ಷಟ್ ಸ್ಥಲ ಧ್ವಜಾರೋಹಣಕ್ಕೆ ವಿಶ್ವಾರಾಧ್ಯ ಶಿವಾಚಾರ್ಯರ ಚಾಲನೆ

KannadaprabhaNewsNetwork |  
Published : Jul 26, 2025, 01:30 AM IST
ಕಂಪ್ಲಿಯ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರಾವಣಮಾಸದ ನಿಮಿತ್ತ ಹಮ್ಮಿಕೊಳ್ಳಲಾದ ಶ್ರೀ ಶರಣಬಸವೇಶ್ವರ ಲೀಲಾಮೃತ ಪುರಾಣ ಪ್ರವಚನ  ಕಾರ್ಯಕ್ರಮದಲ್ಲಿ ಷಟ್‌ಸ್ಥಳ ಧ್ವಜಾರೋಹಣವನ್ನು ಶುಕ್ರವಾರ ಬುಕ್ಕಸಾಗರ ಕರಿಸಿದ್ದೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು ನೆರವೇರಿಸಿದರು.  | Kannada Prabha

ಸಾರಾಂಶ

ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಳ್ಳಲಾದ ಮಹಾಮಹಿಮಾ ಪವಾಡ ಪುರುಷ ಕಲಬುರ್ಗಿ ಶ್ರೀ ಶರಣಬಸವೇಶ್ವರ ಲೀಲಾಮೃತ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಷಟ್‌ಸ್ಥಳ ಧ್ವಜಾರೋಹಣವನ್ನು ಶುಕ್ರವಾರ ಬುಕ್ಕಸಾಗರ ಕರಿಸಿದ್ದೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಳ್ಳಲಾದ ಮಹಾಮಹಿಮಾ ಪವಾಡ ಪುರುಷ ಕಲಬುರ್ಗಿ ಶ್ರೀ ಶರಣಬಸವೇಶ್ವರ ಲೀಲಾಮೃತ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಷಟ್‌ಸ್ಥಳ ಧ್ವಜಾರೋಹಣವನ್ನು ಶುಕ್ರವಾರ ಬುಕ್ಕಸಾಗರ ಕರಿಸಿದ್ದೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು ನೆರವೇರಿಸಿದರು.

ಪಾಠಶಾಲೆ ಅಧ್ಯಕ್ಷ ಇಟಗಿ ಬಸವರಾಜಗೌಡ ಮಾತನಾಡಿ, ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ 2025ರ ಜು.25ರಿಂದ ಆ.24ರತನಕ ನಿತ್ಯ ಸಂಜೆ 6.30ರಿಂದ 63ನೇ ವರ್ಷದ ಮಹಾಮಹಿಮ ಪವಾಡಪುರುಷ ಕಲಬುರ್ಗಿ ಶರಣಬಸವೇಶ್ವರ ಲೀಲಾಮೃತ ಪುರಾಣ ಪ್ರವಚನ ಜರುಗಲಿದೆ. ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ, ಹೊಸಪೇಟೆ ಕೊಟ್ಟೂರುಮಠದ ಬಸವಲಿಂಗ ಮಹಾಸ್ವಾಮಿಗಳು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಎಮ್ಮಿಗನೂರು ಹಂಪಿಸಾವಿರದೇವರಮಠದ ವಾಮದೇವ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದಾರೆ.

ಶ್ರಾವಣಮಾಸಪೂರ್ತಿ ಗದುಗಿನ ಗವಿಸಿದ್ಧೇಶ್ವರ ಶಾಸ್ತ್ರಿಗಳು ಪುರಾಣ ಪ್ರಸ್ತುತಪಡಿಸಲಿದ್ದು, ರಾರಾವಿಯ ಬಿ.ಚಿದಾನಂದಪ್ಪ ಗವಾಯಿಗಳಿಂದ ಸಂಗೀತ, ಹಂಪಿ ಕನ್ನಡ ವಿವಿಯ ಶಿಕ್ಷಕ ಕೆ.ದೊಡ್ಡಬಸಪ್ಪರಿಂದ ತಬಲವಾದನ ಸೇವೆ ಜರುಗಲಿದೆ.

ಆ.24ರಂದು ಬೆಳಗಿನ ಜಾವ ಈಶ್ವರ, ನಂದಿ, ಬೊಚ್ಚಯ್ಯಸ್ವಾಮಿ, ಗುರುಸಿದ್ಧಮರಿದೇವರ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ ಜರುಗಲಿದೆ. ಬೆಳಗ್ಗೆ 8ಗಂಟೆಗೆ ಕಲಬುರ್ಗಿ ಶ್ರೀಶರಣಬಸವೇಶ್ವರ ಪುರಾಣ ಹಾಗೂ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ, ಮಧ್ಯಾಹ್ನ 2ಗಂಟೆಗೆ ಜಂಗಮ ಗಣಾರಾಧನೆ, ಮಹಾಪ್ರಸಾದ, ಸಂಜೆ 6.30ಕ್ಕೆ ಪುರಾಣ ಮಹಾಮಂಗಳಗೊಳ್ಳಲಿದ್ದು ಸರ್ವರೂ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣಿಭೂತರಾಗಬೇಕು ಎಂದರು.

ಪಾಠಶಾಲೆಯ ನಿವೃತ್ತ ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿ, ಅಕ್ಕಿ ಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಕಾಮಧೇನು ಗೋಶಾಲೆ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಂ. ಬಸವರಾಜ ಶಾಸ್ತ್ರಿ ಮಾತನಾಡಿದರು. ಪಾಠ ಶಾಲೆಯ ಪದಾಧಿಕಾರಿಗಳಾದ ಅಲಬನೂರು ಬಸವರಾಜ, ಜಿ.ಎಚ್. ಶಶಿಧರಗೌಡ, ಗಂಡಿ ಗಣೇಶ, ಟಿ.ಸುರೇಶಗೌಡ, ಅರವಿ ಅಮರೇಶಗೌಡ, ಡಾ. ಜಗನ್ನಾಥ ಹಿರೇಮಠ, ಉಗಾದಿ ಬಸವರಾಜ,ಗೌಳೇರು ಶೇಖರಪ್ಪ, ಅಳ್ಳಿ ನಾಗರಾಜ, ಕೋರಿಶೆಟ್ರು ಸಣ್ಣಶಿವಶರಣ, ಎಚ್.ಅಮರೇಶ, ಎಂ.ವಿಜಯಕುಮಾರ, ಕುಕನೂರು ಅಶೋಕ, ಸಜ್ಜನರ ಶರಣಪ್ಪ, ಘನಮಠದಯ್ಯಶಾಸ್ತ್ರಿ, ಅರವಿ ಬಸವನಗೌಡ ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ಕಲ್ಗುಡಿ ವಿಶ್ವನಾಥ, ವಾಲಿ ಕೊಟ್ರಪ್ಪ, ಎಸ್.ಎಂ. ನಾಗರಾಜ, ಸಿ.ಕೆ. ಶಿವಮೂರ್ತಿ, ಬಾಳೇಕಾಯಿ ಚನ್ನಬಸಪ್ಪ ಇತರರಿದ್ದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು