ಮತದಾನಕ್ಕೂ ಮುನ್ನ ಗೋಪೂಜೆ । ಸ್ವಗ್ರಾಮದ ಶಾಲೆಯಲ್ಲಿ ಹಕ್ಕು ಚಲಾವಣೆ
ಇಂದಿನ ಪ್ರಜಾಪ್ರಭುತ್ವದಲ್ಲಿ ಉತ್ತಮ ಸರ್ಕಾರವನ್ನು ಮತದಾರರೇ ರಚಿಸಿಕೊಳ್ಳುವ ಅವಕಾಶವಿದ್ದು, ರಾಷ್ಟ್ರದ ಅಭಿವೃದ್ಧಿಯ ದಿಕ್ಸೂಚಿ ಮತದಾರರ ಶಕ್ತಿ ಆಗಿದೆ. ಅದ್ದರಿಂದ ಪ್ರತಿಯೊಬ್ಬ ನಾಗರಿಕರು ತಮಗಿರುವ ಅಮೂಲ್ಯವಾದ ಮತವನ್ನು ಜವಾಬ್ದಾರಿಯುತವಾಗಿ ಚಲಾಯಿಸಿ ಎಂದು ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಮನವಿ ಮಾಡಿದರು.
ರಾಮನಾಥಪುರ ಹೋಬಳಿ ಶಾಸಕರ ಸ್ವಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮತದಾನ ಮುನ್ನ ತಮ್ಮ ಮನದೇವರು ದೇವರಹಟ್ಟಿ ಲಕ್ಷ್ಮೀತಾಯಿ, ಹನ್ಯಾಳಮ್ಮ, ಶ್ರೀ ಹನುಮಂತ ದೇವಾಲಯದಲ್ಲಿ ಪೂಜೆ ನಂತರ ತಮ್ಮ ಮನೆಯ ಗೋವುಗಳಿಗೆ ಪೂಜೆ ಮಾಡಿದ ನಂತರ ಮತಗಟ್ಟಗೆ ಭೇಟಿ ನೀಡಿ ಮತದಾನ ಮಾಡಿದರು.ಬಳಿಕ ಮಾತನಾಡಿ, ಮತದಾನದ ಶಕ್ತಿ ಅಪಾರ. ರಾಷ್ಟ್ರದ ದಿಕ್ಕು ಮತ್ತು ಅಭಿವೃದ್ಧಿ ಪಥವನ್ನು ಬದಲಿಸುವಂತಹ ಶಕ್ತಿ ಮತದಾನಕ್ಕಿದೆ. ಆದ್ದರಿಂದ ತಪ್ಪದೇ ಮತಗಟ್ಟೆಗೆ ಮತದಾನ ಮಾಡುವಂತೆ ಮತಬಾಂದವರಲ್ಲಿ ಶಾಸಕ ಎ. ಮಂಜು ಹಾಗೂ ಅವರ ಧರ್ಮಪತ್ನಿ ತಾರಾಮಂಜು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಾರಾ ಮಂಜು, ಹನ್ಯಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುಂಡಣ್ಣ, ಮಂಜಣ್ಣ, ಕಾಳೇಗೌಡ, ವಿಜಯಕುಮಾರ್, ಸಂತೋಷ್, ಶ್ರೀನಿವಾಸ್, ಜಯಣ್ಣ, ಗಂಗೂರು, ಮಂಜಣ್ಣ, ಗ್ರಾಮದ ಮುಖಂಡರು, ಯುವ ಮುಖಂಡರು ಇದ್ದರು.
ರಾಮನಾಥಪುರದ ಶಾಸಕ ಎ.ಮಂಜು ಸ್ವಗ್ರಾಮ ಹನ್ಯಾಳುವಿನಲ್ಲಿ ಮತದಾನ ಮಾಡಿ ಮಾತನಾಡಿದರು.