ಕನ್ನಡಪ್ರಭವಾರ್ತೆ ಮಧುಗಿರಿ
ವಿಶ್ವಕರ್ಮರು ಸಮಾಜದ ಅಭಿವೃದ್ದಿ ಚಿಂತಕರು. ತ್ಯಾಗ ಮನೋಭಾವದಿಂದ ಪ್ರಪಂಚದ ಎಲ್ಲ ದೇವಸ್ಥಾನಗಳ ಮೂರ್ತಿಗಳನ್ನು ಸೃಷ್ಠಿಸಿದ ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದು ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ತಿಳಿಸಿದರು.ತಾಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾ.ವಿಶ್ವಕರ್ಮ ಮಹಿಳಾ ಸಂಘದ ಆಶ್ರಯದಲ್ಲಿ ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಕಾಳಿಕಾ ಕಮಠೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ವಿಶ್ವಕರ್ಮರು ಪ್ರಪಂಚದ ಸೃಷ್ಠಿಕರ್ತರು, ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ ,ಅರಬ್ಬಿ ಸಮುದ್ರದಿಂದ ಹಿಡಿದು ಬಂಗಾಳ ಕೊಲ್ಲಿವರೆಗೊ ಎಲ್ಲ ದೇವಸ್ಥಾನಗಳ ಮೂರ್ತಿಗಳನ್ನು ಸೃಷ್ಠಿಸಿದ ಶಿಲ್ಪಿಗಳು. ನಿಸ್ವಾರ್ಥ ಮನೋಭಾವದ ತ್ಯಾಗಮೂರ್ತಿಗಳು ದೇಶದ ಪ್ರಗತಿಗೆ ಮತ್ತು ಸಮಾಜದ ಅಭ್ಯುದಯಕ್ಕೆ ಕೋಡುಗೆ ನೀಡಿದ್ದು, ವಿಶ್ವಕರ್ಮರು ಜನರ ಹಿತ ಸಂರಕ್ಷಣೆಗೆ ಸದಾ ಅಲೋಚಿಸುವ ಮೂಲಕ ಪ್ರಕೃತಿ ಸಂಪತ್ತನ್ನು ಎಲ್ಲರಿಗೂ ಸಮಪಾಲು ಹಂಚಿದವರು. ಎಲ್ಲರ ಹಿತ ಚಿಂತನೆ ಬಯಸುವವರು.ದೈವ ಸೃಷ್ಠಿಯನ್ನು ಶಿಲೆಯಲ್ಲಿ ರೂಪಿಸಿ ಇಡೀ ಜಗತ್ತಿಗೆ ಒಳಿತು ಬಯಸಿ ಭಕ್ತಿ ಭಾವವನ್ನು ಬೆಳಸಿದವರು ವಿಶ್ವರ್ಮರು. ದೇಗುಲದ ಬಾಗಿಲು ಮತ್ತು ರಾಜಗೋಪುರದ ನಿರ್ಮಾಣಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತು ಎಂಎಲ್ಸಿ ಆರ್,ರಾಜೇಂದರ ಅವರ ಗಮನಕ್ಕೆ ತಂದು ದೇಗುಲದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ ಜೊತೆಗೆ ನಾನು ವೈಯಕ್ತಿಕವಾಗಿ ದೇವಸ್ಥಾನದ ಅಭಿವೃದ್ಧಿಗೆ 1 ಲಕ್ಷ ರು.ನೀಡುವುದಾಗಿ ಘೋಷಿಸಿದರು ಮಂಜುನಾಥ್ ಎಂದರು.ಗೌರವಾಧ್ಯಕ್ಷ ಚಂದ್ರಚಾರ್ ಮಾತನಾಡಿ, ಪ್ರಾಚೀನ ಪರಂಪರೆಯಿಂದಲೂ ವಿಶ್ವರ್ಕಮರು ತಮ್ಮ ಕುಟುಂಬದ ಬೆಳವಣಿಗೆಗಿಂತ ಸಮಾಜದ ಬೆಳವಣಿಗೆ ಶ್ರೇಷ್ಠವೆಂದು ಭಾವಿಸಿ ಸಮಾಜವನ್ನು ಸದೃಡವಾಗಿ ಕಟ್ಟಿದವರು. ಇಡೀ ಜಗತ್ತು ಭಾರತ ದೇಶವನ್ನು ನೋಡುತ್ತಿದೆ. ಕೆಲವೇ ತಿಂಗಳುಗಳ ಹಿಂದೆ ಆಯೋಧ್ಯೆಯಲ್ಲಿ ನಿರ್ಮಾಣವಾದ ರಾಮ ಮಂದಿರದ ರಾಮಲಾಲ ಮೂರ್ತಿ ನಿರ್ಮಿಸಿದವರು ಅರುಣ್ ವಿಶ್ವರ್ಕಮರು ಮೊದಲು ಕೊನೆ ಎಂಬುದೇ ಇಲ್ಲದ ಆರಾಧನೆ ಇಂದಿಗೂ ಆಭರಣ, ಮೂರ್ತಿಗಳನ್ನು ಮಾಡುವ ಮೂಲಕ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ವಿಶ್ವರ್ಕಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಎಂ.ಆರ್.ಲಕ್ಷ್ಮೀಕಾಂತಾಚಾರ್ ಸಮಾರಂಭದ ಅಧ್ಯಕ್ಷತ ವಹಿಸಿ ಸಮಾಜದ ಬಂಧುಗಳಿಗೆ ಶುಭ ಕೋರಿದರು.ಪುರಸಭೆ ಉಪಾಧ್ಯಕ್ಷೆ ಸುಜಾತ ಶಂಕರನಾರಾಯಣ್ .ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಮಾತನಾಡಿದರು. ಜನಾಂಗದಲ್ಲಿ ವಿವಿಧ ಕಸುಬುಗಳಲ್ಲಿ ಸಾಧನ ಮಾಡಿದ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಾದಮಲ್ಲಿ ಪುರಸಭೆ ಸದಸ್ಯ ಎಂ.ವಿ.ಮಂಜುನಾಥ ಆಚಾರ್,ಅನಂತ ಪದ್ಮನಾಭಚಾರ್,ಸಿಟಿಜನ್ ಟೈಲರ್ ನಾಗಾರಜು, ಕೆ.ಶ್ರೀನಿವಾಸಯ್ಯ, ಭೋಜರಾಜು, ರವಿಕುಮಾರ್,ಮಹಿಳಾ ಅಧ್ಯಕ್ಷೆ ಗೀತಾಲಕ್ಷ್ಮೀ, ಶಕುಂತಲಾ, ಭವನೇಶ್ವರಿ,ಎಂ.ಗೋಪಾಲಚಾರ್,ವಿಶ್ವನಾಥ್ ,ಡಾ.ದ್ರೇಹಚಾರ್, ರಾಮಚಂದ್ರಶೇಖರ್, ಮೋಹನ್, ಗಣೇಶ್, ರವೀಂದ್ರಚಾರ್,ನರಸಿಂಹ, ಎಸ್‌ಎಲ್‌ಎನ್ ರವಿಕುಮಾರ್ ಸೇರಿದಂತೆ ಸಮಾಜದ ಬಂಧುಗಳು ಮತ್ತು ಮಹಿಳಾ ಸಂಘದ ಪದಾಧಿಕಾರಿಗಳು ಇದ್ದರು. ಡಾ.ದ್ರೇಹಚಾರ್ ಸ್ವಾಗತಿಸಿ ವಂದಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಳಿಕಾ ಕಮಠೇಶ್ವರ ಸ್ವಾಮಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ಅದ್ಧೂರಿ ಮೆರವಣಿಗೆ ನಡೆಸಿ ದೇವರ ಕೃಪೆಗೆ ಪಾತ್ರರಾದರು.