ತನ್ನ ಕೌಶಲ್ಯದ ಮೂಲಕ ಜೀವಂತವಾಗಿರುವ ವಿಶ್ವಕರ್ಮರು: ಪರಶುರಾಮ್ ಸತ್ತಿಗೇರಿ

KannadaprabhaNewsNetwork |  
Published : Sep 18, 2024, 01:49 AM IST
17ಕೆಎಂಎನ್ ಡಿ22 | Kannada Prabha

ಸಾರಾಂಶ

ಸಮುದಾಯದ ವ್ಯಕ್ತಿ ತನ್ನ ಸಾಧನೆ ಅಥವಾ ಸೇವೆಯಿಂದ ಉತ್ತಮ ಮಟ್ಟಕ್ಕೆ ಬೆಳೆದಾಗ ಅವರ ಆದರ್ಶ ಗುಣಗಳು ಸಮುದಾಯ ಮೇಲೆ ಗಂಭೀರ ಪ್ರಭಾವ ಬೀರಿ, ಸಮುದಾಯ ಜೊತೆಗೆ ಸಮಾಜ ಬೆಳೆದು, ದೇಶಕ್ಕೆ ಅಮೂಲ್ಯ ಕೊಡುಗೆ ನೀಡುವ ಅವಕಾಶ ಲಭಿಸುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತನ್ನ ಕೌಶಲ್ಯದ ಮೂಲಕ ಇಂದಿಗೂ ಜೀವಂತವಾಗಿರುವ ಮಹಾನ್ ಚೇತನ ಶಿಲ್ಪಕಲೆಯ ದೈವ ಪುರುಷ ವಿಶ್ವಕರ್ಮ ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಬಣ್ಣಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಭಗವಾನ್ ವಿಶ್ವಕರ್ಮ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಸಮುದಾಯದ ವ್ಯಕ್ತಿ ತನ್ನ ಸಾಧನೆ ಅಥವಾ ಸೇವೆಯಿಂದ ಉತ್ತಮ ಮಟ್ಟಕ್ಕೆ ಬೆಳೆದಾಗ ಅವರ ಆದರ್ಶ ಗುಣಗಳು ಸಮುದಾಯ ಮೇಲೆ ಗಂಭೀರ ಪ್ರಭಾವ ಬೀರಿ, ಸಮುದಾಯ ಜೊತೆಗೆ ಸಮಾಜ ಬೆಳೆದು, ದೇಶಕ್ಕೆ ಅಮೂಲ್ಯ ಕೊಡುಗೆ ನೀಡುವ ಅವಕಾಶ ಲಭಿಸುತ್ತದೆ ಎಂದರು.

ಸಮುದಾಯದ ಮುಖಂಡ ಕೂಡಲಕುಪ್ಪೆ ಸೋಮಶೇಖರ್ ಮಾತನಾಡಿ, ವಿಶ್ವಕರ್ಮ ಸಮುದಾಯ ಸಂಘಟಿತರಾಗಿ ವಿದ್ಯಾವಂತರ ಜೊತೆ ಪ್ರಜ್ಞಾವಂತರಾಗಬೇಕು. ಸರ್ಕಾರಗಳು ಸಮುದಾಯದ ಬೆಳವಣಿಗೆಗಾಗಿ ಉದ್ಯೋಗದಲ್ಲಿ ಒಳ ಮೀಸಲಾತಿ, ವಿದ್ಯಾಭ್ಯಾಸಕ್ಕೆ ಹಣಕಾಸು ನೆರವು, ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ, ದೂರ ದೃಷ್ಟಿಯುಳ್ಳ ಯೋಜನೆಗಳು, ನಿವೇಶನ ಹಾಗೂ ವಸತಿ ರಹಿತರಿಗೆ ವಸತಿ ಕಲ್ಪಿಸುವುದು, ಸಬ್ಸಿಡಿ ರೂಪದಲ್ಲಿ ಸಾಲ ಸೌಲಭ್ಯ ನೀಡುವಂತೆ ಮನವಿ ಮಾಡಿದರು.

ಇದೇ ವೇಳೆ ಪಟ್ಟಣದ ರಾಜ ಮನೆತನದಿಂದ ನಿರ್ಮಾಣಗೊಂಡಿದ್ದ ಕಾಳಿಕಾಂಬ ದೇವಸ್ಥಾನದ ಜೀರ್ಣೋದ್ಧಾರ, ಅಮರ ಶಿಲ್ಪಿ ಜಕಣಾಚಾರಿ ವೃತ್ತ ನಿರ್ಮಾಣ ಹಾಗೂ ವಿಶ್ವಕರ್ಮ ಸಮುದಾಯ ಭವನ ನಿರ್ಮಿಸುವಂತೆ ಮನವಿ ಸಲ್ಲಿಸಿದರು.

ಈ ವೇಳೆ ಶಿರಸ್ತೇದಾರ್ ಪ್ರಸನ್ನ, ತಾಪಂ ಯೋಜನಾಧಿಕಾರಿ ತ್ರಿವೇಣಿ, ಮುಜರಾಯಿ ಲೆಕ್ಕ ಸಹಾಯಕ ಸೋಮಶೇಖರ್, ವಿಶ್ವಕರ್ಮ ಮುಖಂಡರಾದ ರಾಜಣ್ಣ, ಬ್ರಹ್ಮಲಿಂಗಾಚಾರಿ, ಕೃಷ್ಣಾಚಾರಿ, ಮಹಾಲಿಂಗಚಾರಿ, ಪ್ರಧಾನ ಅರ್ಚಕ ಮಂಜುನಾಥ, ನಗುವನಹಳ್ಳಿ ಸ್ವಾಮಿ, ದಿನೇಶ್ ಸೇರಿದಂತೆ ಇತರರು ಇದ್ದರು.ವಿಶ್ವಕರ್ಮ ಜಯಂತೋತ್ಸವ ಆಚರಣೆ

ಶ್ರೀರಂಗಪಟ್ಟಣ:ತಾಲೂಕಿನ ಕೆಆರ್‌ಎಸ್‌ನ ಬಳಿಯ ಹೊಸಉಂಡವಾಡಿ ಗ್ರಾಮದ ಶ್ರೀಕಾಳಿಕಾಂಭ ಕಮಟೇಶ್ವರ ದೇವಾಲಯದಲ್ಲಿ ಮಂಗಳವಾರ ಶ್ರೀವಿಶ್ವಕರ್ಮ ಜಯಂತೋತ್ಸವ ನಡೆಯಿತು.

ಸಮಾಜದ ಹಿರಿಯ ಮುಖಂಡ ಕೃಷ್ಣಮೂರ್ತಿ (ಮೂರ್ತಣ್ಣ) ಮಾತನಾಡಿ, ವಿಶ್ವಕರ್ಮ ಸಮಾಜವು ಸಮಾಜಕ್ಕೆ ಅಪಾರ ಕೊಡುಗೆಗಳ ನೀಡುತ್ತಾ ಬಂದಿದೆ. ಸಮುದಾಯಕ್ಕೆ ಸರ್ಕಾರ ಆರ್ಥಿಕ, ಸಾಮಾಜಿಕವಾಗಿ ಹೆಚ್ಚು ಒತ್ತು ನೀಡಿ ಸಮಾಜದ ಏಳ್ಗೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಈ ವೇಳೆ ಮಖಂಡರಾದ ನರಸಿಂಹಣ್ಣ, ನಾರಾಯಣಚಾರ್, ತೇಜು ಶ್ರೀನಿವಾಸ್, ಸ್ವಾಮಿ, ಟೈಲರ್ ಮಹದೇವು, ಪುಟ್ಟರಾಜು, ಎಚ್.ವಿ.ಪುಟ್ಟಸ್ವಾಮಿ, ಸುನಂದಮ್ಮ, ಚಾಂದನಿ, ಜ್ಯೋತಿ, ಕವಿತ, ನಂದಿನಿ, ಸಾವಿತ್ರಮ್ಮ, ಸರೋಜಮ್ಮ, ಅಶ್ವಿನಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ