ಕನ್ನಡಪ್ರಭ ವಾರ್ತೆ ಸವದತ್ತಿ
ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ.ಪಿ.ಬಿ.ಬಡಿಗೇರ ಮಾತನಾಡಿದರು. ಚಿಕ್ಕುಂಬಿ ನಾಗಲಿಂಗೇಶ್ವರ ಮಠದ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಕಾಳಿಕಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ತೇಜಪ್ಪಾಚಾರ್ಯ ಮೂಕಿ ಸಾನ್ನಿಧ್ಯ ವಹಿಸಿದ್ದರು. ಉಡುಪಿ ಸಂಗೀತ ವಿದ್ವಾನ ಯಶವಂತ.ಎಂ.ಜಿ, ಸಮಾಜದ ಗೌರವಾಧ್ಯಕ್ಷ ಉಮೇಶ.ಬಿ, ಅಖಿಲ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜ ಬೆಂಗಳೂರಿನ ಅಧ್ಯಕ್ಷ ಈಶ್ವರಾಚಾರ್ಯ.ಎಂ.ಪಿ, ಕುಮಾರ.ಜಿ ಹಾಗೂ ಎಂ.ಪಿ.ಚರತ್‌ಚಂದ್ರ, ಭಾರತಿ ಲೋಹಾರ, ನಾಗೇಂದ್ರ ಆಚಾರ, ವೈಶಾಲಿ ಸುತಾರ, ರಾಜಗೋಪಾಲ ಕಡ್ಲಿಕೊಪ್ಪ ಅವರನ್ನು ಸನ್ಮಾನಿಸಲಾಯಿತು.
ಶಿಲ್ಪಕಲೆ ವಿಭಾಗದಲ್ಲಿ ಪ್ರಜ್ವಲ್ ಬಡಿಗೇರ, ಸುದರ್ಶನ ದೇವಾಡಿಗ, ಪ್ರಕಾಶ ಬಡಿಗೇರ, ಕೆ.ಆರ್.ಮೌನೇಶ್ವರ ಆಚಾರ್ಯ, ಮೌನೇಶ ಬಡಿಗೇರ ಹಾಗೂ ಚಿತ್ರಕಲೆ ವಿಭಾಗದಲ್ಲಿ ವಿಠ್ಠಲ್ ಬರಕಾಳೆ, ರವಿ ನಾಯಕ್, ಪವನ ನಾಯಕ್, ದರ್ಶನ ಮುಳಹುಂದ, ಸುದೀಪ ಕಮ್ಮಾರ ಮತ್ತು ಛಾಯಾಚಿತ್ರಕಲೆ ವಿಭಾಗದಲ್ಲಿ ರಮೇಶ ಚವ್ಹಾಣ, ಕುಬೇರ ನಾಗಲೂರ, ಕಾವ್ಯ.ಎಸ್.ಪಿ, ನವೀನಕುಮಾರ ಶಿರವಾರ, ಹನಮಂತ ಕಮ್ಮಾರ ಬಹುಮಾನ ಪಡೆದರು.ರಾಜ್ಯಮಟ್ಟದ ಕಲಾ ಪ್ರದರ್ಶನದ ಮಾರ್ಗದರ್ಶನಕ ಎಸ್.ಕೆ.ಪತ್ತಾರ, ಎಸ್.ಎಂ.ಲೋಹಾರ, ಎಂ.ಕೆ.ಪತ್ತಾರ, ಡಾ.ವಿರುಪಾಕ್ಷ ಬಡಿಗೇರ, ಶಂಕರ ಪತ್ತಾರ, ಎಂ.ಬಿ.ಬಡಿಗೇರ, ನವೀನಕುಮಾರ ಆಚಾರ, ವಿರೇಶ ಬಡಿಗೇರ, ಸಂಗಮೇಶ ಬಡಿಗೇರ ಬಹುಮಾನ ವಿತರಣೆ ವೇಳೆ ಉಪಸ್ಥಿತರಿದ್ದರು.