ಮತದಾರರು ಸಮಗ್ರ ಪರಿಷ್ಕರಣೆಗೆ ಸಹಕಾರ ನೀಡಿ

KannadaprabhaNewsNetwork |  
Published : Jul 25, 2026, 01:30 AM IST
24ಕೆಕೆಡಿಯು2. | Kannada Prabha

ಸಾರಾಂಶ

ಕಡೂರುಮತದಾನದ ಹಕ್ಕಿನಿಂದ ವಂಚಿತರಾಗದೆ ಉಳಿಯಬೇಕೆಂಬ ಮತದಾರರು ಸಮಗ್ರ ಪರಿಷ್ಕರಣೆಗೆ ಸಹಕಾರ ನೀಡಬೇಕು ಎಂದು ಕಾಂಗ್ರೆಸ್ ಎಸ್ಐ ಆರ್ ನ ಕಡೂರು ಪಟ್ಟಣದ ವೀಕ್ಷಕ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಭಂಡಾರಿ ಶ್ರೀನಿವಾಸ್ । 19,20,21ರ ಮೂರು ವಾರ್ಡ್ ಗಳಲ್ಲಿನ ಎಸ್ ಐ ಆರ್ ಪ್ರಕ್ರಿಯೆ

ಕನ್ನಡಪ್ರಭ ವಾರ್ತೆ ಕಡೂರು

ಮತದಾನದ ಹಕ್ಕಿನಿಂದ ವಂಚಿತರಾಗದೆ ಉಳಿಯಬೇಕೆಂಬ ಮತದಾರರು ಸಮಗ್ರ ಪರಿಷ್ಕರಣೆಗೆ ಸಹಕಾರ ನೀಡಬೇಕು ಎಂದು ಕಾಂಗ್ರೆಸ್ ಎಸ್ಐ ಆರ್ ನ ಕಡೂರು ಪಟ್ಟಣದ ವೀಕ್ಷಕ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಸುಭಾಷ್ ನಗರ ವ್ಯಾಪ್ತಿಯ 19,20,21ರ ಮೂರು ವಾರ್ಡ್ ಗಳಲ್ಲಿನ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಮಾತನಾಡಿ ಹಿರಿಯ ನಾಗರಿಕ ಮತದಾರರನ್ನು ಗೌರವಿಸಿ ಮಾತನಾಡಿ ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಸಂಭಂಧಿ ಸಿದಂತೆ ಗಣತಿ ನಮೂನೆ ಫಾರಂಗಳು ಬಿಎಲ್ ಒ ಗಳು ಮತದಾನದ ಹಕ್ಕು ಅಂತಿಮವಾಗಿ ಗಣಕೀಕರಣಗೊಳ್ಳಲಿದೆ.

ಈ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಕೊರತೆ ಉಂಟಾದಲ್ಲಿ ಸ್ಥಳೀಯ ವಾರ್ಡಿನ ಕಾಂಗ್ರೆಸ್ ಪಕ್ಷದ ಬಿಎಲ್ಎ ಗಳ ಮೂಲಕ ಸಂಪರ್ಕ ಪಡೆದು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಖಚಿತಪಡಿಸಿಕೊಳ್ಳಬೇಕು ಎಂದರು.

ವಿಶೇಷವಾಗಿ ಎಸ್ ಐ ಆರ್ ಪ್ರಕ್ರಿಯೆಗೆ ಹಿರಿಯ ನಾಗರೀಕರು ಉತ್ಸುಕರಾಗಿ ಗಣತಿ ನಮೂನೆ ಭರ್ತಿ ಮಾಡಲು ತೊಡಗಿಸಿ ಕೊಂಡಿರುವುದು ಹೆಮ್ಮೆಯ ಸಂಗತಿ. ಹಿರಿಯ ನಾಗರೀಕರಿಗೆ ಎಸ್ ಐ ಆರ್‌ ವಿತರಣೆ ಕಾರ್ಯ ನಡೆಸಿದ್ದಾರೆ. ತಮ್ಮ ವಾರ್ಡ್ ವ್ಯಾಪ್ತಿಯ ಅರ್ಹ ಮತದಾರರು ತಮಗೆ ನೀಡಿರುವ ಗಣತಿ ನಮೂನೆ ಫಾರಂನಲ್ಲಿ ಅಗತ್ಯ ಮಾಹಿತಿಗಳೊಂದಿಗೆ ಭರ್ತಿ ಮಾಡಿ ಕಡ್ಡಾಯವಾಗಿ ಬಿಎಲ್ಒ ಗಳಿಗೆ ತಲುಪಿಸಬೇಕು. ಫಾರಂ ಸ್ವೀಕರಿಸಿದ ಬಳಿಕ ತಮ್ಮ ನಾಗರಿಕರಿಗೆ ಎಸ್ ಐ ಆರ್ ನಲ್ಲಿ ತೊಡಗಿಸಿಕೊಳ್ಳಲು ಪಕ್ಷದಿಂದ ಎಲ್ಲ ರೀತಿ ಸಹಕಾರ ನೀಡಲಾಗುತ್ತದೆ. ಚುನಾವಣೆ ವ್ಯವಸ್ಥೆಯಲ್ಲಿ ಮತದಾನ ಮಹತ್ತರ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ಮತದಾನದ ಹಕ್ಕಿನ‌ ಉಳಿವಿಗೆ ಎಸ್ ಐ ಆರ್ ಪ್ರಕ್ರಿಯೆ ಆಯೋಗ ವಿಶೇಷವಾಗಿ ನಡೆಸಲಾಗುತ್ತಿದೆ‌. ಈಗಾಗಲೇ ಪಕ್ಷದಿಂದ ವೀಕ್ಷಕರಾಗಿ ನಿಯೋಜಿಸಿರುವ ತಮಗೆ ಪಟ್ಟಣದ ವಾರ್ಡ್ ಗಳಲ್ಲಿನ ಸ್ಥಳೀಯ ಮುಖಂಡರ ಸಮನ್ವಯದೊಂದಿಗೆ ಎಸ್ ಐ ಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರು ದೂರ ಉಳಿಯದಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟು ಮತದಾರರನ್ನು ಉಳಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ‌ ಎಂದರು.

ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯೆ ಜ್ಯೋತಿ ಆನಂದ್, ಕಾಂಗ್ರೆಸ್ ಮುಖಂಡರಾದ ಡಿಶ್ ಮಂಜುನಾಥ್, ನಾಗೇಂದ್ರ, ಸಾದಿಕ್, ಅಜ್ಜಯ್ಯ, ಮಂಜುನಾಥ್, ಚಂದ್ರು, ವರುಣ್, ಭುವಿತ್, ಇಲಿಯಾಜ್ ಮತ್ತಿತರರು ಇದ್ದರು.24ಕೆಕೆಡಿಯು2.

ಕಡೂರಿನ ಸುಭಾಷ್ ನಗರದ 21ನೇ ವಾರ್ಡ್ ವ್ಯಾಪ್ತಿಯ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಹಿರಿಯ ನಾಗರಿಕ ವೆಂಕಟಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ಪಟ್ಟಣದ ಎಸ್ ಐ ಆರ್ ವೀಕ್ಷಕ ಭಂಡಾರಿ ಶ್ರೀನಿವಾಸ್ ಗೌರವಿಸಿದರು. ಜ್ಯೋತಿ ಆನಂದ್, ನಾಗೇಂದ್ರ, ಡಿಶ್ ಮಂಜುನಾಥ್, ಅಜ್ಜಯ್ಯ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಗತ್ಯಕ್ಕೆ ಸ್ಪಂದಿಸುವ ಎಐ ಪರಿಹಾರ ರೂಪಿಸಿ
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ತರಬಹಳ್ಳಿ ಮಂಜುನಾಥ್‌