- ಹರಿಹರ ನಗರದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಮನವಿ - - - ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕು ವೀರಶೈವ ಮಹಾಸಭಾ ಮಂಗಳವಾರ ನಗರದ ರೇಣುಕಾ ಮಂದಿರದಲ್ಲಿ ಆಯೋಜಸಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಗೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡರು ಮತಯಾಚನೆ ಮಾಡಿದರು.
ಬಹುತೇಕ ವೀರಶೈವರು ಬಿಜೆಪಿ ಪರ ಎನ್ನಲಾಗುತ್ತಿದೆ. ಆದರೆ ಈ ಚುನಾವಣೆಯಲ್ಲಿ ಸಮಾಜ ಬಾಂಧವರು ಬದಲಾವಣೆ ಬಯಸಿದ್ದಾರೆ. ವೀರಶೈವ ಸಮಾಜ ಎಲ್ಲಾ ಸಮಾಜಗೊಳೊಂದಿಗೆ ಒಗ್ಗೂಡಿ ನಾಡು-ನುಡಿಯ ಅಭಿವೃದ್ಧಿಗೆ ಸಹಕರಿಸುತ್ತಾ ಬಂದಿದೆ. ಆದರೆ, ಬಿಜೆಪಿಯಿಂದ ಆಯ್ಕೆಯಾಗಿದ್ದ ೨೫ ಸಂಸದರು ಒಮ್ಮೆಯೂ ಲೋಕಸಭೆಯಲ್ಲಿ ಮಾತನಾಡಲಿಲ್ಲ. ರಾಜ್ಯದ ಹಿತ ಕಾಯಲಿಲ್ಲ. ಹಾಗಾಗಿ, ಈ ಸಲ ಬಹುತೇಕ ವೀರಶೈವರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದರು.ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ಡಾ. ಪ್ರಭಾ ಕನ್ನಡದ ಜೊತೆ ಇಂಗ್ಲಿಷ್, ಹಿಂದಿ, ಉರ್ದು ನಿರರ್ಗಳವಾಗಿ ಮಾತನಾಡುತ್ತಾರೆ. ಆದ್ದರಿಂದ ಲೋಕಸಭೆಯಲ್ಲಿ ರಾಜ್ಯದ ಪರ ಧ್ವನಿ ಎತ್ತಿ, ಚರ್ಚೆ ನಡೆಸಿ, ರಾಜ್ಯದ ಮತ್ತು ಕ್ಷೇತ್ರದ ಹಿತ ಕಾಯಲಿದ್ದಾರೆ. ಉನ್ನತ ವ್ಯಾಸಾಂಗ ಮಾಡಿ, ವೈದ್ಯರಾಗಿರುವ ಅಲ್ಲದೇ ರಾಜಕೀಯ ಪರಿಣಿತಿಯನ್ನೂ ಪಡೆದಿರುವ ಅವರು ಆಡಳಿತ ನಡೆಸಲು ಸಮರ್ಥರಿದ್ದಾರೆ ಎಂದರು.
- - - -೩೦ಎಚ್‌ಆರ್‌ಆರ್೩: