ವಾಲಿಬಾಲ್ ಪಂದ್ಯಾಟ: ಪಂಜ ಫ್ರೆಂಡ್ಸ್‌ ಫ್ರಥಮ, ಸುರತ್ಕಲ್‌ ಸ್ಟೈಕರ್ಸ್‌ ರನ್ನರ್ಸ್‌ ಅಫ್‌

KannadaprabhaNewsNetwork |  
Published : Jan 13, 2025, 12:47 AM IST
ವೀರಕೇಸರಿ ಟ್ರೊಫಿ-2025  ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ ಪಂಜ ಫ್ರೆಂಡ್ಸ್‌ ಫ್ರಥಮ, ಸುರತ್ಕಲ್‌ ಸ್ತ್ಯೆಕರ್ಸ್‌ ರನ್ನರ್ಸ್‌ ಅಫ್‌  | Kannada Prabha

ಸಾರಾಂಶ

ವೀರಕೇಸರಿ ತಡಂಬೈಲ್ ಸುರತ್ಕಲ್ ನ ಆಶ್ರಯದಲ್ಲಿ ಡಾ|ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ ಮೇಯರ್ ರಜನಿ ದುಗ್ಗಣ್ಣ ಸ್ಮರಣಾರ್ಥ ಸುರತ್ಕಲ್ ಬಂಟರ ಭವನದ ಬಳಿ ನಡೆದ ಪುರುಷರ ಮುಕ್ತ ರಾಷ್ಟ್ರೀಯ ಮಟ್ಟದ ಆಹ್ವಾನಿತ ಆರು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ವೀರಕೇಸರಿ ಟ್ರೋಫಿ-2025 ರಲ್ಲಿ ತಂಡಗಳು ಭಾಗವಹಿಸಿದ್ದು ಪ್ರಥಮ‌ ಬಹುಮಾನವನ್ನು ಪಂಜ ಫ್ರೆಂಡ್ಸ್, ರನ್ನರ್ಸ್ ಅಪ್ ಪ್ರಶಸ್ತಿಯನ್ನು ಸುರತ್ಕಲ್ ಸ್ಟೈಕರ್ಸ್, ತೃತೀಯ ಪ್ರಶಸ್ತಿಯನ್ನು ಐಎಎಮ್ ಟೈಗರ್ ತಂಡ , ಚತುರ್ಥ ಪ್ರಶಸ್ತಿಯನ್ನು ಎಂಎಫ್ ಸಿ ಮುಂಚೂರು ತಂಡ ಪಡೆದುಕೊಂಡಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ವೀರಕೇಸರಿ ತಡಂಬೈಲ್ ಸುರತ್ಕಲ್ ನ ಆಶ್ರಯದಲ್ಲಿ ಡಾ|ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ ಮೇಯರ್ ರಜನಿ ದುಗ್ಗಣ್ಣ ಸ್ಮರಣಾರ್ಥ ಸುರತ್ಕಲ್ ಬಂಟರ ಭವನದ ಬಳಿ ನಡೆದ ಪುರುಷರ ಮುಕ್ತ ರಾಷ್ಟ್ರೀಯ ಮಟ್ಟದ ಆಹ್ವಾನಿತ ಆರು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ವೀರಕೇಸರಿ ಟ್ರೋಫಿ-2025 ರಲ್ಲಿ ತಂಡಗಳು ಭಾಗವಹಿಸಿದ್ದು ಪ್ರಥಮ‌ ಬಹುಮಾನವನ್ನು ಪಂಜ ಫ್ರೆಂಡ್ಸ್, ರನ್ನರ್ಸ್ ಅಪ್ ಪ್ರಶಸ್ತಿಯನ್ನು ಸುರತ್ಕಲ್ ಸ್ಟೈಕರ್ಸ್, ತೃತೀಯ ಪ್ರಶಸ್ತಿಯನ್ನು ಐಎಎಮ್ ಟೈಗರ್ ತಂಡ , ಚತುರ್ಥ ಪ್ರಶಸ್ತಿಯನ್ನು ಎಂಎಫ್ ಸಿ ಮುಂಚೂರು ತಂಡ ಪಡೆದುಕೊಂಡಿತು.ಮಹಿಳಾ ವಿಭಾಗದಲ್ಲಿ ಉಜಿರೆ ಪ್ರಥಮ, ಉಡುಪಿ ದ್ವಿತೀಯ ಪ್ರಶಸ್ತಿ ಪಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಮಧ್ಯಗುತ್ತು ಕರುಣಾಕರ ಶೆಟ್ಟಿ ಯವರು ಕ್ರೀಡೆಯಲ್ಲಿ ನನಗೆ ಬಾಲ್ಯದಿಂದಲೂ ಹೆಚ್ಚಿನ ಆಸಕ್ತಿಯಿದ್ದು ಕ್ರೀಡಾ ಚಟುವಟಿಕೆಗಳಿಗೆ ನನ್ನಿಂದಾದ ಸಹಕಾರ ನೀಡುತ್ತಾ ಬಂದಿದ್ದೇನೆ . ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ವೀರಕೇಸರಿ ಸಂಘಟನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಪರ ಕಾಳಜಿಯೊಂದಿಗೆ ಕೆಲಸ ಮಾಡಲೆಂದು ಹಾರೈಸಿದರು.

ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಮಾತನಾಡಿ, ರಾಜ್ಯದಲ್ಲಿ ಬೇರೆಲ್ಲೂ ನಮ್ಮ ಜಿಲ್ಲೆಯಲ್ಲಿ ನಡೆಯುವಂತೆ ಶಿಸ್ತುಬದ್ಧವಾಗಿ ವಾಲಿಬಾಲ್ ಪಂದ್ಯಾಟ ನಡೆಯುವುದಿಲ್ಲ. ಕೇರಳದಲ್ಲಿ ಕ್ರೀಡಾಕೂಟಗಳು ಸಾಮಾನ್ಯವಾಗಿ ನಡೆಯುತ್ತದೆ. ನಮ್ಮಲ್ಲಿ ಕ್ರೀಡೆಗೆ ಸಹಕಾರ ನೀಡುವವರು ಕಡಿಮೆಯಿದ್ದು ಬಹಳಷ್ಟು ಮಂದಿ ಬೆಂಬಲ ನೀಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ದು ಹೇಳಿದರು.

ಬಿಎಎಸ್ ಎಫ್ ನ ಸೀನಿಯರ್ ಮ್ಯಾನೇಜರ್ ಸಂತೋಷ್ ಪೈ, ವೈದ್ಯ ಶಶಿರಾಜ್ ಶೆಟ್ಟಿ, ಅಂಜನಾ ಎಂ. ಶೆಟ್ಟಿ, ಯಜ್ನೇಶ್ವರ್ ಬರ್ಕೆ, ಉದ್ಯಮಿ ಸತೀಶ್ ಮುಂಚೂರು, ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಮುಂಚೂರು, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲ್, ಜನನಿ ಕನ್ಸ್‌ ಟ್ರಕ್ಸನ್‌ ನ ಮಾಲಕ ಸುಧಾಕರ್ ಪೂಂಜಾ, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಟ್ರಸ್ಟಿ ಸಹನಾ ರಾಜೇಶ್ ರೈ, ಸಂಘಟನೆಯ ಗೌರವಾಧ್ಯಕ್ಷ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷ ಸುಕುಮಾರ್ ತಡಂಬೈಲ್, ಕಾರ್ಯದರ್ಶಿ ರೂಪೇಶ್ ರೈ ಕೈಲಾಸ್ ತಡಂಬೈಲ್, ಪದ್ಮನಾಭ ಕರ್ಕೇರ, ರಾಘವೇಂದ್ರ ಶೆಟ್ಟಿ ತಡಂಬೈಲ್ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಉದ್ಯಮಿ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಶಾಸಕ ಡಾ ವೈ ಭರತ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ , ಪಾಂಡುರಂಗ ಕೆ ಪ್ರಭು ಕೊಡಿಪಾಡಿ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಭಾಗವಹಿಸಿದ್ದರು. ಅನುಪ್ ಶೆಟ್ಟಿ ಸ್ತುತಿಸಿದರು. ಅಶೋಕ್ ಶೆಟ್ಟಿ ತಡಂಬೈಲ್ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್, ಬಿಂದಿಯ ಶೆಟ್ಟಿ, ಅನೂಪ್ ಶೆಟ್ಟಿ, ರಾಮಚಂದ್ರ ಶೆಟ್ಟಿ ತಡಂಬೈಲ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ