ಜಗತ್ತಿಗೆ ಚಲನೆಯ ಪರಿವರ್ತನೆ ನೀಡಿದ್ದ ವಿಶ್ವಕರ್ಮ

KannadaprabhaNewsNetwork |  
Published : Mar 17, 2025, 01:31 AM IST
ಪೋಟೋ: 16ಎಸ್‌ಎಂಜಿಕೆಪಿ01ಶಿವಮೊಗ್ಗದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಕೃಷಿನಗರದ ಶ್ರೀ ಗಾಯತ್ರಿ ವಿಶ್ವಕರ್ಮ ದೇವಾಲಯ ಭವನದಲ್ಲಿ ಎ.ಕಮಲಮ್ಮ, ಬಸಪ್ಪಾಚಾರ್ ಎ.ವಿ ಅವರ ದತ್ತಿ ಆಶಯದಂತೆ ವಿಶ್ವಕರ್ಮರ ಪಂಚಕಸುಬುಗಳು ಮತ್ತು ಕೊಡುಗೆಗಳು ಕುರಿತ ಚಿಂತನೆ ಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷ ಡಿ,ಮಂಜುನಾಥ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿವಮೊಗ್ಗ: ಜಗತ್ತಿಗೆ ಚಲನೆಯ ಪರಿವರ್ತನೆ ನೀಡಿದವರು ವಿಶ್ವಕರ್ಮ ಎಂದು ಹಂಪಿ ವಿಶ್ವ ವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಹೇಳಿದರು.

ಶಿವಮೊಗ್ಗ: ಜಗತ್ತಿಗೆ ಚಲನೆಯ ಪರಿವರ್ತನೆ ನೀಡಿದವರು ವಿಶ್ವಕರ್ಮ ಎಂದು ಹಂಪಿ ವಿಶ್ವ ವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಕೃಷಿನಗರದ ಶ್ರೀ ಗಾಯತ್ರಿ ವಿಶ್ವಕರ್ಮ ದೇವಾಲಯ ಭವನದಲ್ಲಿ ಎ.ಕಮಲಮ್ಮ, ಬಸಪ್ಪಾಚಾರ್ ಎ.ವಿ ಅವರ ದತ್ತಿ ಆಶಯದಂತೆ ವಿಶ್ವಕರ್ಮರ ಪಂಚಕಸುಬುಗಳು ಮತ್ತು ಕೊಡುಗೆಗಳು ಕುರಿತ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ಸಂಪ್ರದಾಯಗಳಲ್ಲಿ ವಿಶ್ವಕರ್ಮ ಹೆಸರಿದೆ. ಅಲ್ಲಿ ಕೌಶಲ್ಯ ಮತ್ತು ಕಸಬನ್ನು ವೈಜ್ಞಾನಿಕವಾಗಿ ವ್ಯಾಖ್ಯಾನ ಮಾಡುವ ಅಗತ್ಯವಿದೆ ಎಂದರು.

ವಿಶ್ವಕರ್ಮ ಪ್ರಗತಿಪರ ಜಗತ್ತು ನಿರ್ಮಾಣ ಮಾಡಿದ ಸೃಷ್ಟಿಕರ್ತ ನಾದವನು. ಕಮ್ಮಾರ, ಬಡಿಗ, ಅಕ್ಕಸಾಲಿ ಸೇರಿದಂತೆ ಎಲ್ಲರೂ ಉದ್ಯೋಗ ಮಾಡುವುದಕ್ಕಿಂತ, ಹೊಸ ಉದ್ಯೋಗ ಸೃಷ್ಟಿ ಮಾಡಿದರು. ಲೋಕದ ಭೌಧಿಕ, ಭೌತಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದನ್ನು ಅವರು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ, ಜಾಗತೀಕರಣ ನಮ್ಮ ಸಂಸ್ಕೃತಿಯ ತಾಯಿ ಬೇರುಗಳಾಗಿದ್ದ ಕುಲಕಸುಬುಗಳನ್ನು ಕಸಿದುಕೊಳ್ಳುತ್ತಿವೆ. ಆ ಕಸುಬುಗಳ ಮಹತ್ವವನ್ನು ಸಮ ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಿದೆ‌ ಎಂದು ಕರೆ ನೀಡಿದರು.

ಇದೇ ವೇಳೆ ಆಯೆಶಾಬಿಯಾನೆ ಖಾಸಂಬಿ ಕೋಂ. ಸಯದ್ ರಸೂಲ್ ಸಾಬ್ ಅಬ್ಬಲಗೆರೆ ಸ್ಮರಣೆ ದತ್ತಿ ಅಂಗವಾಗಿ ದಾನಿಗಳಾದ ಅಬ್ಬಾಸ್ ಅಬ್ಬಲಗೆರೆ ಅವರ ಆಶಯದಂತೆ ಸಂತ ಶಿಶುನಾಳ ಶರೀಫರ ಗೀತೆಗಳನ್ನು ಗಾಯಕರಾದ ಲಲಿತಮ್ಮ ವಿಠ್ಠಲದಾಸ್ ಅವರು ಹಾಡಿದರು.

ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘದ ಅಧ್ಯಕ್ಷರಾದ ಅನ್ನಪೂರ್ಣಮ್ಮ ಕಾಳಾಚಾರ್ ಅಧ್ಯಕ್ಷತೆ ವಹಿಸಿದ್ದರು.

ದತ್ತಿ ದಾನಿಗಳಾದ ಡಾ. ಭಾಗ್ಯಲಕ್ಷ್ಮಿ ಎಸ್., ಡಾ. ಕೃಷ್ಣಮೂರ್ತಿ ಆಚಾರ್.ಎ.ಬಿ., ಪವನ್ ಕುಮಾರ್, ಸೊರಬ ಷಣ್ಮುಖಾಚಾರ್, ಹೊನ್ನಾಳಿ ಪ್ರಕಾಶ್ ಆಚಾರ್, ಡಾ.ಕೃಷ್ಣಮೂರ್ತಿ ಆಚಾರ್, ಕಸಾಪ ಜಿಲ್ಲಾ ಕಾರ್ಯದರ್ಶಿ ಡಿ. ಗಣೇಶ, ಎಂ.ಎಂ.ಸ್ವಾಮಿ, ಸಾವಿತ್ರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸುಜಾತ ಪ್ರಕಾಶ್ ಪ್ರಾರ್ಥಿಸಿ, ಡಾ. ಭಾಗ್ಯಲಕ್ಷ್ಮಿ ಸ್ವಾಗತಿಸಿದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು