ನಾಯಕ ಜನಾಂಗ ಒಮ್ಮತದಿಂದ ಬಿಜೆಪಿಗೆ ಮತಹಾಕಿ: ಶಿವು ವಿರಾಟ್‌

KannadaprabhaNewsNetwork |  
Published : Apr 25, 2024, 01:11 AM IST
24ಸಿಎಚ್ಎನ್‌51ಚಾಮರಾಜನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿರಾಟ್‌ ಶಿವು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ನಾಯಕ ಜನಾಂಗ ಒಮ್ಮತದಿಂದ ಬಿಜೆಪಿಗೆ ಮತ ಹಾಕಿ ಎಸ್‌. ಬಾಲರಾಜುರನ್ನು ಗೆಲ್ಲಿಸಿ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿರಾಟ್‌ ಶಿವು ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಾಯಕ ಜನಾಂಗ ಒಮ್ಮತದಿಂದ ಬಿಜೆಪಿಗೆ ಮತ ಹಾಕಿ ಎಸ್‌. ಬಾಲರಾಜುರನ್ನು ಗೆಲ್ಲಿಸಿ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿರಾಟ್‌ ಶಿವು ಹೇಳಿದರು.

ನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 30ವರ್ಷಗಳಿಂದ ಹೋರಾಟ ಮಾಡುತ್ತಿದ್ದ ತಳವಾರ, ಪರಿವಾರ ಸಮುದಾಯವನ್ನು ಎಸ್ಟಿಗೆ ಸೇರ್ಪಡೆಗೊಳಿಸಿದ ಹಾಗೂ ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಘೋಷಣೆ ಮಾಡಿಸಿದ ಬಿಜೆಪಿ ಪಕ್ಷವನ್ನು ನಾಯಕ ಜನಾಂಗ ಮರೆಯಬಾರದು ಎಂದರು.

ಶ್ರೀರಾಮಮಂದಿರದಲ್ಲಿ ವಾಲ್ಮೀಕಿ ಮೂರ್ತಿಗೆ ಅವಕಾಶ ಮಾಡಿಕೊಟ್ಟ ಮತ್ತು ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರಿಟ್ಟ ಬಿಜೆಪಿ ಪಕ್ಷ ಎಸ್ಟಿ ಸಮುದಾಯದಕ್ಕಿದ್ದ ಮೂರುವರೆ ಪರ್ಸೆಂಟ್‌ ಮೀಸಲಾತಿಯನ್ನು ಏಳುವರೆ ಪರ್ಸೆಂಟ್‌ಗೆ ಹೆಚ್ಚಿಸಿದೆ. ಅಲ್ಲದೇ ಎಸ್ಟಿ ಸಮುದಾಯದ ದ್ರೌಪತಿಮುರ್ಮು ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದೆ ಹಾಗೂ ಬೀರ್ಸಾಮುಂಡ ಅವರ ಜಯಂತಿ ಘೋಷಣೆ ಮಾಡಲಾಗಿದೆ. ಎಲ್ಲಾ ತಾಲೂಕು ಕೇಂದ್ರದಲ್ಲೂ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಿದೆ. ಆದ್ದರಿಂದ ನಾಯಕ ಸಮುದಾಯ ಹೆಚ್ಚಿನ ಮಟ್ಟದಲ್ಲಿ ಬಿಜೆಪಿಗೆ ಮತ ಹಾಕಬೇಕೆಂದರು.

ಕಾಂಗ್ರೆಸ್ ಪಕ್ಷ ನಾಯಕ ಸಮಾಜದ ವೀರ ಮದಕರಿ ನಾಯಕನಿಗೆ ಮೋಸದಿಂದ ವಿಷವನ್ನು ಉಣಿಸಿದ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಆಚರಣೆ ಜಾರಿಗೊಳಿಸಿತ್ತು. ಎಸ್ಇಪಿ, ಟಿಎಸ್‌ಪಿ ಹಣವನ್ನು ಸಮುದಾಯದ ರಸ್ತೆ, ಚರಂಡಿ ಅಭಿವೃದ್ಧಿ ಕಾರ್ಯಗಳಿಗೆ ಬಳಸದೇ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿಗಳಿಗೆ ಬಳಸಿಕೊಂಡು ಸಮುದಾಯಕ್ಕೆ ದ್ರೋಹ ಮಾಡಿದ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಬಿಜೆಪಿ ಪಕ್ಷಕ್ಕೆ ಒಮ್ಮತದಿಂದ ಮತಹಾಕಬೇಕು ಎಂದರು.

ಬಿಜೆಪಿ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿ ಎಸ್‌. ಬಾಲರಾಜು ಒಳ್ಳೇಯ ರಾಜಕಾರಣಿಯಾಗಿದ್ದು, ಸ್ಥಳೀಯರಿಗೆ ಸಿಗುವಂತ ವ್ಯಕ್ತಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ಪಕ್ಷಕ್ಕೆ ಮತಹಾಕಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಿರಣ್‌, ಚಂದ್ರಶೇಖರ್‌, ಮಣಿ, ರವಿ, ಬಸವರಾಜು, ಕಮಲಮ್ಮ ಇದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ