ಅದ್ಧೂರಿಯಾಗಿ ವಿಶ್ವ ಹಿಂದೂ ಪರಿಷತ್ ಗಣಪತಿ ಮೂರ್ತಿ ಶೋಭಾಯಾತ್ರೆ

KannadaprabhaNewsNetwork |  
Published : Oct 03, 2026, 02:15 AM IST
ರಾಣಿಬೆನ್ನೂರು ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಗಣಪತಿ ಮೂರ್ತಿಯ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು. | Kannada Prabha

ಸಾರಾಂಶ

ರಾಣಿಬೆನ್ನೂರು ನಗರದ ಸಂಗಮ್ ವೃತ್ತದ ಬಳಿ ವಿಶ್ವ ಹಿಂದು ಪರಿಷತ್, ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ ಪ್ರಯುಕ್ತ ಶುಕ್ರವಾರ ನಗರದಲ್ಲಿ ಅದ್ಧೂರಿಯಾಗಿ ಶೋಭಾಯಾತ್ರೆ ಜರುಗಿತು.

ರಾಣಿಬೆನ್ನೂರು: ನಗರದ ಸಂಗಮ್ ವೃತ್ತದ ಬಳಿ ವಿಶ್ವ ಹಿಂದು ಪರಿಷತ್, ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ ಪ್ರಯುಕ್ತ ಶುಕ್ರವಾರ ನಗರದಲ್ಲಿ ಅದ್ಧೂರಿಯಾಗಿ ಶೋಭಾಯಾತ್ರೆ ಜರುಗಿತು.

ಇಲ್ಲಿಯ ಸಂಗಮ್ ಸರ್ಕಲ್ ವೃತ್ತದಿಂದ ಹೊರಟ ಶೋಭಾಯಾತ್ರೆ ರಂಗನಾಥ ನಗರ, ಸುಣಗಾರ ಓಣಿ, ಕೋಟ್ರೇಶ್ವರ ನಗರ, ಕುಂಬಾರ ಓಣಿ, ದೊಡ್ಡಪೇಟೆ, ಚಕ್ಕಿ ಮಿಕ್ಕಿ ಸರ್ಕಲ್, ಎಂ.ಜಿ.ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್, ಬಸ್ ನಿಲ್ದಾಣ, ರಾಜರಾಜೇಶ್ವರಿ ನಗರ ಕ್ರಾಸ್ ಮುಂತಾದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಲ್ಲಿಂದ ಮೂರ್ತಿಯನ್ನು ಹರಿಹರಕ್ಕೆ ತೆಗೆದುಕೊಂಡು ಹೋಗಿ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.

ಶೋಭಾಯಾತ್ರೆಯಲ್ಲಿ ಬೃಹತ್ ನರಸಿಂಹ ಮೂರ್ತಿ, ವಿವಿಧ ಬಗೆಯ ಗೊಂಬೆಗಳು, ಸಮಾಳ, ಹಲಗೆ ಹಾಗೂ ಡಿಜೆ ಸಂಗೀತ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದವು. ಯುವಕ, ಯವತಿಯರು ಡಿಜೆ ಹಾಡಿಗೆ ತಕ್ಕಂತೆ ನೃತ್ಯ ಮಾಡಿದರು.

ಮೆರವಣಿಗೆ ಸಾಗಿಬರುವ ದಾರಿಯುದ್ದಕ್ಕೂ ವಿವಿಧ ಸರ್ಕಲ್‌ಗಳಲ್ಲಿ ದಾನಿಗಳು ಮತ್ತು ವಿವಿಧ ಸಮಾಜಗಳ ವತಿಯಿಂದ ಸಾರ್ವಜನಿಕರಿಗೆ ಉಪಾಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರಕಾಶ ಬುರಡಿಕಟ್ಟಿ, ನಾಗರಾಜ ಕೊರವರ, ವಿನಯಕುಮಾರ ಬಾಳನಗೌಡ್ರ, ಅಭಿಷೇಕ ಪಟ್ಟಣಶೆಟ್ಟಿ, ಅಜಯ ಮಠದ, ಕುಬೇರಗೌಡ ಸಣ್ಣಮನಿ, ನಾಗರಾಜ ಪವಾರ, ಅನಿಲ್ ಮಳವಳ್ಳಿ, ಮಂಜುನಾಥ ಉಪ್ಪಾರ, ದಿಲೀಪ್ ಕಾಟಿ, ಪ್ರಶಾಂತ ಕುರುಬರ, ಸಂದೇಶ ಮೆಹರವಾಡೆ, ಮನೋಜ, ಸುನಿಲ್ ಮಿಸ್ಕಿನ್, ಅಭಿಷೇಕ ಕುಂದಾಪುರ, ರೋಹಿತ್ ಗೌಡ, ಚನ್ನಬಸಪ್ಪ ಓಂಕಾರಣ್ಣನವರ, ಬೀರೇಶ ಗುದಿಗೇರ, ಕಾಂತೇಶ ಉಪ್ಪಾರ, ಸಂತೋಷ ದೈವಜ್ಞ, ಬಸವರಾಜ ಉಪ್ಪಾರ, ಚಂದ್ರು ಮುದೇನೂರ, ಕೇಶವ ಹೆದ್ದೇರಿ, ಶಶಿ ಬಳ್ಳಾರಿ, ಬೀರೇಶ ಗುದಿಗೇರ, ಶರತ್ ನೂಲಗೇರಿ, ನಾಗರಾಜ ಕಲಾಲ, ಮಂಜು ಉಪ್ಪಾರ, ಕಿಶೋರ ಬಗಾಡಿ, ಮಯೂರ ಭಂಡಾರಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯಕೀಯ ಕ್ಷೇತ್ರದಲ್ಲಿ ದೇಶಕ್ಕೆ ಜಿಲ್ಲೆ ಮಾದರಿ: ಡಾ. ಬೊಮ್ಮನಹಳ್ಳಿ
ಸಮಾಜದ ಎಲ್ಲ ಒಳಪಂಗಡಗಳ ಒಗ್ಗೂಡಿಸುವಿಕೆ ಮೊದಲ ಆದ್ಯತೆ: ನಿರಾಣಿ