ವರ್ತಕರಿಗೆ ಗುಲಾಬಿ ಹೂ ಕೊಟ್ಟು ಮಂಡ್ಯ ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಬೆಂಬಲ ಕೋರಿಕೆ

KannadaprabhaNewsNetwork |  
Published : Feb 09, 2024, 01:47 AM IST
೮ಕೆಎಂಎನ್‌ಡಿ-೨ಮಂಡ್ಯ ಬಂದ್‌ಗೆ ಸ್ವಯಂಪ್ರೇರಿತವಾಗಿ ಬೆಂಬಲ ನೀಡುವಂತೆ ಕೋರಿ ವರ್ತಕರಿಗೆ ಗುಲಾಬಿ ಹೂ ನೀಡಿ ಮನವಿ ಮಾಡಿದರು. | Kannada Prabha

ಸಾರಾಂಶ

ಹನುಮ ಧ್ವಜವನ್ನು ಹಾರಿಸುವವರೆಗೂ ನಮ್ಮ ಹೋರಾಟ ನಿರಂತವಾಗಿ ಮುಂದುವರೆಯುತ್ತದೆ. ಹಾಗಾಗಿ ಮಂಡ್ಯನಗರ ಬಂದ್‌ಗೆ ಸಾರ್ವಜನಿಕರು, ವರ್ತಕರು, ರಸ್ತೆ ಬದಿ ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಬೇಕರಿ ಮಾಲೀಕರು, ಆಟೋ ಚಾಲಕರು ಸೇರಿದಂತೆ ಎಲ್ಲರೂ ಫೆ.9ರ ಬೆಳಗ್ಗೆ ೬ಗಂಟೆಯಿಂದ ಸಂಜೆ ೬ಗಂಟೆವರೆಗೆ ಬಂದ್‌ಗೆ ಸಹಕಾರ ಕೊಡಿ. ಬಂದ್‌ಗೆ ಬಲವಂತ ಮಾಡುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆರಗೋಡು ಹನುಮಧ್ವಜ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀರಾಮ ಭಜನಾ ಮಂಡಳಿಯವರು ಕರೆ ನೀಡಿರುವ ಮಂಡ್ಯ ನಗರ ಬಂದ್‌ಗೆ ಸಹಕರಿಸುವಂತೆ ವರ್ತಕರು ಮತ್ತು ಅಂಗಡಿ ಮಾಲೀಕರಿಗೆ ಗುಲಾಬಿ ಹೂ ನೀಡಿ ಮನವಿ ಮಾಡಿದರು.

ಹನುಮ ಧ್ವಜವನ್ನು ಹಾರಿಸುವವರೆಗೂ ನಮ್ಮ ಹೋರಾಟ ನಿರಂತವಾಗಿ ಮುಂದುವರೆಯುತ್ತದೆ. ಹಾಗಾಗಿ ಮಂಡ್ಯನಗರ ಬಂದ್‌ಗೆ ಸಾರ್ವಜನಿಕರು, ವರ್ತಕರು, ರಸ್ತೆ ಬದಿ ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಬೇಕರಿ ಮಾಲೀಕರು, ಆಟೋ ಚಾಲಕರು ಸೇರಿದಂತೆ ಎಲ್ಲರೂ ಬೆಳಗ್ಗೆ ೬ಗಂಟೆಯಿಂದ ಸಂಜೆ ೬ಗಂಟೆವರೆಗೆ ಬಂದ್‌ಗೆ ಸಹಕಾರ ಕೊಡಿ. ಬಂದ್‌ಗೆ ಬಲವಂತ ಮಾಡುವುದಿಲ್ಲ ಎಂದರು.

ಕೆರಗೋಡು ಗ್ರಾಮದಲ್ಲಿ ರಾಷ್ಟ್ರೀಯ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ದಿನದಂದು ತ್ರಿವರ್ಣ ಧ್ವಜ ಹಾಗೂ ನಾಡಧ್ವಜ ಹಾರಿಸುವ ಪರಿಪಾಠವನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದೆ. ಅದರಂತೆ ಜ.೨೬ ರಂದು ರಾಷ್ಟ್ರ ಧ್ವಜ ಹಾರಿಸಿ ಗೌರವ ಸೂಚಿಸಲಾಗಿದೆ. ದೇಶಭಕ್ತಿಯ ಬಗ್ಗೆ ಮಂಡ್ಯದ ಜನರಿಗೆ ಕಾಂಗ್ರೆಸ್ ಪಾಠ ಮಾಡಬೇಕಿಲ್ಲ. ಭಾರತವನ್ನು ತುಂಡರಿಸುವ, ಕರ್ನಾಟಕವನ್ನು ಪ್ರತ್ಯೇಕ ರಾಷ್ಟ್ರ ಮಾಡುವ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪಕ್ಷದವರಿಂದ ರಾಷ್ಟ್ರಭಕ್ತಿ, ಭಾರತದ ಅಖಂಡತೆಯ ಬಗೆಗಿನ ಮಾತುಗಳು ಹಾಸ್ಯಾಸ್ಪದ. ರಾಮ ಭಕ್ತಿ-ರಾಷ್ಟ್ರ ಶಕ್ತಿ. ನಾವು ಹನುಮನ ನಾಡಿನವರು ಎಂದು ಎಚ್ಚರಿಸಿದರು.

ಇದೇ ವೇಳೆ ಹೂ ನೀಡುವ ಅಭಿಯಾನದಲ್ಲಿ ಬೇಕರಿ ಮಾಲೀಕ ಸಂಘದ ಅಧ್ಯಕ್ಷ ಎಚ್.ಆರ್.ಅರವಿಂದ್, ಹಿಂದೂ ಪರ ಸಂಘಟಕರಾದ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಮಹೇಶ್, ಹುಲಿವಾನ ಮಹೇಶ್, ಪ್ರಸನ್ನ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ