ಕನ್ನಡಪ್ರಭ ವಾರ್ತೆ ಇಳಕಲ್ಲ
ಶಾಸಕರು ಶಾಲೆಯ ಕೊಠಡಿಗಳು, ಅಡುಗೆಮನೆ, ಶೌಚಾಲಯ, ಭೋಜನಾಲಯ, ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ನಂತರ ವಿದ್ಯಾರ್ಥಿಗಳಿಂದ ಸಮಸ್ಯೆ ಆಲಿಸಿದರು. ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಅಸ್ವಚ್ಛತೆ, ವಿವಿಧ ವಿಷಯ ಶಿಕ್ಷಕರು ಸರಿಯಾದ ಸಮಯಕ್ಕೆ ಬಾರದಿರುವುದು, ಅಡುಗೆ ಸರಿಯಾಗಿ ಮಾಡದಿರುವ ಬಗ್ಗೆ ವಿದ್ಯಾರ್ಥಿಗಳು ದೂರಿದರು.
ಅಡುಗೆ ಸಿಬ್ಬಂದಿ ತರಾಟೆಗೆ ತೆದುಕೊಂಡು ನಿಮ್ಮ ಮನೆಯಲ್ಲಿಯೂ ನಿಮ್ಮ ಮಕ್ಕಳಿಗೆ ಇದೇ ರೀತಿ ಅಡುಗೆ ಮಾಡುತ್ತೀರಾ ? ಸರಿಯಾದಿದ್ದರೆ ಕೆಲಸದಿಂದ ತೆಗೆದು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.ಯಾರು ಭಯಪಡಬೇಡಿ ನಿಮ್ಮ ಜೊತೆಗೆ ನಾನಿದ್ದೇನೆ ಎಂದು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದ ಶಾಸಕರು, ನಿಮಗೆ ಯಾರಾದರು ತೊಂದರೆ ಕೊಟ್ಟರೆ ನನಗೆ ಕರೆ ಮಾಡಿ ಮೊಬೈಲ್ ನಂಬರ್ ಕೊಟ್ಟರು. ಸ್ಥಳದಲ್ಲೇ ಅಧಿಕಾರಿಗಳಿಗೆ ಕರೆ ಮಾಡಿ, ಇಲ್ಲಿನ ಸಮಸ್ಯೆ ಬಗೆಹರಿಸಿ, ವಿದ್ಯಾರ್ಥಿಗಳಿಗೆ ತೊಂದರೆ ಕೊಡುವ ಶಿಕ್ಷಕರನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು.
ಗ್ರಾಮದ ಮುಖಂಡರಾದ ಚನ್ನಪ್ಪಗೌಡ ನಾಡಗೌಡ್ರ, ಕಂದಗಲ್ಲ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಕಡಿವಾಲ, ಗ್ರಾಪಂ ಮಾಜಿ ಅಧ್ಯಕ್ಷ ಮಹಮ್ಮದಸಾಬ್ ಭಾವಿಕಟ್ಟಿ, ಗ್ರಾಪಂ ಅಧ್ಯಕ್ಷ ಬಸವರಾಜ ಅಳ್ಳೊಳ್ಳಿ, ವಿಜಯ ಮಹಾಂತೇಶ ಗದ್ದನಕೇರಿ, ಕಾಂಗ್ರೆಸ್ ಮುಖಂಡ ಚನ್ನಪ್ಪ ರೇವಡಿ ಇತರರು ಇದ್ದರು.