ಗಜೇಂದ್ರಗಡ: ವಿಶ್ವಕರ್ಮರು ಕಾಯಕ ಸಂಸ್ಕೃತಿ ರೂಢಿಸಿಕೊಂಡು ನಾಡಿಗೆ ಕಲೆ, ಶಿಲ್ಪಕಲೆ, ಸಂಗೀತ ಸೇರಿದಂತೆ ಕಲಾ ಪ್ರೌಢಿಮೆಯಿಂದ ಜಗತ್ತಿಗೆ ಅಮೋಘ ಕೊಡುಗೆ ನೀಡಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.
ವಿಶ್ವಕರ್ಮ ಸಮಾಜ ಇಂದು ಕುಶಲ ಕರ್ಮಿಗಳಾಗಿ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ ಗುರುತಿಸಿಕೊಟ್ಟ ಏಕೈಕ ಸಮಾಜವೆಂದರೆ ವಿಶ್ವಕರ್ಮ ಸಮಾಜ ಎಂದು ಬಣ್ಣಿಸಿದರು.
ಬೆಳಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಶ್ವಕರ್ಮ ಭಾವಚಿತ್ರದ ಮೆರವಣಿಗೆಯು ಸಕಲವಾದ್ಯ ಮೇಳದೊಂದಿಗೆ ಅದ್ಧೂರಿಯಾಗಿ ನಡೆಯಿತು. ನಂತರ ವಿಶ್ವಕರ್ಮರಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರದೊಂದಿಗೆ ವಿಶೇಷ ಪೂಜೆ ನಡೆಯಿತು. ಮೌನೇಶ್ವರ ದೇವಸ್ಥಾನದಿಂದ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲವಾದ್ಯ ಮೇಳದೊಂದಿಗೆ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕಳಸದಿಂದ ಆರತಿ ಮಾಡಿದರು. ನಂತರ ದೇವಸ್ಥಾನ ಬಳಿ ಮೆರವಣಿಗೆ ಬಳಿಕ ಸಕಲ ಸದ್ಭಕ್ತರಿಗೆ ಮಹಾಪ್ರಸಾದ ವಿತರಣೆ ಜರುಗಿತು.ಈ ವೇಳೆ ಸಮಾಜದ ಅಧ್ಯಕ್ಷ ವಿರೂಪಾಕ್ಷಪ್ಪ ಬಡಿಗೇರ ಮಾತನಾಡಿ, ಪುರಸಭೆ ಸದಸ್ಯ ಕನಕಪ್ಪ ಅರಳಿಗಿಡದ, ಹನಮಂತ ಮುದಗಲ್, ಶ್ರೀನಿವಾಸ ಸವದಿ, ವೀರೇಶ ಬಡಿಗೇರ, ಮಂಜು ಬಡಿಗೇರ, ವಿಠ್ಠಲ ಸವದಿ, ಎಚ್.ಎನ್. ಬಡಿಗೇರ, ಮೊನೇಶ ಗೋಗೇರಿ, ಮೌನೇಶ ಡಂಬಳ, ಮಲ್ಲಪ್ಪ ಬಡಿಗೇರ, ಮೌನೇಶ ಪತ್ತಾರ, ಪರಶುರಾಮ ಕಮ್ಮಾರ, ಪುರಸಭೆಯ ಅಧಿಕಾರಿ ಸಿ.ಡಿ. ದೊಡ್ಡಮನಿ, ಶಿವಪುತ್ರಪ್ಪ ಕಡೆತೋಟದ, ಜಿ.ಎನ್. ಕಾಳೆ, ಶಿವಕುಮಾರ ಇಲಾಳ, ಬಿ.ಮಲ್ಲಿಕಾರ್ಜುನಗೌಡ, ಎಂ.ಬಿ. ದೊಡ್ಡಮನಿ, ಗುರಪ್ಪ ಪಟ್ಟಣಶೆಟ್ಟಿ, ರಿಯಾಜ ಒಂಟಿ, ರಾಘವೇಂದ್ರ ಮಂತಾ, ಪಿ.ಎನ್. ದೊಡ್ಡಮನಿ ಸೇರಿದಂತೆ ಇತರರು ಇದ್ದರು.