ಕನ್ನಡಪ್ರಭ ವಾರ್ತೆ ಸುರಪುರ
ನಾವೆಲ್ಲರೂ ಬಿಜೆಪಿಗೆ ಮತ ನೀಡಿ ಮೋದಿಯವರ ಜತೆಗಿದ್ದೇವೆ ಎಂಬುದನ್ನು ತೋರ್ಪಡಿಸಬೇಕಿದೆ ಎಂದರು. ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯಕಗೆ ನೀಡಿ ದೆಹಲಿಗೆ ಕಳುಹಿಸಿಕೊಡಬೇಕು. ಹಾಗೂ ಸಮರ್ಪಕವಾಗಿ ಆಡಳಿತ ನಡೆಯಲು ವಿಧಾನಸಭಾ ಉಪ ಚುನಾವಣೆಯಲ್ಲಿ ನರಸಿಂಹ ನಾಯಕರಿಗೆ ಮತ ನೀಡಬೇಕು ಎಂದರು.
ಈ ಚುನಾವಣೆ ಮೋದಿಯವರಿಗೆ ಪ್ರಮುಖವಾಗಿದ್ದು, ದೇಶ ರಕ್ಷಣೆ ಮತ್ತು ಅಭಿವೃದ್ಧಿಗಾಗಿ, ರೈತರಲ್ಲಿ ಶಕ್ತಿ ತುಂಬಲು, ಯುವಕರಿಗೆ ಉದ್ಯೋಗ, ದಲಿತರು, ಆದಿವಾಸಿಗಳನ್ನು ಅಭಿವೃದ್ಧಿಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಮೋದಿ ಆಡಳಿತ ಅಗತ್ಯವಾಗಿದೆ ಎಂದು ತಿಳಿಸಿದರು.ಸಂಸದ ರಾಜಾ ಅಮರೇಶ ನಾಯಕ ಮಾತನಾಡಿ, ದೇಶವನ್ನು ರಕ್ಷಿಸಿ ಅಭಿವೃದ್ಧಿ ಕಾರ್ಯ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ಆದ್ದರಿಂದ ಪ್ರಧಾನಿ ಮೋದಿಯವರ ಕೈ ಬಲಪಡಿಸಲು ಲೋಕಸಭೆ ಚುನಾವಣೆಯಲ್ಲಿ ನನಗೆ ಮತ್ತು ವಿಧಾನ ಸಭಾ ಉಪಚುನಾವಣೆಯಲ್ಲಿ ರಾಜೂಗೌಡರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ಮಾತನಾಡಿ, ಸುರಪುರ ತಾಲೂಕಿನಲ್ಲಿ 24*7 ಕುಡಿಯುವ ನೀರು ಒದಗಿಸುವ ಕಾರ್ಯ ಮಾಡಲಾಗಿದೆ. ಇಡೀ ರಾಜ್ಯದಲ್ಲಿ ಕುಡಿಯುವ ನೀರಿಗೆ ಬರಗಾಲವಿದ್ದರೂ ಸುರಪುರಕ್ಕೆ ಕುಡಿಯುವ ನೀರಿನ ತೊಂದರೆ ಆಗದಂತೆ ಕೆಲಸ ಮಾಡಿದ್ದೇನೆ ಎಂದರು.ಎರಡು ಬೆಳೆಗೆ ನೀರು ಕೊಡಿಸುವ ಜವಾಬ್ದಾರಿ ನನ್ನದು. ಕೊಡಿಸಲು ಆಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಇಡೀ ಜಿಲ್ಲೆಗೆ ಕುಡಿಯುವ ನೀರಿನ ಕಾಮಗಾರಿಯನ್ನು ಮಾಡಲಾಗಿದ್ದು, ಸಂಸದ ರಾಜಾ ಅಮರೇಶ ನಾಯಕ ಅವರು ಪ್ರಧಾನಿ ನೇತೃತ್ವದಲ್ಲಿ ಮಾಡಿದ್ದಾರೆ. ಆದ್ದರಿಂದ ಲೋಕಸಭಾ ಮತ್ತು ವಿಧಾನ ಸಭೆಯ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅಮೂಲ್ಯವಾದ ಮತ ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ), ಬಿಜೆಪಿ ಮಂಡಲ ಅಧ್ಯಕ್ಷ ವೇಣುಮಾಧವ ನಾಯಕ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.
ಮೊಳಗಿದ ಮೋದಿ ಝೇಂಕಾರ: ಬೆಳಗಿನಿಂದಲೇ ಪ್ರಧಾನಿ ನರೇಂದ್ರ ಮೋದಿ, ನರಸಿಂಹ ನಾಯಕ ರಾಜೂಗೌಡ ಹೆಸರು ಜೋರಾಗಿಯೇ ಮೊಳಗುತ್ತಿತ್ತು. ಪ್ರಚಾರ ಸಂದರ್ಭದಲ್ಲಿ ನಾಯಕರು ಮಾತನಾಡುವ ವೇಳೆ ಕಾರ್ಯಕರ್ತರು ಮೋದಿ.. ಮೋದಿ.. ಮೋದಿ ಅಭಿಮಾನಿಗಳು ಝೇಂಕಾರ ಹಾಕಿದರು.