ಕಲೆಗೆ ಜೀವಂತಿಕೆ ತುಂಬುವುದರಲ್ಲಿ ವಿಶ್ವಕರ್ಮರು ಪ್ರವೀಣರು

KannadaprabhaNewsNetwork | Published : Sep 28, 2024 1:23 AM

ಸಾರಾಂಶ

ಕಳೆದ ನೂರಾರು ವರ್ಷಗಳಿಂದ ಮೂಲ ವೃತ್ತಿಯಾದ ಶಿಲ್ಪಕಲೆಯಿಂದ ಬದುಕು ರೂಪಿಸಿಕೊಂಡ ವಿಶ್ವಕರ್ಮ ಸಮಾಜ ಎಲ್ಲಾ ವರ್ಗಗಳ ಪ್ರೀತಿ, ವಿಶ್ವಾಸಗಳಿಸಿದೆ. ಕಲೆಗೆ ಜೀವಂತಿಕೆ ತುಂಬುವುದರಲ್ಲಿ ವಿಶ್ವಕರ್ಮರು ಪ್ರವೀಣರು. ಇಂತಹ ಮಹಾನ್ ವ್ಯಕ್ತಿಯ ದಿನಾಚರಣೆ ಆಚರಿಸಲು ಹೆಮ್ಮೆ ಎನ್ನಿಸುತ್ತದೆ ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ ತಿಳಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಕಳೆದ ನೂರಾರು ವರ್ಷಗಳಿಂದ ಮೂಲ ವೃತ್ತಿಯಾದ ಶಿಲ್ಪಕಲೆಯಿಂದ ಬದುಕು ರೂಪಿಸಿಕೊಂಡ ವಿಶ್ವಕರ್ಮ ಸಮಾಜ ಎಲ್ಲಾ ವರ್ಗಗಳ ಪ್ರೀತಿ, ವಿಶ್ವಾಸಗಳಿಸಿದೆ. ಕಲೆಗೆ ಜೀವಂತಿಕೆ ತುಂಬುವುದರಲ್ಲಿ ವಿಶ್ವಕರ್ಮರು ಪ್ರವೀಣರು. ಇಂತಹ ಮಹಾನ್ ವ್ಯಕ್ತಿಯ ದಿನಾಚರಣೆ ಆಚರಿಸಲು ಹೆಮ್ಮೆ ಎನ್ನಿಸುತ್ತದೆ ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ ತಿಳಿಸಿದರು.

ಅವರು, ಶುಕ್ರವಾರ ನಗರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ತಾಲೂಕು ವಿಶ್ವಕರ್ಮ ಸಂಘಟನೆಗಳು ಹಮ್ಮಿಕೊಂಡಿದ್ದ ವಿಶ್ವಕರ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಂಗವಿಕಲ ಕಲ್ಯಾಣ ಇಲಾಖೆ ಮಾಜಿ ಆಯುಕ್ತ, ಡಾ. ಕೆ.ಎಸ್. ರಾಜಣ್ಣನವರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ರಾಷ್ಟ್ರದ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀಯನ್ನು ರಾಷ್ಟ್ರಪತಿ ದೌಪದಿ ಮುರ್ಮುರಿಂದ ಈ ವರ್ಷ ಜನವರಿಯಲ್ಲಿ ಪಡೆದೆ. ಸೇವೆ ಮಾಡಲು ದೃಢವಾದ ಸಂಕಲ್ಪ ಮತ್ತು ಆತ್ಮಸ್ಥೈರ್ಯ ಬಹಳ ಮುಖ್ಯ ಎಂದರು.

11ನೇ ವಯಸ್ಸಿನಲ್ಲಿ ಪೋಲಿಯೋದಿಂದ ಅಂಗವಿಕಲತೆಗೆ ನಾನು ಒಳಗಾದರೂ ಈಗ ಅದೇ ನನಗೆ ವರವಾಗಿ ಪರಿಣಮಿಸಿದೆ. ಇಡೀ ದೇಶದಲ್ಲಿ ನನಗೆ ಗೌರವ ಸಿಗುತ್ತಿದೆ. ಇದಕ್ಕಿಂತ ಹೆಮ್ಮೆಯ ವಿಷಯ ಮತ್ತೊಂದಿಲ್ಲ. ವಿಶ್ವಕರ್ಮ ಸಮಾಜ ನನ್ನ ಸೇವೆಯನ್ನು ಗುರುತಿಸಿ ಗೌರವಿಸಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಚಂದ್ರಶೇಖರಚಾರಿ, ಪ್ರತಿವರ್ಷ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ನಮ್ಮ ಸಮುದಾಯ ವಿಶೇಷ ಭಕ್ತಿ, ಶ್ರದ್ಧೆಯಿಂದ ಆಚರಿಸುತ್ತಾ ಬಂದಿದೆ. ವಿಶ್ವಕರ್ಮ ಸಮಾಜದ ಅಂಗ ಸಂಸ್ಥೆಗಳಾದ ಮಹಿಳಾ ಸಂಘ, ಯುವಕ ಸಂಘ, ಚಿನ್ನಬೆಳ್ಳಿ ವರ್ತಕರ ಸಂಘ ಸೇರಿದಂತೆ ಎಲ್ಲರೂ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕಾರ ನೀಡಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ನಗರಸಭಾ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಓ. ಸುಜಾತ, ಸದಸ್ಯರಾದ ಪಾಲಮ್ಮ, ಮಂಜುಳಾ, ಕೆಪಿಸಿಸಿ ಕುಶಲಕರ್ಮಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷ ಡಿ. ವೆಂಕಟೇಶ್‌ಚಾರ್, ಉಪಾಧ್ಯಕ್ಷ ವೈ. ನಾಗರಾಜು, ಯುವ ಘಟಕದ ಅಧ್ಯಕ್ಷ ಸೀತಾರಾಮಚಾರ್, ಸಹ ಕಾರ್ಯದರ್ಶಿ ಭರತ್‌ಕುಮಾರ್, ಖಜಾಂಚಿ ಜಿ.ಪಿ. ಪದ್ಮನಾಭಚಾರ್, ಚಿನ್ನಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಬಿಎನ್‌ಜಿ ವೆಂಕಟೇಶ್, ಮಹಿಳಾ ಘಟಕದ ಅಧ್ಯಕ್ಷೆ ಉಮಾದೇವಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷ ಕಮಲಮ್ಮ, ಶ್ರೀಧರಚಾರ್, ಸರಸ್ವತಿ, ಎಂ. ಸುಮ, ಸುಮಲತಾ, ರಾಜೇಶ್ವರಿ, ಸಿ.ಇ. ಪ್ರಸನ್ನಕುಮಾರ್, ಆರ್. ಬ್ರಹ್ಮಚಾರ್, ಶ್ರೀನಿವಾಸ್‌ಚಾರ್, ಡಿ. ಶಿವಕುಮಾರ್, ರಾಜೇಂದ್ರಚಾರ್, ಮೌನೇಶಚಾರ್, ಕಿರಣ್‌ಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this article