ದಾಬಸ್‍ಪೇಟೆ: ಭಾರತ ದೇಶದ ಸಂಸ್ಕೃತಿಗೆ ಸ್ವಾಮಿ ವಿವೇಕಾನಂದರ ಕೊಡುಗೆ ಅಮೋಘವಾದುದು. ಅವರ ಬದುಕಿನ ಅಂಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಕೇರ್ ಇಂಟರ್ ನ್ಯಾಷನಲ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಅಂಚೆಮನೆ ರಾಜಶೇಖರ್ ಹೇಳಿದರು.
ಪ್ರಾಂಶುಪಾಲೆ ಶಿಲ್ಪಾ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶಗಳು ನಮ್ಮ ಯುವಶಕ್ತಿಗೆ ಅವಶ್ಯಕವಾಗಿದೆ. ವಿವೇಕಾನಂದರು ಹೊಂದಿದ್ದ ಉದ್ದೇಶ ದೇಶಾಭಿಮಾನ, ಶಿಕ್ಷಣದ ಮಹತ್ವ ಮತ್ತು ಸಮಾನತೆಯ ಬಗ್ಗೆ ನೀಡಿರುವ ಸಂದೇಶಗಳು ನಮಗೆ ಮಾರ್ಗದರ್ಶನವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ವೇಷಭೂಷಣ ಧರಿಸಿ ಅವರ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪೋಟೋ 8 :
ದಾಬಸ್‍ಪೇಟೆ ಪಟ್ಟಣದ ವಿಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇಷಭೂಷಣ ಧರಿಸಿರುವುದು.