ವಿಷ್ಣು ಪೋಸ್ಟರ್‌ ಮುಂದೆ ಅಪಹಾಸ್ಯ: ಕ್ಷಮೆ ಕೋರಿದ ವಿದ್ಯಾರ್ಥಿಗಳು

KannadaprabhaNewsNetwork |  
Published : Feb 15, 2026, 03:00 AM IST
15ಕೆಡಿವಿಜಿ1, 2-ದಾವಣಗೆರೆಯಲ್ಲಿ ಶನಿವಾರ ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಹಿರಿಯ ಉಪಾಧ್ಯಕ್ಷ ಎಲ್.ಎಂ.ಹನುಮಂತಪ್ಪ, ಹು-ಧಾ ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ..................15ಕೆಡಿವಿಜಿ3-ದಾವಣಗೆರೆಯಲ್ಲಿ ಶನಿವಾರ ಮಾದಿಗ ಮಹಾಸಭಾದಿಂದ ನಡೆದ ಮಾದಿಗ ಸಮಾಜದ ಸಮಾಲೋಚನಾ ಸಭೆಯಲ್ಲಿ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಐರಣಿ ಶ್ರೀಗಳು, ಬಿ.ಎಚ್.ವೀರಭದ್ರಪ್ಪ, ಎಲ್.ಎಂ.ಹನುಮಂತಪ್ಪ ಇತರರು ಶ್ರೀ ಜಯದೇವ ಜಗದ್ಗುರುಗಳ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.................15ಕೆಡಿವಿಜಿ4-ದಾವಣಗೆರೆಯಲ್ಲಿ ಶನಿವಾರ ಮಾದಿಗ ಮಹಾಸಭಾದಿಂದ ನಡೆದ ಮಾದಿಗ ಸಮಾಜದ ಸಮಾಲೋಚನಾ ಸಭೆಯಲ್ಲಿ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಐರಣಿ ಶ್ರೀಗಳು, ಬಿ.ಎಚ್.ವೀರಭದ್ರಪ್ಪ, ಎಲ್.ಎಂ.ಹನುಮಂತಪ್ಪ ಇತರರು ಪಾಲ್ಗೊಂಡಿರುವುದು. | Kannada Prabha

ಸಾರಾಂಶ

ಕನ್ನಡ ಚಿತ್ರ ರಂಗದ ಮೇರು ನಟ ದಿ.ಡಾ.ವಿಷ್ಣುವರ್ಧನ್‌ ಅವರ ಪೋಸ್ಟ್ ಮುಂದೆ ‘ರೀಲ್ಸ್‌’ ಹುಚ್ಚಿಗೆ ಅಪಹಾಸ್ಯ ಮಾಡಿದ್ದ ತಪ್ಪಿಗೆ ಪೊಲೀಸರ ಮುಂದೆ ಖಾಸಗಿ ಕಾಲೇಜಿನ ನಾಲ್ವರು ಪಿಯುಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕ್ಷಮೆ ಕೋರುವ ಮೂಲಕ ವಿವಾದ ಪರ್ಯಾವಸಗೊಂಡ ಘಟನೆ ಶನಿವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡ ಚಿತ್ರ ರಂಗದ ಮೇರು ನಟ ದಿ.ಡಾ.ವಿಷ್ಣುವರ್ಧನ್‌ ಅವರ ಪೋಸ್ಟ್ ಮುಂದೆ ‘ರೀಲ್ಸ್‌’ ಹುಚ್ಚಿಗೆ ಅಪಹಾಸ್ಯ ಮಾಡಿದ್ದ ತಪ್ಪಿಗೆ ಪೊಲೀಸರ ಮುಂದೆ ಖಾಸಗಿ ಕಾಲೇಜಿನ ನಾಲ್ವರು ಪಿಯುಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕ್ಷಮೆ ಕೋರುವ ಮೂಲಕ ವಿವಾದ ಪರ್ಯಾವಸಗೊಂಡ ಘಟನೆ ಶನಿವಾರ ನಡೆದಿದೆ.

ಜೆ.ಪಿ. ನಗರ ಹತ್ತಿರದ ಸೆಂಟ್ರಲ್‌ ಮಾಲ್ ಬಳಿಕ ಹಾಕಲಾಗಿದ್ದ ವಿಷ್ಣುವರ್ಧನ್‌ ಅವರ ಪೋಸ್ಟರ್ ಮುಂದೆ ನಿಂತು ಸಿಹಿ ತಿನ್ನಿಸುವಂತೆ ನಟಿಸಿ ವಿದ್ಯಾರ್ಥಿಗಳು ಅಪಹಾಸ್ಯ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್ ಆಗಿತ್ತು. ಈ ವಿಡಿಯೋ ವಿರುದ್ಧ ಕೆರಳಿದ ವಿಷ್ಣುವರ್ಧನ್ ಅಭಿಮಾನಿಗಳು, ಕಿಡಿಗೇಡಿಗಳ ಪತ್ತೆಗೆ ಜೆ.ಪಿ.ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ವಿಡಿಯೋ ಆಧರಿಸಿ ತನಿಖೆಗಿಳಿದ ಪೊಲೀಸರು, ಅದರಲ್ಲಿನ ದೃಶ್ಯಾವಳಿಯಲ್ಲಿದ್ದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಅಂತೆಯೇ ಶನಿವಾರ ಜೆ.ಪಿ. ನಗರ ಠಾಣೆಗೆ ಪೋಷಕರ ಜತೆ ವಿದ್ಯಾರ್ಥಿಗಳು ಹಾಜರಾಗಿದ್ದರು. ಕೊನೆಗೆ ತಾವು ತಿಳಿಯದೆ ತಪ್ಪು ಮಾಡಿದ್ದೇವೆ. ನಮಗೂ ಕನ್ನಡ ಭಾಷೆ ಹಾಗೂ ಕಲಾವಿದರ ಮೇಲೆ ಅಭಿಮಾನವಿದೆ. ತಮ್ಮ ಮಕ್ಕಳನ್ನು ಕ್ಷಮಿಸುವಂತೆ ಪೋಷಕರು ಮನವಿ ಮಾಡಿದರು. ಈ ಕೋರಿಕೆಗೆ ಪೊಲೀಸರು ಹಾಗೂ ವಿಷ್ಣುವರ್ಧನ್ ಅಭಿಮಾನಿಗಳು ಸಮ್ಮತಿಸಿದ್ದಾರೆ. ಕೊನೆಗೆ ಈ ರೀತಿ ತಪ್ಪು ಮಾಡುವುದಿಲ್ಲ ಎಂದು ಕ್ಷಮಾಪಣೆ ಬರೆಸಿಕೊಂಡು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಪೊಲೀಸರು ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಕಲಾವಿದರಿಗೂ ಗೌರವಧನ ಕೊಡಿ: ಶಿವರಾಜ್‌ಕುಮಾರ್‌
ರಾಷ್ಟ್ರೀಯ ಹೆದ್ದಾರಿ, ಚರಂಡಿ ಕಾಮಗಾರಿ ಅವೈಜ್ಞಾನಿಕ