ತುಮ್ಕೋಸ್‌ ಅಭಿವೃದ್ಧಿಗೆ ನಮ್ಮ ತಂಡಕ್ಕೆ ಮತ ನೀಡಿ

KannadaprabhaNewsNetwork |  
Published : Feb 06, 2025, 12:16 AM IST
ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ತುಮ್ ಕೋಸ್ ಚುನಾವಣಾ ಪ್ರಚಾರ ಸಭೆಯ ಉದ್ಘಾಟನೆಯನ್ನು ನೆರವೇರಿಸಿದ ತುಮ್ ಕೋಸ್ ಸಂಸ್ಥೆಯ ಅಧ್ಯಕ್ಷ ಆರ್.ಎಂ.ರವಿ | Kannada Prabha

ಸಾರಾಂಶ

ಮಧ್ಯ ಕರ್ನಾಟಕದ ಹೆಮ್ಮೆಯ ತುಮ್ಕೋಸ್‌ ಸಂಸ್ಥೆಯಲ್ಲಿ ಷೇರುದಾರ ರೈತರಿಗೆ ದೊರೆಯಬಹುದಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಸಹಕಾರ ನೀಡಿದ್ದೇನೆ ಎಂದು ತುಮ್ಕೋಸ್‌ ಅಧ್ಯಕ್ಷ ಆರ್.ಎಂ.ರವಿ ಹೇಳಿದ್ದಾರೆ.

- ಸಂತೆಬೆನ್ನೂರಲ್ಲಿ ಪ್ರಚಾರ ಸಭೆ ಉದ್ಘಾಟಿಸಿ, ಮತದಾರರಿಗೆ ತುಮ್ಕೋಸ್‌ ಅಧ್ಯಕ್ಷ ಆರ್.ಎಂ.ರವಿ ಮನವಿ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಮಧ್ಯ ಕರ್ನಾಟಕದ ಹೆಮ್ಮೆಯ ತುಮ್ಕೋಸ್‌ ಸಂಸ್ಥೆಯಲ್ಲಿ ಷೇರುದಾರ ರೈತರಿಗೆ ದೊರೆಯಬಹುದಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಸಹಕಾರ ನೀಡಿದ್ದೇನೆ ಎಂದು ತುಮ್ಕೋಸ್‌ ಅಧ್ಯಕ್ಷ ಆರ್.ಎಂ.ರವಿ ಹೇಳಿದರು. ಫೆ.9ರಂದು ತುಮ್ಕೋಸ್‌ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳ ಚುನಾವಣೆ ನಿಮಿತ್ತ ಸಂತೆಬೆನ್ನೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 1984ರಲ್ಲಿ ತಂದೆ ಆರ್.ಎಂ.ಮರುಳಪ್ಪ ಅವರಂಥ ಹಿರಿಯ ಸಹಕಾರಿ ಬಂಧುಗಳು ಸೇರಿಕೊಂಡು ಅಂದಿನ ಸಂಕಷ್ಟದ ದಿನಗಳಲ್ಲಿ ತಾಲೂಕಿನ ರೈತರಿಗೆ ಸಹಾಯಕವಾಗಲಿ ಎಂಬ ಉದ್ದೇಶದಿಂದ ಈ ಸಂಸ್ಥೆ ಸ್ಥಾಪಿಸಿದ್ದರು. ಈ ಸಂಸ್ಥೆ ತಾಲೂಕಿನ ತೋಟಗಾರ ಬೆಳೆಗಾರರಿಗೆ ಅನುಕೂಲವಾಗುವ ಜತೆಗೆ ಪಕ್ಕದ ತಾಲೂಕುಗಳ ರೈತರಿಗೂ ವರದಾನವಾಗಿದೆ ಎಂದು ತಿಳಿಸಿದರು.

ಸಂಸ್ಥೆ ಷೇರುದಾರ ಸದಸ್ಯರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಜೊತೆಗೆ ಸಂಸ್ಥೆ ಸರ್ವತೋಮುಖ ಅಭಿವೃದ್ಧಿಗಾಗಿ ನನ್ನ ನೇತೃತ್ವದಲ್ಲಿ ನಾನು ಸೇರಿದಂತೆ 15 ಜನರು ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ. ನನ್ನ ಟೀಂನಲ್ಲಿರುವ 15 ಸದಸ್ಯರಿಗೂ ತಮ್ಮ ಮತಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ಈ ಸಂಸ್ಥೆಗೆ ಹಾಲಿ ಅಧ್ಯಕ್ಷನಾಗಿದ್ದು, ಒಟ್ಟು 3 ಬಾರಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ, ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ತುಮ್ಕೋಸ್‌ ಸಂಸ್ಥೆ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತೊಮ್ಮೆ ನನ್ನ ಟೀಂನ ಎಲ್ಲರಿಗೂ ಮತ ನೀಡಬೇಕು ಎಂದು ಕೋರಿದರು.

ಸಭೆಯಲ್ಲಿ ಆರ್.ಎಂ.ರವಿ ಅವರ ಟೀಂನ ನಿರ್ದೇಶಕ ಆಕಾಂಕ್ಷಿಗಳಾದ ದಾಗಿನಕಟ್ಟೆ ಒ.ಜಿ. ಕಿರಣ್ ಕುಮಾರ್, ಸುಣಿಗೆರೆ ಎಂ.ಕುಮಾರ್, ನಲ್ಲೂರು ಆರ್.ಕೆಂಚಪ್ಪ, ಪಾಂಡೋಮಟ್ಟಿ ಎಂ.ಯು. ಚನ್ನಬಸಪ್ಪ, ಆಗರಬನ್ನಿಹಟ್ಟಿ ಎ.ಎಂ. ಚಂದ್ರಶೇಖರಪ್ಪ, ಹರೋನಹಳ್ಳಿ ಎಂ.ಸಿ.ದೇವರಾಜ್, ಲಕ್ಷ್ಮೀಸಾಗರ ಬಿ. ನಾಗರಾಜ್, ಕಾಕನೂರು ಆರ್.ಪಾರ್ವತಮ್ಮ, ಹಿರೇಮಳಲಿ ಜಿ.ಆರ್.ಪ್ರೇಮಾ, ಕಗತೂರು ಕೆ.ಜಿ. ಮರುಳಸಿದ್ದಪ್ಪ, ಹೊನ್ನೇಬಾಗಿ ಸಿ.ಮಲ್ಲಪ್ಪ, ಬಿಲ್ಲಹಳ್ಳಿ ಟಿ.ಮಂಜಪ್ಪ, ಅಜ್ಜಿಹಳ್ಳಿ ಆರ್.ಎಂ.ರವಿ, ಕಗ್ಗಿ ಕೆ.ಒ.ಲಿಂಗರಾಜ್, ಮಲಹಾಳ್ ಜೆ.ಎಸ್. ಶಿವಮೂರ್ತಿ ಹಾಜರಿದ್ದರು.

ಸಭೆ ನಂತರ ಸಂತೆಬೆನ್ನೂರು ಗ್ರಾಮದಲ್ಲಿ ಮನೆಮನೆಗೆ ತೆರಳಿ ಮತ ಯಾಚನೆ ಮಾಡಿದರು.

- - -

ಕೋಟ್ ತುಮ್ಕೋಸ್‌ ಸಂಸ್ಥೆಗೆ ಈ ಹಿಂದೆ ನಿರ್ದೇಶಕರ ಚುನಾವಣೆಗಳು ಸದ್ದುಗದ್ದಲವಿಲ್ಲದೇ ನಡೆಯುತ್ತಿದ್ದವು. ಪ್ರಸ್ತುತ ನಡೆಯುತ್ತಿರುವ ಚುನಾವಣೆಯು ಇನ್ನೊಂದು ಟೀಂನವರು ರಾಜಕೀಯ ಪಕ್ಷಗಳ ಎಂ.ಪಿ., ಎಂ.ಎಲ್.ಎ. ಚುನಾವಣೆಯಂತೆ ನಡೆಸುತ್ತಿದ್ದಾರೆ. ಇಂತಹ ಬೆಳವಣಿಗೆ ಸಹಕಾರಿ ಕ್ಷೇತ್ರದಲ್ಲಿ ಬರಬಾರದು. ಸಹಕಾರಿ ಸಂಸ್ಥೆ ಚುನಾವಣೆಯಲ್ಲಿ ರಾಜಕಾರಣಿಗಳು ಕೊಟ್ಟಂತೆ ಆಶ್ವಾಸನೆಗಳನ್ನು ನೀಡಬಾರದು

- ಆರ್.ಎಂ.ರವಿ, ಅಧ್ಯಕ್ಷ, ತುಮ್ಕೋಸ್‌

- - - -5ಕೆಸಿಎನ್‌ಜಿ2.ಜೆಪಿಜಿ:

ಸಂತೆಬೆನ್ನೂರು ಗ್ರಾಮದಲ್ಲಿ ತುಮ್ಕೋಸ್‌ ಆಡಳಿತ ಮಂಡಳಿ ಚುನಾವಣಾ ಪ್ರಚಾರ ಸಭೆ ಉದ್ಘಾಟನೆಯನ್ನು ಅಧ್ಯಕ್ಷ ಆರ್.ಎಂ.ರವಿ ಉದ್ಘಾಟಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ