ಚನ್ನಪಟ್ಟಣ: ಭಾರತದ ಶ್ರೇಷ್ಠ ಇಂಜಿನಿಯರ್, ಆಡಳಿತಗಾರ ಹಾಗೂ ರಾಷ್ಟ್ರನಿರ್ಮಾಣದ ದೂರದೃಷ್ಟಿ ಚಿಂತಕರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ತಮ್ಮ ಜ್ಞಾನ, ಶಿಸ್ತು, ಪ್ರಾಮಾಣಿಕತೆ ಮತ್ತು ಕಾರ್ಯ ದಕ್ಷತೆ ಮೂಲಕ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ ಡಾ. ವಿಜಯ್ ರಾಂಪುರ ಹೇಳಿದರು
ಚನ್ನಪಟ್ಟಣ: ಭಾರತದ ಶ್ರೇಷ್ಠ ಇಂಜಿನಿಯರ್, ಆಡಳಿತಗಾರ ಹಾಗೂ ರಾಷ್ಟ್ರನಿರ್ಮಾಣದ ದೂರದೃಷ್ಟಿ ಚಿಂತಕರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ತಮ್ಮ ಜ್ಞಾನ, ಶಿಸ್ತು, ಪ್ರಾಮಾಣಿಕತೆ ಮತ್ತು ಕಾರ್ಯ ದಕ್ಷತೆ ಮೂಲಕ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ ಡಾ. ವಿಜಯ್ ರಾಂಪುರ ಹೇಳಿದರು.
ಪಟ್ಟಣದ ದಿ ಆಪಲ್ ಪದವಿ ಪೂರ್ವ ಕಾಲೇಜು ಹಾಗೂ ಅಭ್ಯಾಸ್ ನೀಟ್/ ಐಐಟಿ-ಜೆಇಇ ಅಕಾಡೆಮಿ ಏರ್ಪಡಿಸಿದ್ದ "ಇಂಜಿನಿಯರ್ಸ್ ದಿನಾಚರಣೆ " ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಅವರು ೧೮೬೧ರ ಸೆಪ್ಟೆಂಬರ್ ೧೫ರಂದು ಮುದ್ದೇನಹಳ್ಳಿಯಲ್ಲಿ ಜನಿಸಿದರು. ಬಡತನದ ನಡುವೆಯೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ, ಕಠಿಣ ಪರಿಶ್ರಮದಿಂದ ಇಂಜಿನಿಯರಿಂಗ್ ಶಿಕ್ಷಣ ಪಡೆದರು. ನೀರಾವರಿ, ಅಣೆಕಟ್ಟು ನಿರ್ಮಾಣ, ಪ್ರವಾಹ ನಿಯಂತ್ರಣ ಹಾಗೂ ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆ ಭಾರತೀಯ ಇಂಜಿನಿಯರಿಂಗ್ ಇತಿಹಾಸದಲ್ಲಿ ಮಹತ್ವದ ಅಧ್ಯಾಯ ಎಂದು ಅಭಿಪ್ರಾಯಪಟ್ಟರು.ಮೈಸೂರು ಸಂಸ್ಥಾನದ ದಿವಾನರಾಗಿದ್ದ ಅವಧಿಯಲ್ಲಿ ಕೈಗಾರಿಕೆ, ಶಿಕ್ಷಣ, ನೀರಾವರಿ, ಬ್ಯಾಂಕಿಂಗ್ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದರು. ಕೆಆರ್‌ಎಸ್ ಅಣೆಕಟ್ಟು ಸೇರಿದಂತೆ ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಅವರ ದೂರದೃಷ್ಟಿ ಮತ್ತು ತಾಂತ್ರಿಕ ಜ್ಞಾನ ಪ್ರೇರಣೆಯಾಯಿತು. ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ವಿವಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿ ಹಲವು ಸಂಸ್ಥೆಗಳ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಅವರ ಸೇವೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರ ಅವರಿಗೆ ಸರ್ ಪದವಿ ನೀಡಿ ಗೌರವಿಸಿತು. ಸ್ವತಂತ್ರ ಭಾರತ ೧೯೫೫ರಲ್ಲಿ ಭಾರತ ರತ್ನ ನೀಡಿ ಅವರ ರಾಷ್ಟ್ರಸೇವೆ ಸ್ಮರಿಸಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಅಂಬರೀಶ್, ಉಪನ್ಯಾಸಕರಾದ ಕೃಷ್ಣ, ವಿಶಾಲ್ ಕುಮಾರ್, ಚಂದನ್, ಪ್ರಜ್ವಲ್, ಚಂದ್ರಿಕಾ, ನಿಶ್ಚಿತಾ, ಅಶ್ವಿನಿ, ಉಷಾ, ನಿಷ್ಕಾ, ಸಿಬ್ಬಂದಿ ರಂಜಿತಾ, ಉಮಾ ಇತರರು ಹಾಜರಿದ್ದರು.
೧೭ಸಿಪಿಟಿ೩:
ಚನ್ನಪಟ್ಟಣದ ದಿ ಆಪಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂಜಿನಿಯರ್ಸ್ ದಿನಾಚರಣೇ ಕಾರ್ಯಕ್ರಮಕ್ಕೆ ಉಪನ್ಯಾಸಕ ಡಾ. ವಿಜಯ್ ರಾಂಪುರ ಚಾಲನೆ ನೀಡಿದರು. ಪ್ರಾಂಶುಪಾಲ ಅಂಬರೀಶ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.