದನಾರ್ಹ, ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂಬುದು ಪೂಜ್ಜರ ಸಂಕಲ್ಪವಾಗಿದ್ದು ಕನ್ನಡ ನಾಡು ಮತ್ತು ಭಾರತ ದೇಶದ ಬಗ್ಗೆ ಪೂಜ್ಯರಿಗೆ ಅತ್ಯಂತ ಹೆಚ್ಚು ಗೌರವವಿದೆ ಎಂದರು.

ಇದೇ ವೇಳೆ ಸಮಾಜ ಸೇವಕ ಶಿವಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹೊಸದುರ್ಗ ವಲಯ ಯೋಜನಾಧಿಕಾರಿ ಶಿವಣ್ಣ, ಪುರಸಭಾ ಸದಸ್ಯ ರಾಮಚಂದ್ರಪ್ಪ, ಶ್ರೀಹರಿ ಸೇವಾ ಟ್ರಸ್ಟ್ ಅಧ್ಯಕ್ಷ ಚಂದ್ರಪ್ಪ, ಅಂಜಿನಪ್ಪ, ಉದ್ಯಮಿ ಹನುಮಂತಪ್ಪ, ದೀಪಿಕಾ ಸತೀಶ್, ಜಿಲ್ಲಾ ಜನಜಗೃತಿ ವೇದಿಕೆ ಸದಸ್ಯ ತುಂಬಿನಕೆರೆ ಬಸವರಾಜ್, ನಾಗರಾಜು, ರವಿಕುಮಾರ್, ದೇವರಾಜ್, ರಾಜಪ್ಪ, ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು