ಕನ್ನಡಾಂಭೆಯ ಸೇವೆ ಮಾಡುವದೇ ಪುಣ್ಯ

KannadaprabhaNewsNetwork |  
Published : Nov 01, 2024, 12:32 AM ISTUpdated : Nov 01, 2024, 12:33 AM IST
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ನೃತ್ಯಗಳ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಮಗೆಲ್ಲರಿಗೂ ಕನ್ನಡಾಂಬೆಯ ಸೇವೆ ಮಾಡುವುದೇ ಪುಣ್ಯ. ಜಾನಪದ ಕಲೆಯನ್ನು ಮುನ್ನಲೆಗೆ ತರಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಸವ ಧರ್ಮ ಪಾಲಿಸುತ್ತಿರುವದು ಶ್ಲಾಘನೀಯ ಎಂದು ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಮಗೆಲ್ಲರಿಗೂ ಕನ್ನಡಾಂಬೆಯ ಸೇವೆ ಮಾಡುವುದೇ ಪುಣ್ಯ. ಜಾನಪದ ಕಲೆಯನ್ನು ಮುನ್ನಲೆಗೆ ತರಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಸವ ಧರ್ಮ ಪಾಲಿಸುತ್ತಿರುವದು ಶ್ಲಾಘನೀಯ ಎಂದು ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಆಶ್ರಯದಲ್ಲಿ ಕನಾ೯ಟಕ ಸುವರ್ಣ ಸಂಭ್ರಮ- ೫೦ರ ನಿಮಿತ್ತ ಜಿಲ್ಲಾ ಮಟ್ಟದ ಸಾಂಸ್ಕೃತಿಕ ನೃತ್ಯಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಭೆ ದೈವದತ್ತವಾದದ್ದು. ಅದಕ್ಕೆ ವೇದಿಕೆ ಅವಶ್ಯಕತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಒದಗಿಸಿಕೊಟ್ಟಿದೆ ಎಂದರು.

ವಿಶ್ರಾಂತ ಪ್ರಾಚಾರ್ಯ ಬಿ.ಎಂ ಅಜೂರ ಮಾತನಾಡಿ, ಎಂಟು ಪ್ರಕಾರದ ಶಾಸ್ತ್ರೀಯ ನೃತ್ಯಗಳಿವೆ. ಭರತನಾಟ್ಯಕ್ಕೆ ಸಾವಿರಾರು ವರ್ಷದ ಇತಿಹಾಸ ಹೊಂದಿದೆ. ತಾಂಡವ ನೃತ್ಯ ಅತ್ಯಂತ ಪ್ರಾಚೀನವಾದದ್ದು. ಶಿವ ತಾಂಡವ ನೃತ್ಯ ಪ್ರಖ್ಯಾತ ಹೊಂದಿದೆ. ಇಂದು ಜಿಲ್ಲೆಯ ಎಲ್ಲ ನೃತ್ಯ ಕಲಾವಿದರಿಗೆ ಈ ವೇದಿಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಜಯಕುಮಾರ ಘಾಟಗೆ ಮಾತನಾಡಿ, ಸಂಗೀತ ಮತ್ತು ಸಾಹಿತ್ಯಕ್ಕೆ ಚಿಂತೆಯನ್ನು ದೂರ ಮಾಡುವ ಶಕ್ತಿ ಇದೆ. ಇದನ್ನು ಜಿಲ್ಲೆಯಾದ್ಯಂತ ಚಟುವಟಿಕೆ ಮಾಡುತ್ತಿರುವದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಅಭಿಷೇಕ ಚಕ್ರವರ್ತಿ, ರಾಜೇಶ್ವರಿ ಮೊಪಗಾರ, ಹಾಸಿಂಪೀರ ವಾಲಿಕಾರ, ಭಾರತಿ ಕುಂದನಗಾರ, ಸುರೇಶ ಜತ್ತಿ, ಡಾ.ಸಂಗಮೇಶ ಮೇತ್ರಿ, ಪರವೀನ ಶೇಖ, ಡಾ.ಆನಂದ ಕುಲಕರ್ಣಿ, ವಿಜಯಲಕ್ಷೀ ಹಳಕಟ್ಟಿ, ಸುರೇಖಾ ಪಾಟೀಲ, ಸುಮಲತಾ ಗಡಿಯಪ್ಪನವರ, ಶಿವನಗೌಡ ಬಿರಾದಾರ, ವಿಜಯಕುಮಾರ ಕಾಳಶೆಟ್ಟಿ, ಗುರಲಿಂಗಯ್ಯಾ ಮಠ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ