ನಾಟಕಗಳ ದೃಶ್ಯ ರೂಪಕ್ಕಿಳಿಸಿ ಕಲಿಕೆ ಪರಿಣಾಮಕಾರಿ: ಬೆಳಗುಂದಿ

KannadaprabhaNewsNetwork |  
Published : Sep 14, 2024, 02:01 AM IST
 ಯಾದಗಿರಿ ಸಮೀಪದ ಸೈದಾಪುರ ಪಟ್ಟಣದ ವಿದ್ಯಾವರ್ಧಕ ಸಂಸ್ಥೆ ಆವರಣದಲ್ಲಿ ನಡೆದ ಪಿಯುಸಿ ಪಠ್ಯಾಧಾರಿತ ಬೋಳೇಶಂಕರ ಹಾಗೂ ಕೃಷ್ಣೆಗೌಡನ ಆನೆ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಚಾಲನೆ ನೀಡಿದರು. | Kannada Prabha

ಸಾರಾಂಶ

Visualization of plays is effective in learning: Belagundi

-ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಸಿದ್ರಾಮಪ್ಪಗೌಡ ಬೆಳಗುಂದಿ ಚಾಲನೆ

--------

ಕನ್ನಡಪ್ರಭ ವಾರ್ತೆ ಯಾದಗಿರಿ

ನಾಟಕಗಳು ದೃಶ್ಯ ರೂಪಕ್ಕಿಳಿಸಿ ವಿದ್ಯಾರ್ಥಿಗಳಿಗೆ ತಲುಪಿಸುವುದರಿಂದ ಕಲಿಕೆ ಪರಿಣಾಮಕಾರಿಯಾಗುತ್ತದೆ. ಇದರ ಸದ್ಬಳಕೆ ಆಗಬೇಕು ಎಂದು ಸೈದಾಪುರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಹೇಳಿದರು.

ಸಮೀಪ ಸೈದಾಪುರ ಪಟ್ಟಣದ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ನಡೆದ ನಿನಾಸಂ ಮತ್ತು ರಂಗಾಯಣ, ಸಾಣೇಹಳ್ಳಿ ನುರಿತ ಕಲಾವಿದರಿಂದ ಪಿಯುಸಿ ಪ್ರಥಮ ವರ್ಷದ "ಬೋಳೇಶಂಕರ " ನಾಟಕ ಹಾಗೂ ದ್ವಿತೀಯ ವರ್ಷದ "ಕೃಷ್ಣೆಗೌಡರ ಆನೆ " ಪಠ್ಯಾಧಾರಿತ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಠ್ಯದ ಜೊತೆಗೆ ಸಾಹಿತ್ಯ, ಕಲೆ, ಸಾಂಸ್ಕೃತಿಯೂ ಅತಿ ಮುಖ್ಯವಾಗಿದ್ದು, ರಂಗ ಕಲೆ ಇದನ್ನು ಪ್ರಾಯೋಗಿಕವಾಗಿ ಕಂಡುಕೊಳ್ಳಲು ನೆರವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಇಂತರ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಇನ್ನು ಹೆಚ್ಚಿನ ಸೇವೆ ಕಲಾ ತಂಡದಿಂದ ಆಗಲಿ ಎಂದು ಹಾರೈಸಿದರು.

ನಾಟಕದ ನಿರ್ದೇಶಕರಾದ ಸಮೀರ ಶುಬೇದಾರ, ರಾಜಕುಮಾರ ಎನ್.ಕೆ., ಸಂಸ್ಥೆಯ ಸಹಕಾರ್ಯದರ್ಶಿ ಕೆ.ಬಿ. ಗೋವರ್ದನ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯ ಸುರೇಶ ಆನಂಪಲ್ಲಿ, ಬಳಿಚಕ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಂತೇಶ ಕಲಾಲ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಕಾಲೇಜಿನ ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ, ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಗಿಮಠ, ಚಂದ್ರಶೇಖರ ಡೊಣ್ಣೆಗೌಡ ಸೇರಿದಂತೆ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಇದ್ದರು.

-----

13ವೈಡಿಆರ್6: ಯಾದಗಿರಿ ಸಮೀಪದ ಸೈದಾಪುರ ವಿದ್ಯಾವರ್ಧಕ ಸಂಸ್ಥೆ ಆವರಣದಲ್ಲಿ ನಡೆದ ಪಿಯುಸಿ ಪಠ್ಯಾಧಾರಿತ ಬೋಳೇಶಂಕರ ಹಾಗೂ ಕೃಷ್ಣೆಗೌಡನ ಆನೆ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ